ಲಕ್ಷ್ಮಿ ಹೆಬ್ಬಾಳ್ಕರ್‌ಗೆ 30 ಕೋಟಿ ಹಣ ಮತ್ತು ಸಚಿವ ಸ್ಥಾನದ ಆಮಿಷ
Recommended Video

ಬೆಳಗಾವಿ, ಸೆಪ್ಟೆಂಬರ್ 28: ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದರೆ 30 ಕೋಟಿ ಹಣ ಹಾಗೂ ಸಚಿವ ಸ್ಥಾನ ನೀಡುವ ಆಮಿಷವನ್ನು ಬಿಜೆಪಿ ಮುಖಂಡರು ಒಡ್ಡಿದ್ದರು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಈ ವಿಷಯ ತಿಳಿಸಿರುವ ಅವರು, ಮೇ 16,17,18 ರ ನಡುವೆ ನಾವೆಲ್ಲಾ ಕಾಂಗ್ರೆಸ್ ಶಾಸಕರು ಹೈದರಾಬಾದ್‌ನಲ್ಲಿ ಇದ್ದಾಗ ನನಗೆ ಬಿಜೆಪಿ ಮಹಿಳಾ ಮುಖಂಡರೊಬ್ಬರು ಕರೆ ಮಾಡಿ ಹಣದ ಆಮಿಷ ಒಡ್ಡಿದ್ದರು ಎಂದು ಅವರು ಹೇಳಿದ್ದಾರೆ.
30 ಕೋಟಿ ಹಣ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿದ್ದ ಅವರು, ಹಲವು ಸಂದೇಶಗಳನ್ನೂ ಮೊಬೈಲ್‌ಗೆ ಕಳುಹಿಸಿದ್ದರು. ಆದರೆ ನಾನು ಎಲ್ಲ ಸಂದೇಶಗಳು ಹಾಗೂ ಕಾಳ್ ರೆಕಾರ್ಡಿಂಗ್ ಗಳನ್ನು ಆಗಿನ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ನೀಡಿದ್ದೆ ಎಂದು ಲಕ್ಷ್ಮಿ ಅವರು ಹೇಳಿದ್ದಾರೆ.

ಬಿಜೆಪಿ ಕೇಂದ್ರ ಸಚಿವರ ಸತತ ಕರೆ
ಅಷ್ಟೆ ಅಲ್ಲದೆ ಕರ್ನಾಟಕದ ಬಿಜೆಪಿ ಕೇಂದ್ರ ಸಚಿವರೊಬ್ಬರು ಇದೇ ಕಾರಣಕ್ಕಾಗಿ ಅದೇ ಮೇ ಸಮಯದಲ್ಲಿ ನನ್ನ ತಂಗಿಗೆ ಸತತವಾಗಿ ಕರೆ ಮಾಡಿ, ನನ್ನ ಮನವೊಲಿಸುವಂತೆ ಮನವಿ ಮಾಡಿದ್ದರು ಎಂದು ಅವರು ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಎಲ್ಲ ಪ್ರಯತ್ನಗಳು ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸಲು ರಾಜ್ಯಪಾಲರಿಂದ ಸಮಯ ಪಡೆದಿದ್ದ ಅವಧಿಯಲ್ಲಿ ಆಗಿದ್ದು ಎಂದು ಅವರು ಹೇಳಿದ್ದಾರೆ.

ಶಿಸ್ತಿನ ಸಿಪಾಯಿ ನಾನು
ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ನಾನು, ಪಕ್ಷ ನನಗೆ ಸಾಕಷ್ಟು ನೀಡಿದೆ, ನಾನೂ ಸಹ ಪಕ್ಷಕ್ಕೆ ನಿಷ್ಠಳಾಗಿದ್ದೇನೆ ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಬರುವುದಿಲ್ಲವೆಂದು ಬಿಜೆಪಿಯವರಿಗೆ ಸ್ಪಷ್ಟವಾಗಿ ಹೇಳಿದ್ದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.

ಬಿ.ಸಿ.ಪಾಟೀಲ್ ಇತರರಿಗೆ ಬಿಜೆಪಿ ಕರೆ
ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರವಲ್ಲದೆ, ಕಾಂಗ್ರೆಸ್‌ನ ಶಾಸಕರಾದ ಬಿ.ಸಿ.ಪಾಟೀಲ್, ಅನಿಲ್, ನಾಗೇಶ್, ಶಿವಳ್ಳಿ ಮನುಗೋಳ ಇನ್ನೂ ಹಲವು ಶಾಸಕರಿಗೆ ಬಿಜೆಪಿಯವರು ಆಮಿಷಗಳನ್ನು ಒಡ್ಡುತ್ತಲೇ ಇದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೇ ಸಮಯದಲ್ಲಿ ಹೇಳಿದ್ದಾರೆ.

ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ವಿರುದ್ಧ
ಬಿಜೆಪಿಯವರು ಮಾಡುತ್ತಿರುವ ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು, ಅದು ಯಾವುದೇ ಕಾರಣಕ್ಕೂ ಸಫಲವಾಗುವುದಿಲ್ಲ, ಮೈತ್ರಿ ಸರ್ಕಾರವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದೆಯೂ ಹೀಗೆಯೇ ಕಾರ್ಯ ನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications