ಬೆಳಗಾವಿ: ಶಾಸಕಿ ಅಂಜಲಿ ನಿಂಬಾಳ್ಕರ್ ಕಾರಿಗೆ ಅಪಘಾತ
ಬೆಳಗಾವಿ, ಏಪ್ರಿಲ್ 13: ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದ್ದು, ಗಾಯಗಳೊಂದಿಗೆ ಅಂಜಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ಬಳಿ ಕಾರು ಅಪಘಾತಕ್ಕೆ ಈಡಾಗಿದ್ದು, ಅಪಘಾತದ ಸ್ವರೂಪ ತೀವ್ರವಾಗಿತ್ತು, ಅದೃಷ್ಟವಶಾತ್ ಶಾಸಕಿ ಮತ್ತು ಕಾರಿನಲ್ಲಿದ್ದ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಸಂಬಂಧ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಕಾರಿನೊಂದಿಗೆ ಡಿಕ್ಕಿ ತಪ್ಪಿಸಲು ಕಾರನ್ನು ಪಕ್ಕಕ್ಕೆ ಎಳೆದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಉರುಳಿ ಮೂರು ಪಲ್ಟಿ ಹೊಡೆದು ನಿಂತಿತು.

ಕಾರಿನಲ್ಲಿ ಅಂಜಲಿ ನಿಂಬಾಳ್ಕರ್ ಜೊತೆಗೆ ಡ್ರೈವರ್ ಮಹದೇವಾ, ಗನ್‌ಮನ್ ಸೈಯದ್ ಅವರುಗಳು ಇದ್ದರು, ಮೂವರಿಗೂ ಗಾಯಗಳಾಗಿವೆ. ಅಂಜಲಿ ನಿಂಬಾಳ್ಕರ್ ಅವರಿಗೆ ಕೈ ಹಾಗೂ ತಲೆಗೆ ಗಾಯಗಳಾಗಿವೆ, ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.












Click it and Unblock the Notifications