Belagavi Lok Sabha Election 2024 Results: ಬಿಜೆಪಿ vs ಕಾಂಗ್ರೆಸ್, ಯಾರಿಗೆ ಗೆಲುವಿನ ಅದೃಷ್ಟ? ಅಂಶಗಳು
ಬೆಳಗಾವಿ, ಮೇ 26: ಕರ್ನಾಟಕದ ಗಡಿಗೆ ಹೊಂದಿರುವ ರಾಜ್ಯದ ದೊಡ್ಡ ಜಿಲ್ಲೆಯಾಗಿ ಗುರುತಿಸಿಕೊಂಡ ಬೆಳಗಾವಿ ಲೋಕಸಭಾ ಕ್ಷೇತ್ರವೂ ಹೌದು. 2024ರ ಲೋಕಸಭಾ ಚುನಾವಣೆಯ ಮೇ 07ರಂದು ಜರುಗಿದೆ. ಇಲ್ಲಿ ಬರೋಬ್ಬರಿ 71.49 ರಷ್ಟು ಮತದಾನ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಉಂಟಾದ ಕ್ಷೇತ್ರದಲ್ಲಿ ಬೆಳಗಾವಿಯು ಒಂದಾಗಿದೆ. ಹಾಗಾದರೆ ಇಲ್ಲಿ ಗೆಲವು ಯಾರ ಪಾಲಾಗಲಿದೆ? ಬಲವಾದ ಅಂಶಗಳ ವಿಶ್ಲೇಷಣೆ ಇಲ್ಲಿದೆ.
ಲೋಕಸಭಾ ಚುನಾವಣೆ 2024ರ ಫಲಿತಾಂಶ ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಬೆಳಗಾವಿ ಭಾಗದಲ್ಲಿ ಸದ್ಯಕ್ಕೆ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ಕುಟುಂಬದ ಬಲವಾದ ಹಿಡಿತ ಇದೆ. ಸುರೇಶ್ ಅಂಗಡಿಯವರು ಕಾಲವಾದ ಬಳಿಕ ಬಿಜೆಪಿಯ ಪ್ರಭಾವಿ ನಾಯಕರು ಇಲ್ಲಿಲ್ಲದಾಗಿತು. ಇದು ಕಾಂಗ್ರೆಸ್‌ಗೆ ವರದಾನವಾಗುವ ಸಾಧ್ಯತೆ ಇದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಣಕ್ಕಿಳಿದರು. ಒಂದಷ್ಟು ಲಾಭಿ, ದೆಹಲಿ ಓಡಾಟ, ನಿರಂತರ ಸಭೆ ಬಳಿಕ ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಿಕೆಟ್ ಪಡೆದರು.
ಕಾಂಗ್ರೆಸ್‌ನಲ್ಲಿ ಹೆಚ್ಚಾಗಿದೆ ಗೆಲುವಿನ ವಿಶ್ವಾಸ
ಲಿಂಗಾಯತ ಸಮುದಾಯ, ಮತಗಳು ಹೆಚ್ಚಿರುವ ಬೆಳಗಾವಿಯಲ್ಲಿ ಕಾಂಗ್ರೆಸ್ ಈ ಭಾರಿ ಖಾತೆ ತೆರೆಯುವ ವಿಶ್ವಾಸದಲ್ಲಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಈ ಭಾಗದಲ್ಲಿ ವರ್ಚಸ್ಸು ಹೊಂದಿದ್ದಲ್ಲದೇ, ಹಾಲಿ ಸಚಿವೆ. ಪುತ್ರನನ್ನು ಇದೇ ಮೊದಲ ಭಾರಿಗೆ ಕಣಕ್ಕಿಳಿಸಿರುವ ಅವರು ಗೆಲ್ಲಿಸಿಕೊಂಡು ಬರಲೇಬೆಕೆಂಬ ಉದ್ದೇಶದಿಂದ ಅಬ್ಬರ ಪ್ರಚಾರ ಮಾಡಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆದಿಯಾಗಿ ಪ್ರಮುಖರ ಜತೆಗೂಡಿ ಕಾಂಗ್ರೆಸ್ ಗೆಲುವಿಗೆ ರಣತಂತ್ರ ಹೆಣಯಾಗಿತ್ತು. ಪ್ರತಿಯೊಂದು ವೇದಿಕೆಯ ಭಾಷಣದುದ್ಧಕ್ಕೂ ಬಿಜೆಪಿ ಅಭ್ಯರ್ಥಿಯ ಕೊಡುಗೆ ಏನು? ಕೊರೊನಾ ಕಾಲದಲ್ಲಿನ ಒಂದಷ್ಟು ಘಟನೆಗಳನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿವರಿಸಿಕೊಂಡು ಬಂದಿದ್ದಾರೆ.
ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ ಕಾಂಗ್ರೆಸ್
ಅಲ್ಲದೇ ಮೃಣಾಲ್ ಹೆಬ್ಬಾಳ್ಕರ್ ಪರ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಒಲವಿದೆ. ಕಾರ್ಯಕರ್ತರ ಹುಮ್ಮಸ್ಸಿನಿಂದ ಯಾವುದೇ ಒಳ ಬೇಗುದಿ ಇಲ್ಲದೇ ಬೆಂಬಲಿಸಿದ್ದಾರೆ. ಚುನಾವಣೆಗಾಗಿ ತಮ್ಮ ನಾಯಕರ ಸೂಚನೆ ಚಾಚುತಪ್ಪದೇ ಪಾಲಿಸಿದ್ದಾರೆ.
ಅಧಿಕಾರಕ್ಕಾಗಿ ಪಕ್ಷಾಂತರ ಎಂಬ ಹಣೆಪಟ್ಟೆ
ಆದರೆ ಬಿಜೆಪಿಯಲ್ಲಿ ಹಾಗಾಗಿಲ್ಲ. ಪಕ್ಷಾಂತರ ಹಣೆಪಟ್ಟಿ ಹೊತ್ತ ಜಗದೀಶ್ ಶೆಟ್ಟರ್ ಕೊನೆಯ ಕಸರತ್ತಿನಲ್ಲಿ ಬೆಳಗಾವಿ ಟಿಕೆಟ್ ಪಡೆದರು. ಅವರು ಹುಬ್ಬಳ್ಳಿಯಲ್ಲಿ ಶಾಸಕರಾಗಿದ್ದಾಗ ಕೊರೊನಾ ಕಾಲದಲ್ಲಿ ಆಕ್ಸಿಜನ್ ಸೆಂಟರ್ ಅನ್ನು ಬೆಳಗಾವಿಗೆ ಬದಲಾಗಿ ತಮ್ಮ ಕ್ಷೇತ್ರದಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾದರೂ. ಅಧಿಕಾರದ ಆಸೆಗೆ ಪಕ್ಷಾಂತರ ಮಾಡಿದ್ದರು.

ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಯಂತಹ ನಾಯಕರಿಂದ ನೈತಿಕ ಬೆಂಬಲ ಸಿಕ್ಕಿತೆ ಹೊರತು ಖದ್ದು ಶೆಟ್ಟರ್ ಜತೆ ನಿಂತು ಬೆಂಬಲಿಸಲಿಲ್ಲ ಎನ್ನಲಾಗಿದೆ. ಬೆಳಗಾವಿಯಲ್ಲೇ ಶೆಟ್ಟರ್‌ಗೆ ಟಿಕೆಟ್ ನೀಡದಂತೆ ವಿರೋಧ ಕೇಳಿ ಬಂದಿತ್ತು. ಸ್ಥಳೀಯ ನಾಯಕರಿಗೆ ನೀಡಬೇಕೆಂದು ಅಸಮಾಧಾನ ಸಹ ವ್ಯಕ್ತವಾಗಿತ್ತು. ಅಲ್ಲದೇ ಜಗದೀಶ್ ಶೆಟ್ಟರ್ ಶಾಸಕರಿಂದ ಮುಖ್ಯಮಂತ್ರಿವರೆಗೆ ಅಧಿಕಾರ, ಸ್ಥಾನಮಾನ ಅನುಭವಿಸಿದ್ದರು.
ಬೆಳಗಾವಿ: ಶೆಟ್ಟರ್‌ಗೆ ವಿರೋಧ, ಕಾಂಗ್ರೆಸ್‌ಗೆ ಪ್ರತಿಷ್ಠೆ ಕಣ
ಒಂದು ಕಡೆ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಸಿಎಂ ವರೆಗೂ ಸಂಪೂರ್ಣ ಬೆಂಬಲ ಪಡೆದ ಕಾಂಗ್ರೆಸ್ ಅಭ್ಯರ್ಥಿ ಮತ್ತೊಂದೆಡೆ ವ್ಯಾಪಕ ವಿರೋಧದ ನಡುವೆ ಟಿಕೆಟ್ ಪಡೆದ ಶೆಟ್ಟರ್ ಮಧ್ಯದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್ ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದೆ. ಇತ್ತ ಚುನಾವಣೆ ಪ್ರಚಾರದ ವೇಳೆಯೆ ಜಗದೀಶ್ ಶೆಟ್ಟರ್ ಒಬ್ಬಂಟಿತನ ಅನುಭವಿಸಿದ್ದರು. ಇವೆಲ್ಲ ಬೆಳವಣಿಗೆಗಳು ಫಲಿತಾಂಶದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದೇ ಕುತೂಹಲ ಕೆರಳಿಸಿದೆ.
ಹಿಂದಿನ ಚುನಾವಣೆ ಫಲಿತಾಂಶ
ಬೆಳಗಾವಿ ಕ್ಷೇತ್ರ ಬಿಜೆಪಿ ಭದ್ರಕೋಟೆ ಆಗಿದೆ. 2014 ಹಾಗೂ 2019ರಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ದಿ.ಸುರೇಶ್ ಅಂಗಡಿಯವರು ಗೆಲುವು ಸಾಧಿಸಿದ್ದರು. ಅವರ ನಿಧನಾನಂತರ ಅವರ ಪತ್ನಿ ಮಂಗಳಾ ಸುರೇಶ್ ಅಂಗಡಿಯವರು 2021ರಲ್ಲಿ ಉಪ ಚುನಾವಣೆ ನಿಂತು ಅತೀ ಕಡಿಮೆ ಅಂತಗಳಿಂದ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿದ್ದರು.
ಆಗಲೇ ಕಾಂಗ್ರೆಸ್ ಗೆಲುವಿಗೆ ಸನಿಹವಾಗಿತ್ತು. ಈ ಬಾರಿ ಬಿಜೆಪಿಗೆ ಟಿಕೆಟ್ ಹಂಚಿಕೆಯಲ್ಲಿನ ಧೋರಣೆ, ಸ್ಥಳೀಯರ ಮಧ್ಯದ ಭಿನ್ನಾಭಿಪ್ರಾಯ ಕಾಂಗ್ರೆಸ್‌ಗೆ ವರದಾನ ಆದರೂ ಆಗಬಹುದು. ಇದೆಲ್ಲ ಗಮನಿಸಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪಡೆದ ಕಾಂಗ್ರೆಸ್ ತೀವ್ರ ಪೈಪೋಟಿ ಒಡ್ಡಿತ್ತು.
ಕೈ ಅಭ್ಯರ್ಥಿಗೆ ಐದು ಶಾಸಕರ ಬೆಂಬಲ
ಈಗಾಗಲೇ ಬೆಳಗಾವಿಯಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಮೂರರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಚಸ್ಸು ಹೆಚ್ಚಾಗಿದೆ. ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಆಸಿಫ್ ಸೇಠ್, ಮಹಾಂತೇಶ್ ಕೌಜಲಗಿ, ವಿಶ್ವಾಸ ವೈಧ್ಯ, ಅಶೋಕ್ ಮಹಾದೇವಪ್ಪ ಸೇರಿ ಎಲ್ಲ ಕಾಂಗ್ರೆಸ್ ಶಾಸಕರು ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿ ಜೊತೆ ನಿಂತು ಕೆಲಸ ಮಾಡಿದ್ದಾರೆ. ಇದೆಲ್ಲ ಅಂಶಗಳು ಕೈ ಹಿಡಿಯಲಿವೆ ಎಂಬ ನಂಬಿಕೆ ಕಾಂಗ್ರೆಸ್ ನಾಯಕರದ್ದಾಗಿದೆ. ಇದೆಲ್ಲದ್ದಕ್ಕೂ ಲೋಕಸಭಾ ಚುನಾವಣಾ ಫಲಿತಾಂಶವೇ ಉತ್ತರ ಸಿಗಲಿದೆ.












Click it and Unblock the Notifications