• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿಯಲ್ಲಿ ಮಗನನ್ನೇ ಬರ್ಬರವಾಗಿ ಕೊಂದ ತಂದೆ

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಅಕ್ಟೋಬರ್ 7: ಆಸ್ತಿ ವಿವಾದದ ಕಾರಣಕ್ಕೆ ತಂದೆಯೇ, ಮಲಗಿದ್ದ ಮಗನ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖಣದಾಳ ಗ್ರಾಮದಲ್ಲಿ ಇಂದು ನಡೆದಿದೆ.

ಖಣದಾಳ ಗ್ರಾಮದ ಅಲಗೌಡ ಚನ್ನಪ್ಪಾ ಅಂಜುರೆ (38) ಕೊಲೆಯಾದ ವ್ಯಕ್ತಿ. ತಂದೆ ಚನ್ನಪ್ಪಾ ಹಾಗೂ ಮಗ ಅಲಗೌಡ ಚನ್ನಪ್ಪಾ ಅಂಜುರೆ ನಡುವೆ ಜಮೀನು ಹಾಗೂ ಹಣ ಕಾಸಿನ ವಿಚಾರದಲ್ಲಿ ನಿರಂತರವಾಗಿ ಜಗಳ ನಡೆಯುತ್ತಲೇ ಇತ್ತು. ಈ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಇಬ್ಬರ ರಾಜಿ ಸಂಧಾನ ಕೂಡ ನಡೆದಿದೆ.

ಚಾಮರಾಜನಗರ: ಮನೆ ಮಾಲೀಕನನ್ನು ಹತ್ಯೆ ಮಾಡಿದ ಶ್ರೀಗಂಧ ಕಳ್ಳರು

ಆದರೆ ನಿನ್ನೆ ಮತ್ತೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಇಂದು ಬೆಳಗ್ಗೆ ಮಗ ಅಲಗೌಡ ಮಲಗಿದ್ದ ವೇಳೆಯಲ್ಲಿ ತಂದೆ ಚನ್ನಪ್ಪ ಆತನ ತಲೆಯ ಮೇಲೆ ಕಲ್ಲುಎತ್ತಿ ಹಾಕಿದ್ದಾನೆ. ಅಷ್ಟೇ ಅಲ್ಲದೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಚನ್ನಪ್ಪ ಅಂಜುರೆಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Father killed his son for property dispute in Khanadala village in Rayabaga taluk of Belagavi district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X