Get Updates
Get notified of breaking news, exclusive insights, and must-see stories!

ವೈಯಕ್ತಿಕ ವೈಷಮ್ಯದಿಂದ ಯುವಕನ ಮೇಲೆ ಆಸಿಡ್ ಎರಚಿದ ಮಹಿಳೆ

Recommended Video

      ಬೆಳಗಾವಿಯಲ್ಲಿ ವೈಯುಕ್ತಿಕ ದ್ವೇಷದಿಂದ ಯುವಕನ ಮೇಲೆ ಆಸಿಡ್ ಅಟ್ಯಾಕ್ ಮಾಡಿದ ಮಹಿಳೆ | Oneindia Kannada

      ಬೆಳಗಾವಿ, ಮೇ 29: ವೈಯಕ್ತಿಕ ವೈಷಮ್ಯ ಹಿನ್ನೆಲೆ ಮಹಿಳೆಯೊಬ್ಬಳು ಯುವಕನ ಮೇಲೆ ಆಸಿಡ್ ದಾಳಿ ನಡೆಸಿದ್ದಾಳೆ. ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಅರ್ಚಕ ರಾಮಾ ಪೂಜಾರಿ ಸಹೋದರಿ ಮಾಧವಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಪ್ರಥಮೇಶ್ ಎಂಬ ಯುವಕನ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದಾಳೆ.

      ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಅರ್ಚಕನ ಮಗ ಗೋಪಾಲ್ ಅವರನ್ನು ಅರೆಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಅರ್ಚಕ ರಾಮಾ ಪೂಜಾರಿಯ ಮಗ ಕಪಿಲೇಶ್ವರ ದೇವಸ್ಥಾನದಲ್ಲಿ ಯುವತಿಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ಪ್ರಥಮೇಶ್ ನೋಡಿದ್ದನು.

      ಅಲ್ಲದೇ ಪೂಜಾರಿ ಮಗನ ಕೃತ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನೇ ಸಾಕ್ಷ್ಯವಾಗಿ ಇಟ್ಟುಕೊಂಡಿದ್ದ ಪ್ರಥಮೇಶ್ ಮತ್ತು ಸ್ನೇಹಿತರು ರಾಮಾ ಪೂಜಾರಿ ಕುಟುಂಬ ದೇವಸ್ಥಾನಕ್ಕೆ ಬಾರದಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

      A woman attacked a young man on a Personal hatred.

      ಆಗ ನ್ಯಾಯಾಲಯ, ಅರ್ಚಕ ರಾಮಾ ಪೂಜಾರಿ ಕುಟುಂಬದವರು ದೇವಸ್ಥಾನ ಪ್ರವೇಶಿಸದಂತೆ ಆದೇಶ ನೀಡಿತ್ತು. ಅದೇ ದ್ವೇಶವಿಟ್ಟುಕೊಂಡು ರಾಮಾ ಪೂಜಾರಿ ಸಹೋದರಿ ಮಾಧವಿ ಈ ಕೃತ್ಯವೆಸಗಿದ್ದಾಳೆ. ಅದೃಷ್ಟವಶಾತ್ ಪ್ರಥಮೇಶ್ ಗೆ ಕೈ ಮೇಲೆ ಗಾಯವಾಗಿದೆ. ಇನ್ನಾವುದೇ ಗಂಭೀರ ಗಾಯವಾಗಿಲ್ಲ.

      ಈ ಸಂಬಂಧ ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+