ಸ್ವಾಮೀಜಿ, ಸಿದ್ದರಾಮಯ್ಯ ಯಾರಾದರೂ ನನ್ನ ಸೋಲಿಸಲಾಗಲ್ಲ: ಸವದಿ ಸವಾಲು
ಅಥಣಿ (ಬೆಳಗಾವಿ), ಜನವರಿ 20 : ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲ್ಲಲಿ, ಮೊಟಗಿ ಮಠದ ಸ್ವಾಮೀಜಿಯೇ ನಿಲ್ಲಲಿ. ಯಾರಿಂದಲೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಶನಿವಾರ ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್ನಲಾದ ಮೊಟಗಿ ಮಠದ ಸ್ವಾಮೀಜಿಗೆ ಟಾಂಗ್ ನೀಡಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ವೈಯಕ್ತಿಕ ವರ್ಚಸ್ಸು ಹಾಗೂ ನಾನು ಮಾಡಿದ ಕೆಲಸಗಳು ಶ್ರೀರಕ್ಷೆ ಆಗಿವೆ. ಕಾಂಗ್ರೆಸ್ ಮುಖಂಡರ ತುತ್ತೂರಿ ಯಾರ ಕಿವಿಗೂ ತಲುಪದು ಎಂದು ಅವರು ವ್ಯಂಗ್ಯವಾಡಿದ್ದಾರೆ. ಒಂದು ವೇಳೆ ಸ್ವಾಮೀಜಿ ರಾಜಕಾರಣ ಮಾಡಬೇಕು ಎಂದಿದ್ದರೆ ಮಠ ಬಿಟ್ಟು ಹೊರ ಗೆಬರಲಿ ಎಂದು ಲಕ್ಷ್ಮಣ ಸವದಿ ಅವರು ಹೇಳಿದರು.

ನಾನು ಜಾತಿ ಆಧಾರದಲ್ಲಿ ಎಂದೂ ರಾಜಕಾರಣ ಮಾಡಿದವನಲ್ಲ ಎಂದ ಅವರು, ನಾನು ಕ್ಷೇತ್ರಕ್ಕಾಗಿ ಮಾಡಿದ ಕೆಲಸದಿಂದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ. ಆದ್ದರಿಂದ ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications