Belagavi: ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು
ಬೆಳಗಾವಿ ಏಪ್ರಿಲ್ 4: ಬಡ ಜನರಿಗೆ ನಿವೇಶನ ಹಂಚಲು ಸರ್ಕಾರ ಖರೀದಿಸಿದ್ದ ಜಮೀನು ಭೂಗಳ್ಳ ಪಾಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೈಲಹೊಂಗಲದಲ್ಲಿ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿರುವ ಐದೂವರೆ ಎಕರೆ ಜಮೀನು ಮಾಯವಾಗಿ ಹೋಗಿದೆ. ಇದರಲ್ಲಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರ ಪಾತ್ರವಿರುವ ಶಂಕೆ ವ್ಯಕ್ತವಾಗಿದೆ.
ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ 6 ಎಕರೆ ಜಮೀನನ್ನು 2002ರಲ್ಲಿ ಖರೀದಿ ಮಾಡಲಾಗಿತ್ತು. ಜಮೀನನ್ನು ಬಡ ಜನರಿಗೆ ಹಂಚುವ ಉದ್ದೇಶದಲ್ಲಿ ಸರ್ಕಾರ ಇದನ್ನು ರಾಜ್ಯಪಾಲರ ಹೆಸರಿನಲ್ಲಿ ನೋಂದಣಿ ಮಾಡಿಸಿತ್ತು.

ಆದರೆ ಕೆಲ ಖಾಸಗಿ ವ್ಯಕ್ತಿಗಳು ಇದರಲ್ಲಿ ತಲೆ ಹಾಕಿ ಜಾಮೀನು ಮಾರಾಟ ಮಾಡಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಈ ಗೋಲ್‌ಮಾಲ್ ನಡೆದಿದೆ ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಗಂಭೀರ ಆರೋಪ ಮಾಡಿದ್ದಾರೆ. ಸರ್ವೇ ನಂಬರ್‌ನ ಜಮೀನಿನ ಪಹಣಿ ಪತ್ರ ಸರಿಪಡಿಸುವ ನೆಪದಲ್ಲಿ ಭೂಗಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರ ಹೆಸರಿನಲ್ಲಿ ಇದ್ದ ಆರು ಎಕರೆ ಜಮೀನಿನಲ್ಲಿ 35 ಗುಂಟೆ ಮಾತ್ರ ಉಳಿಸಿಕೊಂಡು ಉಳಿದ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಸೇರ್ಪಡೆ ಮಾಡಲಾಗಿದೆ. ಪಹಣಿ ತಿದ್ದುಪಡಿ ಮಾಡುವ ನೆಪದಲ್ಲಿ ಈ ಭೂಗಳ್ಳತನ ನಡೆದಿದೆ ಎಂದು ಭೀಮಪ್ಪ ದೂರಿದ್ದಾರೆ. ಹೀಗಾಗಿ ತಪ್ಪಿಕಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಇನ್ನೂ ಈ ಅಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತು ಬೈಲಹೊಂಗಲ ಎಸಿ ಪ್ರಭಾವತಿಯವರು ಶಾಮೀಲಾಗಿದ್ದಾರೆ ಎಂದು ಭೀಮಪ್ಪ ಆರೋಪಿಸಿದ ಬೆನ್ನಲ್ಲೆ ಪ್ರತಿಕ್ರಿಯಿಸಿದ ಪ್ರಭಾವತಿ, 'ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಯಾವುದನ್ನೂ ತಿದ್ದುಪಡಿ ಮಾಡಿಲ್ಲ. 2023ರಲ್ಲೇ ನಾನು ಡಿಸಿ ಅವರಿಗೆ ಫೈಲ್ ಕಳುಹಿಸಿದ್ದೇನೆ ಎಂದಿದ್ದಾರೆ.
ಬೇಸಿಗೆಯಲ್ಲಿ ಸಹಾಯ ಮಾಡಿದ ಮಳೆ ನೀರು ಸಂಗ್ರಹ
ಬೆಳಗಾವಿ: ರಾಜ್ಯದಲ್ಲಿ ಬೇಸಿಗೆ ಬಂದರೆ ಸಾಕು ನೀರಿನ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಖಾಸಗಿ ಮ್ಯುಚುವಲ್ ಫಂಡ್ ಸಹಾಯಕ ಉಪಾಧ್ಯಕ್ಷ ಹರೀಶ್ ಸದಾನಂದ ತೇರಗಾಂವಕರ್ ಅವರು ಮುಂದಾಗಿ ಯಶಸ್ವಿಯಾಗಿದ್ದಾರೆ. ತಾವು ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ವರ್ಷ ಮಳೆ ನೀರು ಸಂಗ್ರಹ ಘಟಕ ಅಳವಡಿಸಿ ನೀರಿನ ಸಮಸ್ಯೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಟಿಳಕವಾಡಿಯ ಸೋಮವಾರ ಪೇಟೆಯ 'ಸ್ನೇಹವಾಸ್ತು' ಅಪಾರ್ಟ್‌ಮೆಂಟ್ ನಿವಾಸಿ ಹರೀಶ್ ಮಳೆಗಾಲದಲ್ಲಿ ಟೇರೆಸ್ ಮೇಲೆ ಬಿದ್ದು ವ್ಯರ್ಥವಾಗಿ ಹರಿದುಹೋಗುತ್ತಿದ್ದ ಸುಮಾರು ಮೂರು ಲಕ್ಷ ಲೀಟರ್ ನೀರನ್ನು ಒಂದೆಡೆ ಸೇರಿಸಿ, ನೈಸರ್ಗಿಕ ಫಿಲ್ಟರ್ ಮಾಡುವ ಮೂಲಕ ಬಾವಿಗೆ ಹರಿಸಿ ಬೇಸಿಗೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಜೊತೆಗೆ ಹರೀಶ್ ಅವರು ತಮ್ಮ ಬಡಾವಣೆಯ ಜನರಿಗೆ ಮಳೆ ನೀರು ಸಂಗ್ರಹದ ಬಗ್ಗೆ ಅರಿವು ಮೂಡಿಸಿದ್ದಾರೆ. ಅಲ್ಲದೆ ಇವರನ್ನು ಅನುಸರಿಸಿ ಬಡಾವಣೆ ಹಾಗೂ ವಡಗಾವಿಯ ಸರಾಫ್ ಕಾಲೋನಿಯ ಎಂಟು ಕುಟುಂಬದವರು ತಮ್ಮ ಮನೆ ಹಾಗೂ ಅಪಾರ್ಟ್‌ಮೆಮಟ್‌ಗಳಲ್ಲಿ ಮಳೆ ನೀರು ಸಂಗ್ರಹ ಘಟಕ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.












Click it and Unblock the Notifications