Get Updates
Get notified of breaking news, exclusive insights, and must-see stories!

ಕುಮಾರಸ್ವಾಮಿಗೆ ಮತ್ತೆ ಶಾಕ್, ನಾಮಪತ್ರ ಹಿಂಪಡೆದ ಮತ್ತೊಬ್ಬ ಜೆಡಿಎಸ್ ಅಭ್ಯರ್ಥಿ

ಬೆಳಗಾವಿ, ನವೆಂಬರ್ 21: ಜೆಡಿಎಸ್ ನಾಯಕ ಕುಮಾರಸ್ವಾಮಿ ಗೆ ಮತ್ತೆ ಆಘಾತವಾಗಿದ್ದು, ಜೆಡಿಎಸ್‌ನ ಮತ್ತೊಬ್ಬ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಅಥಣಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಗುರಪ್ಪ ದಾಶ್ಯಾಳ ಅವರು ಇಂದು ನಾಮಪತ್ರ ವಾಪಸ್ ಪಡೆದಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಜೊತೆಗೆ ಆಗಮಿಸಿ ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಇದರಿಂದಾಗಿ ಅಥಣಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಇಲ್ಲದಂತಾಗಿದೆ.

ಇಂದೇ ಹಿರೇಕೆರೂರು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರೂ ಸಹ ನಾಮಪತ್ರ ವಾಪಸ್ ಪಡೆದಿದ್ದಾರೆ. ಅಲ್ಲಿಯೂ ಸಹ ಜೆಡಿಎಸ್‌ ಅಭ್ಯರ್ಥಿಗಳು ಇಲ್ಲದಾಗಿದೆ.

ಲಕ್ಷ್ಮಣ ಸವದಿಗೆ ಆಪ್ತರಾಗಿದ್ದ ಗುರಪ್ಪ ದಾಶ್ಯಾಳ

ಲಕ್ಷ್ಮಣ ಸವದಿಗೆ ಆಪ್ತರಾಗಿದ್ದ ಗುರಪ್ಪ ದಾಶ್ಯಾಳ

ಅಥಣಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಗುರಪ್ಪ ದಾಶ್ಯಾಳ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಅತ್ಯಾಪ್ತರಾಗಿದ್ದರು. ಗುರಪ್ಪ ದಾಶ್ಯಾಳ ಅವರ ಮನವೊಲಿಸುವುದಾಗಿ ಸವದಿ ಹೇಳಿದ್ದರು. ಅಂತೆಯೇ ಗುರಪ್ಪ ದಾಶ್ಯಾಳ ಅವರ ಮನವೊಲಿಸಿ ನಾಮಪತ್ರ ಹಿಂತೆಗೆಸುವಲ್ಲಿ ಸಫಲವಾಗಿದ್ದಾರೆ.

ಸವದಿ ಮನವಿ ಮೇರೆಗೆ ನಾಮಪತ್ರ ವಾಪಸ್: ಗುರಪ್ಪ ದಾಶ್ಯಾಳ

ಸವದಿ ಮನವಿ ಮೇರೆಗೆ ನಾಮಪತ್ರ ವಾಪಸ್: ಗುರಪ್ಪ ದಾಶ್ಯಾಳ

ನಾಮಪತ್ರ ವಾಪಸ್ ಪಡೆದ ಬಳಿಕ ಮಾತನಾಡಿದ ಗುರಪ್ಪ ದಾಶ್ಯಾಳ, 'ಇನ್ನು ಮುಂದೆ ಬಿಜೆಪಿಯಲ್ಲಿಯೇ ಮುಂದುವರೆಯುತ್ತೇನೆ' ಎಂದು ಹೇಳಿದರು. 'ನನ್ನ ಸ್ಪರ್ಧೆಯ ಹಿಂದೆ ಸವದಿ ಪಾತ್ರ ಇದೆ ಎಂದು ಹೇಳಲಾಗಿತ್ತು, ಆದರೆ ಅದು ನಿಜವಲ್ಲ, ಸವದಿ ಅವರೂ ಸಹ ನಾಮಪತ್ರ ವಾಪಸ್ ಪಡೆಯುವಂತೆ ಹೇಳಿದ್ದರು, ಅಂತೆಯ ನಾಮಪತ್ರ ಹಿಂಪಡೆದಿದ್ದೇನೆ' ಎಂದರು. ಗುರಪ್ಪ ದಾಶ್ಯಾಳ ಅವರು ಮಾಧ್ಯಮದೊಂದಿಗೆ ಹೆಚ್ಚು ಮಾತನಾಡಲು ಬಿಡದೆ ಒತ್ತಾಯಪೂರ್ವಕವಾಗಿ ಅವರನ್ನು ಕರೆದೊಯ್ಯಲಾಯಿತು.

ಮೂರು ಕ್ಷೇತ್ರದಲ್ಲಿ ಕುಮಾರಸ್ವಾಮಿಗೆ ಆಘಾತ

ಮೂರು ಕ್ಷೇತ್ರದಲ್ಲಿ ಕುಮಾರಸ್ವಾಮಿಗೆ ಆಘಾತ

ಕುಮಾರಸ್ವಾಮಿ ಅವರಿಗೆ ಮೂರು ಕ್ಷೇತ್ರಗಳಲ್ಲಿ ಆಘಾತವಾಗಿದೆ. ಅಥಣಿ ಹಾಗೂ ಹಿರೇಕೆರೂರಿನಲ್ಲಿ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ಕೈಕೊಟ್ಟ ಮತಯಂತ್ರದಲ್ಲಿ ಜೆಡಿಎಸ್ ಚಿಹ್ನೆಯೇ ಇಲ್ಲದಂತೆ ಮಾಡಿದರೆ. ಚಿಕ್ಕಬಳ್ಳಾಪುರದಲ್ಲಿ ಕೊನೆ ಕ್ಷಣದಲ್ಲಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು ಜೆಡಿಎಸ್ ಅಭ್ಯರ್ಥಿ ಬದಲಾದರು. ಉಳಿದಂತೆ ಹೊಸಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಯಾವ ಅಭ್ಯರ್ಥಿಯನ್ನೂ ಕಣಕ್ಕೆ ಇಳಿಸಿಯೇ ಇಲ್ಲ.

ಅಥಣಿ, ಹಿರೇಕೆರೂರಲ್ಲಿ ಪಕ್ಷೇತರರಿಗೆ ಬೆಂಬಲ

ಅಥಣಿ, ಹಿರೇಕೆರೂರಲ್ಲಿ ಪಕ್ಷೇತರರಿಗೆ ಬೆಂಬಲ

ಅಥಣಿ ಹಾಗೂ ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಪಕ್ಷೇತರರಿಗೆ ಬೆಂಬಲಿಸುವುದಾಗಿ ಹೇಳಿದೆಯಾದರೂ ಯಾವ ಪಕ್ಷೇತರರನ್ನು ಬೆಂಬಲಿಸುತ್ತದೆ ಎಂಬುದೇ ಸ್ಪಷ್ಟವಾಗಿಲ್ಲ. ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಮಾತ್ರ ಬಿಗ್ ರಿಲೀಫ್ ದೊರೆತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+