ಬೆಳಗಾವಿಯಲ್ಲಿ ಬಹಿರ್ದೆಸೆಗೆ ಹೋಗಿದ್ದ 8 ವರ್ಷದ ಬಾಲಕಿ ಸಾವು
ಬೆಳಗಾವಿ, ಏಪ್ರಿಲ್ 9: ಬಹಿರ್ದೆಸೆಗೆ ಹೋಗಿದ್ದ ಎಂಟು ವರ್ಷದ ಬಾಲಕಿಗೆ ಏಕಾಏಕಿ ವಾಂತಿ ಬೇಧಿ ಶುರುವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ಉದ್ಯಮಬಾಗದ ಕೊಳೆಗೇರಿ ಪ್ರದೇಶದಲ್ಲಿ ನಡೆದಿದೆ.
ಎಂಟು ವರ್ಷದ ಅಶ್ವಿನಿ ಪರಶುರಾಮ ಕಾಲೇರಿ ಎಂಬ ಬಾಲಕಿ ನಿನ್ನೆ ಬಹಿರ್ದೆಸೆಗೆ ಹೋಗಿದ್ದಳು. ಅವಳು ಮನೆಗೆ ಬರುತ್ತಿದ್ದಂತೆಯೇ ವಾಂತಿ ಬೇಧಿ ಶುರುವಾಗಿದೆ. ಹೀಗಾಗಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.

ಈ ಬಾಲಕಿ ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ವಿಷಪೂರಿತ ಕೀಟ ಕಚ್ಚಿರಬಹುದು ಅಥವಾ ಈ ಬಾಲಕಿ ವಿಷಪೂರಿತ ಆಹಾರ ಸೇವಿಸಿರಬಹುದು ಎಂದು ಶಂಕಿಸಲಾಗಿದ್ದು ಉದ್ಯಮಬಾಗ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications