ಜಾರ್ಜ್ ರಾಜಿನಾಮೆ ಪ್ರಶ್ನೆಗೆ ಸಿದ್ದರಾಮಯ್ಯ ಖಡಕ್ ಉತ್ತರ

ಬೆಳಗಾವಿ, ನವೆಂಬರ್ 13 : ಚಳಿಗಾಲದ ಅಧಿವೇಶನಕ್ಕಾಗಿ ನವೆಂಬರ್ 13 ರ ಸೋಮವಾರ ಬೆಳಗಾವಿಗೆ ಬಂದ ಸಿ.ಎಂ ಸಿದ್ದರಾಮಯ್ಯ ತಮಗೆ ಎದುರಾದ ಮಾಧ್ಯಮದವರು ಕೇಳಿದ 'ಬಿ.ಜೆ.ಪಿ ಅವರು ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದ್ರೆ ಏನ್ ಮಾಡ್ತೀರಿ' ಎಂಬ ಪ್ರಶ್ನೆಗೆ ಖಡಕ್ಕಾಗಿ ಉತ್ತರಿಸಿದ್ದಾರೆ.

ಬಿ.ಜೆ.ಪಿಯ ಸುಮಾರು 25 ಲೋಕಸಭಾ ಸದಸ್ಯರ ಹೆಸರಿನಲ್ಲಿ ಎಫ್.ಐ.ಆರ್ ದಾಖಲಾಗಿದೆ ಅವೆರೆಲ್ಲಾ ರಾಜಿನಾಮೆ ನೀಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ತಾವು ವಿರೋಧ ಪಕ್ಷಗಳ ಎಲ್ಲ ಪಟ್ಟುಗಳಿಗೆ ಪ್ರತಿಪಟ್ಟು ಕಲಿತು ಬಂದಿರುವುದನ್ನು ಸೂಚ್ಯಗೊಳಿಸಿದ್ದಾರೆ.

Chief minister backs K.J.George

ಮುಂದೆ ಮಾತನಾಡಿದ ಮುಖ್ಯಮಂತ್ರಿಗಳು ಈ ಬಿ.ಜೆ.ಪಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಜಾರ್ಜ್ ವಿಷಯವನ್ನು ಎತ್ತುತ್ತಿದ್ದಾರೆ ಅವರಿಗೆ ಸರ್ಕಾರದ ಸಾಧನೆಯ ಬಗ್ಗೆ ಅಸೂಯೆ ಉಂಟಾಗಿರುವ ಕಾರಣ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಬಿ.ಜೆ.ಪಿ ಸದಸ್ಯರು ಮುಖ್ಯವಾಗಿ ಡಿ.ವೈ.ಎಸ್.ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕಣದಲ್ಲಿ ಸಿ.ಬಿ.ಐ ತನಿಖಾ ದಳ ಕೆ.ಜೆ.ಜಾರ್ಜ್ ಅವರ ಮೇಲೆ ಎಪ್.ಐ.ಆರ್ ದಾಖಲಿಸಿರುವುದನ್ನು ಮುನ್ನೆಲೆಗೆ ತಂದು ಜಾರ್ಜ್ ಅವರ ರಾಜಿನಾಮೆಗೆ ಪಟ್ಟುಹಿಡಿಯಲಿದ್ದಾರೆ.

ಸಿದ್ದರಾಮಯ್ಯ ಅವರ ಈ ವಾದ ಬಿ.ಜೆ.ಪಿ ಅವರನ್ನು ಸುಮ್ಮನಾಗಿಸುತ್ತದೆಯೊ ಅಥವಾ ಜಾರ್ಜ್ ತಲೆದಂಡ ಪಡೆಯುವಲ್ಲಿ ಬಿ.ಜೆ.ಪಿ ಸಫಲವಾಗುತ್ತದೆಯೊ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+