5 ಸ್ಟಾರ್ ಹೋಟೆಲ್ ನಿಂದ ಆಡಳಿತ ನಡೆಸಿದ ಮೊದಲ ಸಿಎಂ ಎಚ್‌ಡಿಕೆ: ಯಡಿಯೂರಪ್ಪ

ಬೆಳಗಾವಿ, ಡಿಸೆಂಬರ್ 10: ಕುಮಾರಸ್ವಾಮಿ ಅವರು ನನ್ನ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ವಿರೋಧ ಪಕ್ಷದ ನಾಯಕರು ಅವರ ಜೀತದಾಳಾಗಿ ಇರಬೇಕು ಎಂದು ಅವರು ಭಾವಿಸಿದಂತಿದೆ ಎಂದು ಯಡಿಯೂರಪ್ಪ ಸಿಟ್ಟಿನಿಂದ ಮಾತನಾಡಿದರು.

ಬೆಳಗಾವಿ ಅಧಿವೇಶನಕ್ಕೆ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು, ಸೊಕ್ಕಿನ, ಧಿಮಾಕಿನ, ದುರಹಂಕಾರದ ಮಾತುಗಳನ್ನು ಬಿಡಬೇಕು ಎಂದು ಯಡಿಯೂರಪ್ಪ ಹೇಳಿದರು.

ಪಂಚತಾರಾ ಹೊಟೆಲ್‌ನಲ್ಲಿ ಕೂತು ಸರ್ಕಾರಿ ಕಡತಗಳನ್ನು ವಿಲೇವಾರಿ ಮಾಡಿದ ದೇಶದ ಏಕೈಕ ಸಿಎಂ ಕುಮಾರಸ್ವಾಮಿ ಎಂದು ವ್ಯಂಗ್ಯವಾಡಿದ ಅವರು, ಜನರಿಗೆ ಸುಲಭವಾಗಿ ಸಿಗುವ ಸಿಎಂ ಎಂದು ತಮ್ಮನ್ನು ತಾವೇ ಹೊಗಳಿಕೊಳ್ಳುವ ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದು ಅವರು ಹೇಳಿದರು.

Kumaraswamy did ruling from 5 star hotel: Yeddyurappa

ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಯಾರೊಬ್ಬರೂ ಹೋಟೆಲ್‍ನಲ್ಲಿ ಕುಳಿತು ಆಡಳಿತ ನಡೆಸಿರಲಿಲ್ಲ. ವಿಧಾನಸೌಧವನ್ನು ಕಟ್ಟಿರುವುದು ಏತಕ್ಕೆ? ಇಡೀ ಆಡಳಿತವನ್ನು ಫೈ ಸ್ಟಾರ್ ಹೋಟೆಲ್‌ಗೆ ವರ್ಗಾಯಿಸುತ್ತಿಲ್ಲವೇಕೆ ಎಂದು ಅವರು ಪ್ರಶ್ನೆ ಮಾಡಿದರು.

ಅಧಿವೇಶನಕ್ಕೆ ತೆರಳುವ ಮುನ್ನಾ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಮತ್ತು ಮುಖಂಡರು ಸುವರ್ಣಸೌಧದ ಎದುರು ಪ್ರತಿಭಟನೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+