ಬೆಳಗಾವಿ: ಅನಾರೋಗ್ಯದಿಂದ ಮನನೊಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಬೆಳಗಾವಿ, ಜೂನ್ 04: ಅನಾರೋಗ್ಯದಿಂದ ಮನನೊಂದು ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಶೈಲೇಶ್‌ ಜೋಶಿ (42) ಅವರು ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಅವರು ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Belagavi: a man who tired by illness commit suicide

ಕುಡಿದ ಮತ್ತಿನಲ್ಲಿ ಸ್ನೇಹಿತನಿಗೇ ಚಾಕು ಇರಿತ
ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತನಿಗೆ ವ್ಯಕ್ತಿಯೊಬ್ಬ ಚಾಕು ಇರಿದಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಕ್ರಿಮ್ಸ್ ಕಾರ್ನರ್‌ ಬಳಿ ಘಟನೆ ನಡೆದಿದ್ದು, ಗಾಯಾಳುವನ್ನು ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೌರಬ್ ಪಿಟಗಿ ಎಂಬ ವ್ಯಕ್ತಿ‌ ಕುಡಿದ ಅಮಲಿನಲ್ಲಿ ಜೊತೆಯಲ್ಲಿದ್ದ ತನ್ನ ಸ್ನೇಹಿತ ಬಸವರಾಜ್ ಬೋಸಲೆ ಎಂಬಾತನಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಗೋಕಾಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸೌರಭ್ ಪಿಟಗಿಗಾಗಿ ಹುಡುಕಾಟ ನಡೆಸಿದ್ದಾರೆ.

ಸರಣಿ ಅಪಘಾತ

Belagavi: a man who tired by illness commit suicide
ಬೆಳಗಾವಿಯಲ್ಲಿ ನಿನ್ನೆ ಸುರಿದ ಜೋರು ಮಳೆಯಿಂದಾಗಿ ಸರಣಿ ಅಪಘಾತ ನಡೆದಿದೆ. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಮಳೆಯಲ್ಲಿ ದಾರಿ ಕಾಣದಾಗಿ ಮೊದಲು ಹೋಂಡಾ ಸಿಟಿ ಕಾರೊಂದು ಬ್ರೇಕ್ ಹಾಕಿದೆ ಕೂಡಲೇ ಅದರ ಹಿಂದೆ ಇದ್ದ ಇನ್ನೋವಾ ಡಿಕ್ಕಿ ಹೊಡೆದಿದೆ, ಇನ್ನೋವಾ ಕಾರಿಗೆ ಟೆಂಪೊ ಒಂದು ಡಿಕ್ಕಿ ಹೊಡೆದಿದೆ. ಟೆಂಪೊಗೆ ಟಿಪ್ಪರ್ ಒಂದು ಡಿಕ್ಕಿ ಹೊಡೆದಿದೆ. ಒಟ್ಟು ನಾಲ್ಕು ವಾಹನಗಳು ಒಂದರ ಹಿಂದೆ ಒಂದು ಡಿಕ್ಕಿ ಹೊಡೆದುಕೊಂಡಿವೆ. ಆದರೆ ಯಾವುದೇ ಪ್ರಾಣ ಹಾಸಿ ಸಂಭವಿಸಿಲ್ಲ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+