• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿಯಲ್ಲಿ 'ಹೊನ್ನಾಳಿ ಹೋರಿ'ಗೆ ತಿವಿದ ಗೋವಿಂದ್ ಕಾರಜೋಳ್

By ಅನಿಲ್ ಬಾಸೂರ್
|

ಬೆಂಗಳೂರು, ಡಿ.22: ಹಾದಿ-ಬೀದಿಯಲ್ಲಿ ನಿಂತು ಮಾತನಾಡುವವರ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಅಂತಾ ಶಾಸಕ ರೇಣುಕಾಚಾರ್ಯ ಅವರಿಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ಕೊಟ್ಟಿದ್ದಾರೆ. ರಾಜ್ಯದಲ್ಲಿನ ಡಿಸಿಎಂ ಹುದ್ದೆಗಳನ್ನು ರದ್ದು ಮಾಡಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾರ್ಯ ಹೇಳಿಕೆ ಕೊಟ್ಟಿದ್ದರು. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಮನವಿ ಕೂಡ ಮಾಡಿದ್ದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಕಾರಜೋಳ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಡಿಸಿಎಂ ಹುದ್ದೆಯ ಬಗ್ಗೆ ನಮ್ಮ ನಾಯಕರು ಹೇಳಿದರೆ ನಾನು ಪ್ರತಿಕ್ರಿಯೆ ಕೊಡುತ್ತೇನೆ. ಯಾರೋ ಹಾದಿ ಬೀದಿಯಲ್ಲಿ ನಿಂತು ಮಾತನಾಡುವವರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ರೇಣುಕಾಚಾರ್ಯ ಅವರಿಗೆ ತಿವಿದಿದ್ದಾರೆ.

ಸಿಎಂ, ಡಿಸಿಎಂ ನಡುವೆ 'ತಂದಿಡುವ' ಎಂ.ಪಿ.ರೇಣುಕಾಚಾರ್ಯ ಹೇಳಿಕೆ

ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿರುವ ಡಿಸಿಎಂ ಕಾರಜೋಳ, ಈ ಭೂಮಿ ಮೇಲೆ ಜನ ಇರುವವರೆಗೆ ಬೆಳಗಾವಿ ಕರ್ನಾಟಕದಲ್ಲಿಯೆ ಇರುತ್ತದೆ. ಯಾವ ಉದ್ಭವ್ ಠಾಕ್ರೆ ಹೇಳಿದ್ರೂ ಅದು ಕನ್ನಡ ನಾಡಾಗಿಯೇ ಇರುತ್ತದೆ ಎಂದು ಉದ್ಧವ್ ಠಾಕ್ರೆಗೆ, ಉದ್ಭವ್ ಠಾಕ್ರೆ ಅಂತಾ ಕರೆಯುವ ಮೂಲಕ ಲೇವಡಿ ಮಾಡಿದ್ದಾರೆ.

ಮಂಗಳೂರು ಗೋಲಿಬಾರ್ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಕಾರಜೋಳ್, ಮಂಗಳೂರು ಗೋಲಿಬಾರ್ ವಿಚಾರದಲ್ಲಿ ಕಾಂಗ್ರೆಸ್ ‌ತನ್ನ ನೀತಿ ಮುಂದುವರೆಸಿದೆ. ಅಮಾಯಕರನ್ನು ಗೋಲಿಬಾರ್ ಮಾಡಿ ನಾವು ಸಾಯಿಸಿಲ್ಲ. ಯಾರು ದೇಶ ದ್ರೋಹ, ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದಾರೆ ಅಂತರವನ್ನು ಹತ್ತಿಕ್ಕಲಾಗಿದೆ ಎಂದಿದ್ದಾರೆ, ಆ ಮೂಲಕ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟುವರು ಅಮಾಯಕರಲ್ಲ ಎಂದು ಕಾರಜೋಳ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಹೆಸರಿನ ಬದಲು ಭಯೋತ್ಪಾದಕ ಪಕ್ಷ ಅಂತ ಇರಬೇಕಿತ್ತು:ರೇಣುಕಾಚಾರ್ಯ

ಸಂಪುಟ ವಿಸ್ತರಣೆ ಕುರಿತು ಮಾತನಾಡಿರುವ ಡಿಸಿಎಂ ಗೋವಿಂದ್ ಕಾರಜೋಳ್, ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದ ಯಾವುದೇ ತೀರ್ಮಾನಗಳು ರಾಷ್ಟ್ರೀಯ ಮಟ್ಟದಲ್ಲಿ ಆಗುತ್ತವೆ. ಸಂಪುಟ ವಿಸ್ತರಣೆ ಕುರಿತು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಂಪುಟ ವಿಸ್ತರಣೆ ಆಗುವವರೆಗೆ ಸ್ವಲ್ಪ ಕಾಯಬೇಕು ಎಂದಿದ್ದಾರೆ.

English summary
DCM Govind Karjol reaction about MLA Renukacharya statement about dcm posts in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X