ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ: ಶಿವಸೇನಾ ಮುಖಂಡ
ಬೆಳಗಾವಿ, ಮಾರ್ಚ್ 30: "ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ" ಎನ್ನುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ ಶಿವಸೇನಾ ಮುಖಂಡ ಸಂಜಯ್ ರೌತ್!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಳಗಾವಿ ಕುರಿತ ಕರ್ನಾಟಕ-ಮಾಹಾರಾಷ್ಟ್ರ ನಡುವಿನ ವಿವಾದದ ಕುರಿತು ಮಾತನಾಡಿದ ಅವರು, 'ಬೆಳಗಾವಿಯ ಜನರು ಕರ್ನಾಟಕ ಸರ್ಕಾರದ ಅನ್ಯಾಯದಿಂದ ಬಳಲುತ್ತಿದ್ದಾರೆ' ಎಂದಿದ್ದಾರೆ.
ಬೆಳಗಾವಿಯ ಜನರಿಗೆ ಅಥವಾ ಅಲ್ಲಿನ ಗಡಿ ಪ್ರದೇಶಕ್ಕೆ ಯಾವುದೇ ರೀತಿಯ ಅನ್ಯಾಯವಾದರೂ ಅದು ಇಡೀ ಮಹಾರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ. ಕಾಶ್ಮೀರ, ಕಾವೇರಿ, ಸಟ್ಲೇಜ್ ಅಥವಾ ಬೆಳಗಾವಿ ವಿವಾದಗಳು ಪ್ರಜಾಪ್ರಭುತ್ವದಿಂದ ಪರಿಹಾರವಾಗಿಲ್ಲ ಎಂದರೆ ನಾವು ಹಿಂಸೆಯ ಹಾದಿ ಹಿಡಿಯುತ್ತೇವೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿ ಮತ್ತು ಇತರೆ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡುವುದರಿಂದ ಬೆಳಗಾವಿ ವಿವಾದವನ್ನು ಇತ್ಯರ್ಥಗೊಳಿಸಬಹುದು ಎಂದು ಸಹ ಅವರು ಹೇಳಿದ್ದಾರೆ. ಭಾಷೆಯ ಆಧಾರದ ಮೇಲೆ ಬೆಳಗಾವಿಯನ್ನು ಮಹಾರಾಷ್ಟ್ರದ ಭಾಗ ಎಂದು ಪರಿಗಣಿಸುವಂತೆ ಮಹಾರಾಷ್ಟ್ರದ ಜನ ಎಂದಿದನಿಂದಲೂ ಹೋರಾಟ ನಡೆಸುತ್ತಿದ್ದಾರೆ.












Click it and Unblock the Notifications