ನಟ ದರ್ಶನ್ ಬಳ್ಳಾರಿ ಜೈಲಲಿದ್ದರು ಬೆಳಗಾವಿ ಜೈಲಿನ ಖೈದಿಗೆ ಸಂಕಷ್ಟ! ಖೈದಿಗಳ ಪ್ರತಿಭಟನೆ
ಬೆಳಗಾವಿ, ಸೆಪ್ಟಂಬರ್ 01: ಕೊಲೆ ಪ್ರಕರಣಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿದ್ದ ನಟ ದರ್ಶನ್ ಗೆ ರಾಜಾತಿಥ್ಯ ನೀಡುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಡಿ.ಗ್ಯಾಂಗ್ ಪ್ರಮುಖ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಿದ್ದ ನಿಮಗೆ ಗೊತ್ತೇ ಇದೆ. ಆದರೆ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಆದರೂ ಸಹಿತ ಬೆಳಗಾವಿ ಜೈಲಲ್ಲಿರುವ ಎಲ್ಲ ಖೈದಿಗಳಿಗೆ ಸಂಕಷ್ಟ ಎದುರಾಗಿದೆ.
ಪರಪ್ಪನ ಅಗ್ರಹದಲ್ಲಿ ನಟ ದರ್ಶನ್ ರೌಡಿ ನಾಗ ಹಾಗೂ ಇನ್ನಿತರರ ಜೊತೆಗೆ ಕೈಲಿ ಸಿಗರೇಟ್, ಟೀ ಮಗ್ಗು ಹಿಡಿದು ಕುಳಿತ ಫೋಟೋಗಳು ವೈರಲ್ ಆಗಿದ್ದವು. ವಿಡಿಯೋಕಾಲ್ ವಿಡಿಯೋ ಸಹ ಸಿಕ್ಕಿದ್ದು, ಇದು ನಟ ದರ್ಶನ್‌ಗೆ ಸಂಕಷ್ಟ ತಂದೊಡ್ಡಿತು. ಅಲ್ಲದೇ ರಾಜ್ಯ ಕಾರಾಗೃಹ ವ್ಯವಸ್ಥೆ ತಲೆ ತಗ್ಗಿಸುವಂತೆ ಮಾಡಿತು.

ದರ್ಶನ್ ರಾಜಾತಿಥ್ಯದಿಂದ ಕಾರಾಗೃಹ ವ್ಯವಸ್ಥೆ ಮುಜುಗರಕ್ಕೆ ಈಡಾಯಿತು. ಈ ಪ್ರಕರಣ ಆದ ನಂತರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಇದಕ್ಕೆ ಬೆಳಗಾವಿ ಹಿಂಡಲಗಾ ಜೈಲು ಹೊರತಾಗಿಲ್ಲ.
ವಿವಿಧ ಜೈಲುಗಳಲ್ಲಿ ಅಲರ್ಟ್
ಜೈಲಿನಲ್ಲಿ ಗಾಂಜಾ, ಸಿಗರೇಟು, ಟೀ, ಕೂರಲು ಚೇರು, ಟಿಫಾಯಿ ಹೀಗೆ ವಿಶೇಷ ಎಲ್ಲ ಸವಲತ್ತುಗಳು ಸಿಗುತ್ತವೆ ಎಂಬ ಮಾಹಿತಿ ಪರಪ್ಪನ ಅಗ್ರಹಾರಕ್ಕೆ ಸಂಬಂಧಿಸಿದ ದರ್ಶನ್ ಫೋಟೋಗಳು ಹೊರ ಬರುತ್ತಿದ್ದಂತೆ ಚರ್ಚೆ ಶುರುವಾಯಿತು. ಈ ಕಾರಣದಿಂದ ಬೆಳಗಾವಿ ಜೈಲಾಧಿಕಾರಿಗಳು ಅಲರ್ಟ್ ಆದ ಕಾರಣ, ಇಲ್ಲಿನ ಖೈದಿಗಳಿಗೆ ಬೀಡಿ, ಸಿಗರೇಟು, ಕೊನೆ ಪಕ್ಷ ತಂಬಾಕು ಸಹ ಸಿಗುತ್ತಿಲ್ಲ ಎಂದು ವರದಿ ಆಗಿದೆ.

ಯಾವದೋ ಒಂದು ಜೈಲಿನಲ್ಲಿ ನಟ ದರ್ಶನ್ ಫೋಟೋ ವೈರಲ್ ಆಗುತ್ತಿದ್ದಂತೆ ರಾಜ್ಯ ಇತರ ಜೈಲಲ್ಲಿ ಅಧಿಕಾರಿಗಳ ಕೈ ಬಿಸಿ ಮಾಡಿಕೊಂಡು ತಂಬಾಕು, ಗುಟಕಾ, ಸಿಗರೇಟಿನಂತಹ ಚಟ ಮಾಡುತ್ತಿರುವವರಿಗೆ ತೊಂದರೆ ಆಗುತ್ತಿದೆ ಎಂದು ವರದಿ ಆಗಿದೆ. ಜೈಲಿನಲ್ಲಿ ಮೊಬೈಲ್ ಬಳಕೆ ಸೇರಿ ಈ ಮೇಲಿನ ಎಲ್ಲವು ತಪ್ಪು ಎನ್ನಲಾಗುತ್ತದೆ. ಆದರೆ ಹಾಳು ಚಟ ಬಿಡದವರು ಗುಪ್ತವಾಗಿ ತಂಬಾಕು ಉತ್ಪನ್ನ ಬಳಸುತ್ತಿದ್ದರು. ಅವರ ಸಂಬಂಧಿಕರು ಭೇಟಿಗೆ ಬಂದಾಗ ನೀಡುವುದು ಸಾಮಾನ್ಯ.
ಜೈಲಿನಲ್ಲಿ ಬೀಡಿ, ಸಿಗರೇಟು, ತಂಬಾಕು ನಿಷೇಧ
ಆದರೆ ನಟ ದರ್ಶನ್ ರಾಜತಿಥ್ಯ ಹಾಗೂ ಆರೋಪಿಗಳ ಸ್ಥಳಾಂತರ ಪ್ರಕರಣ ಹಿನ್ನೆಲೆಯಲ್ಲಿ ಬಳ್ಳಾರಿ, ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧ ಕಾರಾಗೃಹಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಬೆಳಗಾವಿಯ ಹಿಂಡಲಗಾ ಜೈಲಿನೊಳಗೆ ಬೀಡಿ, ಸಿಗರೇಟ್, ತಂಬಾಕು ನಿಷೇಧಿಸಲಾಗಿದೆ.
ಬೆಳಗಾವಿ ಜೈಲು ಖೈದಿಗಳಿಂದ ಪ್ರತಿಭಟನೆ
ಬೆಳಗಾವಿ ಹಿಂಡಲಗಾ ಜೈಲಿನ ಸಿಬ್ಬಂದಿ ಜೈಲಾಧಿಕಾರಿಗಳ ಖಡಕ್ ನಿರ್ಧಾರದಿಂದ ಕಂಗೆಟ್ಟ ಖೈದಿಗಳು ಪ್ರತಿಭಟನೆ ಮಾಡಿದ್ದಾರೆ.
ಬೀಡಿ, ಸಿಗರೇಟ್, ತಂಬಾಕು ನೀಡುವಂತೆ ಪಟ್ಟು ಹಿಡಿದು ಖೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಊಟ, ಉಪಹಾರ, ಬಿಟ್ಟು ಕೈದಿಗಳ ಪ್ರತಿಭಟಿಸಿದ್ದಾರೆ. ಇದರಿಂದ ಎಚ್ಚೆತ್ತ ಜೈಲು ಅಧಿಕಾರಿಗಳು ಹೈರಾಣಾಗಿದ್ದಾರೆ.
ಬೀಡಿ, ಸಿಗರೇಟ್, ತಂಬಾಕು ಕೊಡುವವರಗೆ ನಾವು ತಿಂಡಿ ತಿನ್ನವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೊಂದು ರೀತಿಯಲ್ಲಿ ಹಿಂಡಲಗಾ ಜೈಲಿನ ಅಧಿಕಾರಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಇಲಾಖೆಯ ಸೂಚನೆ ಪಾಲಿಸಬೇಕಾ? ಇಲ್ಲವೇ ಮೊದಲಿನಂತೆ ಖೈದಿಗಳನ್ನು ಸಂತೈಸಬೇಕಾ ಎಂಬ ಗೊಂದಲದಲ್ಲಿದ್ದಾರೆ.
ಸದ್ಯ ರಾಜ್ಯ ಗೃಹ ಇಲಾಖೆಗೆ ಹಾಗೂ ಜೈಲು ಸುಧಾರಣಾ ವ್ಯವಸ್ಥೆಗೆ ಜೈಲಾಧಿಕಾರಿಗಳ ಪ್ರತಿಭಟನೆಯು ಹೊಸ ತಲೆನೋವಾಗಿದೆ. ಇದೇ ರೀತಿ ಬೇರೆ ಬೇರೆ ಜೈಲುಗಳಲ್ಲಿಯು ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಹಿಂಡಲಗಾ ಜೈಲಿನಲ್ಲಿ ಮಾತ್ರ ಇಂತಹ ಬೆಳವಣಿಗೆ ನಡೆದಿದೆ.












Click it and Unblock the Notifications