ಮದುವೆಗೆ ಒತ್ತಾಯಿಸಿದ ಪ್ರೇಯಸಿಯನ್ನು ರೈಲಿನಿಂದ ತಳ್ಳಿ ಕೊಂದ ವೈದ್ಯ

ಬೆಳಗಾವಿ, ಮಾರ್ಚ್ 21: ಮದುವೆಗೆ ಒತ್ತಾಯ ಪಡಿಸಿದ ಕಾರಣಕ್ಕೆ ಪ್ರೇಯಸಿಯನ್ನು ಕೊಲೆ ಮಾಡಿದ ಘಟನೆ ಇಲ್ಲಿನ ಖಾನಾಪುರದಲ್ಲಿ ನಡೆದಿದೆ. ಗೋವಾ ಪ್ರವಾಸದ ನೆಪದಲ್ಲಿ ಕರೆತಂದು, ರೈಲಿನಿಂದ ತಳ್ಳಿ ಕೊಲೆ ಮಾಡಲಾಗಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಯುವತಿ ಶವ ಪತ್ತೆಯಾಗಿದೆ.

ಅಸ್ಟೋಳಿ ಗ್ರಾಮದ ರೈಲ್ವೆ ಸೇತುವೆ ಬಳಿ ಪೂನಂ (22) ಶವ ಪತ್ತೆಯಾಗಿದೆ. ಇದೇ ಮಾರ್ಚ್ 15ರಂದು ಶವ ಪತ್ತೆಯಾಗಿದ್ದು, ಪೋಷಕರು ಕೊಲೆ ಆರೋಪ ಮಾಡಿದ್ದಾರೆ. ಪ್ರಕರಣ ಬೆನ್ನಟ್ಟಿದ ಖಾನಾಪುರ ಪೊಲೀಸರು ಕೊಲೆ ಪ್ರಕರಣ ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ

ಬಿಎಚ್ ಎಂಎಸ್ ವೈದ್ಯ ಸುನೀಲ್ ನನ್ನು ಪ್ರೀತಿಸುತ್ತಿದ್ದ ಪೂನಂ, ಮದುವೆ ಆಗುವಂತೆ ಸುನೀಲ್ ನನ್ನು ಒತ್ತಾಯಿಸಿದ್ದಳು. ಅನ್ಯ ಜಾತಿಗೆ ಸೇರಿದ ಕಾರಣಕ್ಕೆ ಪೂನಂಳನ್ನು ಮದುವೆ ಆಗಲು ಸುನೀಲ್ ನಿರಾಕರಿಸಿದ್ದ. ತನ್ನ ಸಹೋದರ ಸಂಜಯ ಜತೆಗೆ ಸೇರಿ ಪೂನಂಳನ್ನು ಮುಗಿಸಲು ಸಹ ಸಂಚು ರೂಪಿಸಿದ್ದ.

Doctor murdered his lover for forcing to marriage

ಗೋವಾ ಪ್ರವಾಸಕ್ಕೆ ತೆರಳುವ ನೆಪದಲ್ಲಿ ಪೂನಂಳನ್ನು ಕರೆತಂದು, ರೈಲಿನಿಂದ ತಳ್ಳಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಖಾನಾಪುರ ಪೊಲೀಸರು ವೈದ್ಯರಾದ ಸುನೀಲ್, ಸಂಜಯನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+