ಬೆಳಗಾವಿ: ಮೆಚ್ಚಿನ ಅಧಿಕಾರಿ ವರ್ಗ, ನೆನಪುಳಿವ ಬೀಳ್ಕೊಡುಗೆ ನೀಡಿದ ಜನ
ಬೆಳಗಾವಿ, ಜೂನ್ 15: ಬೆಳಗಾವಿಯ ದಂಡು ಮಂಡಳಿಯಲ್ಲಿ ಸಿಇಓ ಆಗಿ ಆಡಳಿತ ನಡೆಸಿದ್ದ ಜನರ ಮೆಚ್ಚಿನ ಅಧಿಕಾರಿ ದಿವ್ಯಾ ಶಿವರಾಂ ಅವರಿಗೆ ವರ್ಗಾವಣೆ ಆಗಿದ್ದು, ಜನರು ಅವರಿಗೆ ವಿಶಿಷ್ಟವಾಗಿ ಬೀಳ್ಕೊಡುಗೆ ನೀಡಿದ್ದಾರೆ.
ಮೆಚ್ಚಿನ ಅಧಿಕಾರಿ ದಿವ್ಯಾ ಶಿವರಾಂ ಅವರಿಗೆ ತೆರದ ಅಲಂಕೃತ ವಾಹನದಲ್ಲಿ ಮೆರವಣಿಗೆ ಮಾಡಿ ಅವರಿಗೆ ಬೀಳ್ಕೊಡುಗೆ ನೀಡಿದ್ದಾರೆ ಬೆಳಗಾವಿಯ ಜನ. ಅಧಿಕಾರಿಗಳೆಂದರೆ ಲಂಚ ಕೋರರು, ಸೋಮಾರಿಗಳು ಎಂದು ಮೂಗು ಮುರಿಯುವ ಜನರೇ ಹೀಗೆ ಅದ್ಧೂರಿ ಮೆರವಣಿಗೆ ಮಾಡಿರುವುದು ಅಪರೂಪದಲ್ಲಿ ಅಪರೂಪ.
ದಿವ್ಯಾ ಶಿವರಾಂ ಅವರಿಗೆ ಪ್ರಧಾನಿ ಕಚೇರಿಗೆ ವರ್ಗಾವಣೆ ಆಗಿದೆ. ಅವರು ಇನ್ನು ಮುಂದೆ ದೆಹಲಿಯ ಪ್ರಧಾನಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಹಾಗಾಗಿ ಅವರಿಗೆ ಈ ಬೀಳ್ಕೊಡುಗೆ ಸಮಾರಂಭ ಇರಿಸಿಕೊಳ್ಳಲಾಗಿತ್ತು.

ತಮ್ಮ ಸಪ್ರೇಮ ನಡವಳಿಕೆ, ಸ್ನೇಹ ಮಯ ಮಾತು, ಭ್ರಷ್ಟಾಚಾರ ರಹಿತ ಕರ್ತವ್ಯದಿಂದ ದಿವ್ಯಾ ಶಿವರಾಂ ಅವರು ಬೆಳಗಾವಿ ಜಿಲ್ಲೆಯಲ್ಲಿ ಅತ್ಯುತ್ತಮ ಅಧಿಕಾರಿಯಾಗಿ ಖ್ಯಾತರಾಗಿದ್ದರು.

ಭಾವುಕರಾದ ದಿವ್ಯಾ ಶಿವರಾಂ
ಮೆರವಣಿಗೆ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಈ ಸಮಯ ದಿವ್ಯಾ ಶಿವರಾಂ ಅವರು ಭಾವುಕರಾದರು. ತಮ್ಮ ಸಹೋದ್ಯೋಗಿಗಳಿಗೆ, ಉನ್ನತ ಅಧಿಕಾರಿಗಳಿಗೆ ಹಾಗೂ ಜನರಿಗೆ ಅವರು ಧನ್ಯವಾದಗಳನ್ನು ತಿಳಿಸಿದರು.

ಪ್ರಧಾನಿ ಕಾರ್ಯಾಲಯಕ್ಕೆ ವರ್ಗಾವಣೆ
ದಿವ್ಯಾ ಶಿವರಾಂ ಅವರು ಕಳೆದ ಮೂರು ವರ್ಷಗಳಿಂದಲೂ ಬೆಳಗಾವಿಯ ದಂಡು ಪ್ರದೇಶದ ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಪ್ರಧಾನಿ ಕಚೇರಿಗೆ ವರ್ಗಾವಣೆ ಆಗಿದೆ.

ಹಲವು ಉತ್ತಮ ಕಾರ್ಯ ಮಾಡಿರುವ ದಿವ್ಯಾ
ದಂಡು ಮಂಡಳಿ ಸಿಇಒ ಆಗಿ ದಿವ್ಯಾ ಶಿವರಾಂ ಅವರು ಹಲವು ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಮಹಿಳಾ ಸ್ವಾವಲಂಬನೆ, ಜೊತೆಗೆ ಚುನಾವಣೆ ಸಮಯದಲ್ಲಿ ಅವರು ಮಾಡಿದ ಕಾರ್ಯವೂ ಮೆಚ್ಚುಗೆಗೆ ಕಾರಣವಾಗಿತ್ತು.

ಸಹೋದ್ಯೋಗಿಗಳ ಮೆಚ್ಚಿನ ಅಧಿಕಾರಿ
ಸಹೋದ್ಯೋಗಿಗಳೊಂದಿಗೂ ಆತ್ಮೀಯ ಸಂಬಂಧ ದಿವ್ಯಾ ಶಿವರಾಂ ದಿಟ್ಟುಕೊಂಡಿದ್ದರು. ದಿವ್ಯಾ ಶಿವರಾಂ ಅವರು ವರ್ಗಾವಣೆ ಕಾರ್ಯಕ್ರಮದಲ್ಲಿ ಜೊತೆಗಾರ ಸಿಬ್ಬಂದಿಗಳು ಭಾವುಕರಾಗಿ ಬೀಳ್ಕೊಡುಗೆ ನೀಡಿದರು.












Click it and Unblock the Notifications