ಬೆಳಗಾವಿ ಅಧಿವೇಶನ: ಪ್ರತಿಭಟನೆ ಬಿಸಿ, ಓಮಿಕ್ರಾನ್ ಭೀತಿ, ಸರ್ಕಾರಕ್ಕೆ ಕಠಿಣ ಪರೀಕ್ಷೆ

ಬೆಳಗಾವಿ, ಡಿಸೆಂಬರ್‌ 12: ಮೂರು ವರ್ಷಗಳ ಬಳಿಕ ಗಡಿ ಜಿಲ್ಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್‌ 13ರಿಂದ ಚಳಿಗಾಲ ಅಧಿವೇಶನ ನಡೆಯಲಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಒಂದೆಡೆ ಅಧಿವೇಶನ ನಡೆಯುವಾಗ ಇನ್ನೊಂದೆಡೆ ಕಲಾಪದಲ್ಲಿ ಪ್ರತಿಪಕ್ಷಗಳ ಸವಾಲಿಗೆ ಉತ್ತರ ನೀಡಲು ಸರ್ಕಾರ ಸಿದ್ಧವಾಗುತ್ತಿದೆ. ಹತ್ತು ದಿನಗಳ ಅಧಿವೇಶನವು ನಡೆಯಲಿದೆ. ಆದರೆ ಈ ನಡುವೆ 40 ಕ್ಕೂ ಅಧಿಕ ಹೆಚ್ಚು ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಪೊಲೀಸ್‌ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಂಡಿದೆ.

2018 ರ ನಂತರ ಬೆಳಗಾವಿಯಲ್ಲಿ ಅಧಿವೇಶನವು ನಡೆಯಲಿದೆ. ಪ್ರವಾಹ, ಕೊರೊನಾ ಕಾರಣದಿಂದಾಗಿ ಬೆಂಗಳೂರಿನಲ್ಲೇ ಅಧಿವೇಶನವನ್ನು ನಡೆಸಲಾಗಿ‌ತ್ತು. ಈಗ ಓಮಿಕ್ರಾನ್‌ ಸೋಂಕಿನ ನಡುವೆ ಡಿಸೆಂಬರ್‌ 13 ರಿಂದ ಡಿಸೆಂಬರ್‌ 24 ರವರೆಗೆ ಚಳಿಗಾಲ ಅಧಿವೇಶನವು ನಡೆಯಲಿದೆ. ವಿರೋಧ ಪಕ್ಷಗಳು ಕೂಡಾ ಸರ್ಕಾರದ ವಿರುದ್ಧ ಚಾಟಿ ಬೀಸಲು ಎಲ್ಲಾ ತಯಾರಿಯನ್ನು ಮಾಡಿಕೊಂಡಿದೆ. ಸೋಮವಾರದಿಂದಲೇ ಹಲವಾರು ಸಂಘಟನೆಗಳು ಪ್ರತಿಭಟನೆಯನ್ನು ನಡೆಸಲಿದೆ.

ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭಗೊಳ್ಳುವ ಅಧಿವೇಶನದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದ್ದಾರೆ. ಬೆಳಗ್ಗೆ 10.30 ಕ್ಕೆ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆ ನಡೆಯಲಿದೆ. ಎಲ್ಲಾ ಪಕ್ಷದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕೂಡಾ ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಎಲ್ಲಾ ಶಾಸಕರಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ. ಎಲ್ಲರೂ ಸಕ್ರಿಯಾವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಿ. ನಿಯಮಾನುಸಾರ ಎಲ್ಲರಿಗೂ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ.

 ಬೆಳಗಾವಿ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸ್ಪೀಕರ್‌ ಮನವಿ

ಬೆಳಗಾವಿ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸ್ಪೀಕರ್‌ ಮನವಿ

ಸಭೆಯಲ್ಲಿ ಚರ್ಚೆ ಮಾಡಿ ಕಾರ್ಯಕಲಾಪದ ವಿವರ ಪಡೆಯಲಾಗುತ್ತೆ. ಸರ್ಕಾರ ಇದುವರೆಗೂ ಯಾವ ಯಾವ ವಿಧೇಯಕಗಳನ್ನು ಮಂಡಿಸಲಿದೆ ಅನ್ನುವುದು ಕಳುಹಿಸಿಲ್ಲ. ಬಿಲ್ ಕಳಿಹಿಸುತ್ತೇವೆ ಎಂದು ಹೇಳಿದ್ದಾರೆ ಇದುವರೆಗೂ ಬಂದಿಲ್ಲ. ನಾಳೆಯೊಳಗೆ ಕಳಿಸ್ತೀವಿ ಅಂತ ಮೌಖಿಕವಾಗಿ ತಿಳಿಸಿದ್ದಾರೆ. ಇನ್ನು ಈ ಅಧಿವೇಶನದಲ್ಲಿ ಎರಡು ದಿನವಾದ್ರು ಉತ್ತರ ಕರ್ನಾಟಕ ಭಾಗದ ವಿಷಯ ಚರ್ಚೆ ಮಾಡಬೇಕು ಅಂತ ಸಲಹೆಗಳು ಬಂದಿದೆ. ನಾವು ಕೊರೊನಾ ಕಾರಣದಿಂದಾಗಿ ಎಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಕಲಾಪವನ್ನು ನಡೆಸಲಾಗುತ್ತದೆ ಎಂದಿದ್ದಾರೆ.

 ಅಧಿವೇಶನ ವೆಚ್ಚ 12 ಕೋಟಿ ರೂ. ಇಳಿಕೆ

ಅಧಿವೇಶನ ವೆಚ್ಚ 12 ಕೋಟಿ ರೂ. ಇಳಿಕೆ

ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನವು ಸುಮಾರು 12 ಕೋಟಿ ರೂ. ವೆ‌ಚ್ಚದಲ್ಲಿ ನಡೆಯಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಸುಮಾರು 4500 ಜನರಿಗೆ ಜಿಲ್ಲಾಡಳಿತ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹತ್ತು ದಿನದ ಚಳಿಗಾಲದ ಅಧಿವೇಶನಕ್ಕಾಗಿ ಸರ್ಕಾರ ಹನ್ನೆರಡು ಕೋಟಿ ಖರ್ಚು ಮಾಡುತ್ತಿದೆ. ಈ ಹಿಂದಿನ ಅಧಿವೇಶನಕ್ಕೆ ಸುಮಾರು 24 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು. ಆದರೆ ಈ ಬಾರಿ ಚಳಿಗಾಲದ ಅಧಿವೇಶನಕ್ಕೆ ಸುಮಾರು 12 ಕೋಟಿ ರೂ. ಮಾತ್ರ ಖರ್ಚು ಮಾಡಲಾಗುತ್ತಿದೆ. ಅಂದರೆ ಸುಮಾರು 12 ಕೋಟಿ ರೂ. ಇಳಿಕೆ ಮಾಡಲಾಗಿದೆ. ರಾಜ್ಯದ ವಿವಿವಧ ಜಿಲ್ಲೆಗಳಿಂದ ಅಧಿವೇಶನ ಭದ್ರತೆಗಾಗಿ ಆಗಮಿಸುತ್ತಿರುವ ಸುಮಾರು 2800 ಪೊಲೀಸ್‌ ಸಿಬ್ಬಂದಿ, ಐನ್ನೂರಕ್ಕೂ ಅಧಿಕ ಪೊಲೀಸ್‌ ಅಧಿಕಾರಿಗಳಿಗೆ ನಗರ ಪೊಲೀಸ್‌ ಆಯುಕ್ತಾಲಯ ವಸತಿ ಸೌಲಭ್ಯ ಕಲ್ಪಿಸುತ್ತಿದೆ.

 ಕಲಾಪದಲ್ಲಿ ಪ್ರತಿಪಕ್ಷ, ಆಡಳಿತ ಪಕ್ಷದ ಅಸ್ತ್ರಗಳು

ಕಲಾಪದಲ್ಲಿ ಪ್ರತಿಪಕ್ಷ, ಆಡಳಿತ ಪಕ್ಷದ ಅಸ್ತ್ರಗಳು

ಅತಿವೃಷ್ಟಿ, ನೆರೆ ಹಾವಳಿ ಪರಿಹಾರ ಕಾರ್ಯ ಹಾಗೂ ಪುನರ್‌ ವ್ಯವಸ್ಥೆ ಸಮರ್ಪಕ ನಿರ್ವಹಣೆಯಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರದಿಂದ ನೆರವು ಬರದಿರುವ ವಿಚಾರ. ಕೃಷ್ಣಾ ಎರಡನೇ ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆ ವಿಳಂಬದಿಂದ ಯುಕೆಪಿ ಮೂರನೇ ಹಂತದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಗಾಲು ವಿಚಾರ, ವಿವಿಧ ಇಲಾಖೆಗಳಲ್ಲಿ 40% ಹಾವಳಿ, ರಾಜ್ಯ ಗುತ್ತಿಗೆದಾರರ ಸಂಘ ನೇರವಾಗಿ ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ಗಂಭೀರ ಆರೋಪಗಳನ್ನು ವಿರೋಧ ಪಕ್ಷ ಮುಂದಿಟ್ಟಿದೆ. ಜೊತೆಗೆ ಬಹುಮುಖ್ಯವಾಗಿ ಬಹುಕೋಟಿ ರೂಪಾಯಿ ಕೈ ಬದಲಾಗಿರುವ ಬಿಟ್‌ಕಾಯಿನ್‌ ಹಗರಣದ ತನಿಖೆಯಲ್ಲಿ ಸರ್ಕಾರದ ನಡೆ ಅನುಮಾನಾಸ್ಪದ, ಪ್ರಭಾವಿಗಳು ಶಾಮೀಲಾಗಿದ್ದಾರೆ ಎಂಬ ಆರೋಪದ ಬಗ್ಗೆ ಪ್ರಮುಖ ಗದ್ದಲ ಎಬ್ಬಿಸಲು ವಿರೋಧ ಪಕ್ಷಗಳು ಮುಂದಾಗಿದೆ. ಈ ನಡುವೆ ಸರ್ಕಾರವು ಅತಿವೃಷ್ಟಿ, ನೆರೆಯಿಂದ ಆದ ನಷ್ಟ ರೈತರಿಗೆ ಪರಿಹಾರ ನೀಡಿದ್ದನು ಮುಂದಿಡಲು ಹಾಗೂ ಕಾಂಗ್ರೆಸ್‌ ಸರ್ಕಾರವೇ ಪರ್ಸಂಟೇಜ್‌ ಸರ್ಕಾರ ನಡೆಸಿದೆ ಎಂಬ ಆರೋಪವನ್ನು ಮಾಡಲು ಸರ್ಕಾರ ಮುಂದಾಗಿದೆ.

Recommended Video

    HD Kumaraswamy : ಯಡಿಯೂರಪ್ಪನಿಗಿರೋ ಸೌಜನ್ಯ ಕಾಂಗ್ರೆಸ್ ನವರಿಗಿಲ್ಲ | Oneindia Kannada
     75 ಸಂಘಟನೆಗಳಿಂದ ಪ್ರತಿಭಟನೆ

    75 ಸಂಘಟನೆಗಳಿಂದ ಪ್ರತಿಭಟನೆ

    ಅಧಿವೇಶನ ಸಂದರ್ಭದಲ್ಲಿ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹ ಮಾಡಿ ಪ್ರತಿಭಟನೆ ಮಾಡಲು ಹಲವಾರು ಸಂಘಟನೆಗಳು ಮುಂದಾಗಿದೆ. ಈ ರೀತಿ ಪ್ರತಿಭಟನೆಗಾಗಿಯೇ ಸರ್ಕಾರವು ಹಲಗಾ ಗ್ರಾಮದ ಸುವರ್ಣ ಉದ್ಯಾನವನದಲ್ಲಿ ಏಳು ಟೆಂಟ್‌, ಕೊಂಡಸಕೊಪ್ಪ ಗ್ರಾಮದಲ್ಲಿ ಒಂದು ಟೆಂಟ್‌ ವ್ಯವಸ್ಥೆ ಮಾಡಿದೆ. ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮಾಡಲು 75 ಸಂಘಟನೆಗಳು ಮುಂದಾಗಿದೆ. ಕೋವಿಡ್‌ ಕಾರಣದಿಂದಾಗಿ ಒಂದು ಟೆಂಟ್‌ನಲ್ಲಿ ಐನ್ನೂರು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಐನ್ನೂರಕ್ಕಿಂತ ಅಧಿಕ ಜನರು ಇದ್ದರೆ ಸುವರ್ಣ ವಿಧಾನಸೌಧ ಸಮೀಪದ ಕೊಂಡಸಕೊಪ್ಪದಲ್ಲಿ ಇನ್ನೊಂದು ದೊಡ್ಡ ಟೆಂಟ್‌ ವ್ಯವಸ್ಥೆ ಮಾಡಲಾಗಿದೆ. ಇನ್ನು ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪರವರ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧ ಮುತ್ತಿಗೆ ಚಳುವಳಿಯ ಬಗ್ಗೆ ಶಿವಮೊಗ್ಗದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಸಂಘವು ಮಾಹಿತಿ ನೀಡಿದೆ.

    ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಮಾಡುವುದು, ಲೋಕಸಭೆಯಲ್ಲಿ ಮಂಡಿಸಿರುವ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ವಾಪಸ್ಸು ಪಡೆಯಬೇಕು, ರೈತರ ಮೇಲಿನ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯಬೇಕು, ಚಳುವಳಿಯಲ್ಲಿ ಮಡಿದ 700ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಪರಿಹಾರ ಕೊಡುವುದು, ಲಂಖೀಪುರ ಖೇರಿ ಘಟನೆಯ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜೇಯ್ ಮಿಶ್ರಾ ಮತ್ತು ಅವರ ಮಗ ಆಶಿಷ್ ಮಿಶ್ರಾ ಅವರ ಮೇಲೆ ಕಾನೂನು ಕ್ರಮ ಜರುಗಿಸುವುದು ಎಂದು ಸಂಘವು ಹೇಳಿದೆ. ನಾಳೆ ನಡೆಯುವ ಅಧಿವೇಶನದಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಸುವರ್ಣ ಸೌಧ ಮುತ್ತಿಗೆ ಹಾಕಲಾಗುತ್ತದೆ. ಕೃಷಿ ಕಾಯ್ದೆ ವಾಪಸ್ ಪಡೆಯುವವರೆಗೆ ನಿರಂತರ ಹೋರಾಟ ಮಾಡುತ್ತೇವೆ. ಸುಮ್ಮನೆ ಕೈ ಕಟ್ಟಿ ಕುಳಿತು ಕೊಳ್ಳುವ ಮಾತೇ ಇಲ್ಲ. ಅರೆಸ್ಟ್ ಮಾಡಿದರೂ ಹೆದರಲ್ಲ. ಹೋರಾಟ ಮುಂದುವರೆಸುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+