Get Updates
Get notified of breaking news, exclusive insights, and must-see stories!

ನಮ್ಮ ಮೆಟ್ರೋ ಮೇಲೆ ಹಿಂದಿ ಹೇರಿಕೆ ಏಕೆ?

ಬೆಂಗಳೂರಿನ ಮೆಟ್ರೋದಲ್ಲಿ ಹಿಂದಿ ಹೇರಿಕೆ ಯಾಕೆ ಮಾಡುತ್ತಿದ್ದೀರಾ? ಯಾವ ಆಧಾರದ ಮೇಲೆ ಭಾಷಾ ನೀತಿ ನಿರ್ಧರಿಸಿದ್ದೀರಾ ಅಂತ ಮೆಟ್ರೋಗೆ ನಮ್ಮ ಗೆಳೆಯರು ಆರ್.ಟಿ.ಐ ಹಾಕಿದಾಗ, ಉತ್ತರ ಕೊಡಲು 6 ತಿಂಗಳಿಗೂ ಹೆಚ್ಚು ಕಾಲ ಸತಾಯಿಸಿದ ಮೇಲೆ ಮೊದಲು ಕೇಂದ್ರ ಸರ್ಕಾರ ರಸ್ತೆ ನಿಯಮಗಳ ಅನ್ವಯ ಹಿಂದಿ ಹಾಕಿದೀವಿ ಅಂದ್ರು.

ಆದ್ರೆ ನಗರದೊಳಗಿನ ಮೆಟ್ರೋಗೆ ಈ ನಿಯಮ ಅನ್ವಯ ಆಗಲ್ವಲ್ಲ ಅಂದಾಗ ಕೆಲ ದಿನದಲ್ಲಿ ಇಲ್ಲ, ರಾಜ್ಯ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಹಿಂದಿ ಹಾಕಿದೀವಿ ಅಂದ್ರು. ಹೌದಾ, ಎಲ್ಲಿ ಯಾವ ಗೆಜೆಟ್ ನೋಟಿಫಿಕೇಶನ್ ಸ್ವಲ್ಪ ಕೊಡಿ ಅಂದಾಗ ಮತ್ತೆ ಉತ್ತರ ಬದಲಾಯಿಸಿ, ಇಲ್ಲ ಇದು ಮೆಟ್ರೋದ ಬೋರ್ಡಿನ ನಿರ್ಧಾರ ಅಂದ್ರು.

ಮೆಟ್ರೋ ಬೋರ್ಡಿನ ನಿರ್ಧಾರಗಳ ವಿವರ ಆರ್.ಟಿ.ಐ ವ್ಯಾಪ್ತಿಗೆ ಬರಲ್ಲ ಅಂತ ಗೊತ್ತಾದ ಮೇಲೆ ಆ ಉತ್ತರ ಕೊಟ್ಟಿದ್ದು. ರಾಜ್ಯ ಸರ್ಕಾರದ ಸಾರಿಗೆ ವ್ಯವಸ್ಥೆಯೊಂದು ರಾಜ್ಯ ಸರ್ಕಾರದ ಭಾಶಾ ನೀತಿ ಬಳಸದೇ ತನ್ನ ಮನಸಿಗೆ ಬಂದ ಭಾಷಾ ನೀತಿ ಜಾರಿಗೆ ತಂದಿದ್ದು ಹೀಗೆ. ಪ್ರಯಾಣಿಕರ ಅನುಕೂಲಕ್ಕೆ ಹಿಂದಿ ಹಾಕಿದೀವಿ ಅಂತಲೂ ಅಂದ್ರು. ಆದರೆ ಬೆಂಗಳೂರಿನಲ್ಲಿ ಕನ್ನಡಿಗರ ನಂತರ ಹೆಚ್ಚಿನ ಸಂಖ್ಯಯಲ್ಲಿರುವುದು ತಮಿಳು, ತೆಲುಗು, ಉರ್ದು ಭಾಷಿಕರು. ಆ ನುಡಿಯಲ್ಲಿ ಹಾಕದೇ ಹಿಂದಿ ಹಾಕಿದ್ದು ಹೇರಿಕೆಯಲ್ಲದೇ ಇನ್ನೇನು? ಚೆನ್ನೈ, ಕೊಲ್ಕತಾ, ದೆಹಲಿ ಎಲ್ಲ ಕಡೆ ಮೆಟ್ರೊದಲ್ಲಿ ಎರಡು ಭಾಷೆಯ ನೀತಿ ಇರುವಾಗ ಇಲ್ಲಿ ಮಾತ್ರ ಮೂರು ಸೇರಿಸುವುದು ಹೇರಿಕೆಯಲ್ಲದೇ ಇನ್ನೇನು?

Why BMRCL is imposing Hindi in Namma Metro

ಯಾವುದೇ ಊರಿನ ಸಾರಿಗೆ ವ್ಯವಸ್ಥೆ ಒಂದು ರೀತಿಯಲ್ಲಿ ಆ ಊರಿನ ಮುಖವಾಣಿಯಂತೆ ಇರುತ್ತೆ. ಅಲ್ಲಿಗೆ ಬರುವ ಪ್ರಯಾಣಿಕನಿಗೆ, ಪ್ರವಾಸಿಗನಿಗೆ ಆ ಊರು, ಅಲ್ಲಿನ ಜನರ ಭಾಷೆ, ಅಲ್ಲಿನ ಜನ ಜೀವನ ಎಲ್ಲವನ್ನು ಒಂದು ರೀತಿಯಲ್ಲಿ ಪರಿಚಯಿಸುವ ಕನ್ನಡಿಯಾಗಿರುತ್ತೆ. ಬಿ.ಎಂ.ಟಿ.ಸಿಯ ನಂತರ ಈಗ ಬೆಂಗಳೂರಿನ ಸಾರಿಗೆ ಮೂಲಭೂತ ಸೌಕರ್ಯದ ಚಹರೆಯನ್ನೇ ಬದಲಾಯಿಸುವ ಹೊಸ ವ್ಯವಸ್ಥೆಯಾಗಿ ನಮ್ಮ ಮೆಟ್ರೋ ನಗರ ರೈಲು ಸಾರಿಗೆ ಶುರುವಾಗಿ ವರ್ಷಗಳೆ ಕಳೆದಿದೆ.

ಹೆಚ್ಚು ಕಡಿಮೆ 30 ವರ್ಷಗಳ ಕಾಲದಿಂದ ಇಂತಹದೊಂದು ವ್ಯವಸ್ಥೆಯ ಬಗ್ಗೆ ಹಲವಾರು ನಾಯಕರು, ಸರ್ಕಾರಗಳು, ನಟ ಶಂಕರ್ ನಾಗ್ ನಂತಹ ಕನಸುಗಾರ ಕನ್ನಡಿಗರು ಕಂಡ ಕನಸು ನನಸಾಗುವ ಮೊದಲ ಹಂತವಾಗಿ ಇದು ಬಂದಿದೆ. ತುಂಬಾ ಸಂತಸದ ವಿಚಾರವೇ ಸರಿ. ನಮ್ಮ ಮೆಟ್ರೋದಲ್ಲಿ ನಮ್ಮತನದ ಅಚ್ಚು ಒತ್ತಿರಬೇಕು ಎಂದುಕೊಂಡು ನೋಡಲು ಹೋದರೆ ಅಚ್ಚರಿ ಕಾದಿದೆ. ಅಲ್ಲಿನ ನಾಮ ಫಲಕ, ಘೋಷಣೆ, ಸುರಕ್ಷೆಯ ಸಂದೇಶ, ಹೀಗೆ ಎಲ್ಲ ವ್ಯವಸ್ಥೆಯಲ್ಲೂ ಯಾರದೋ ಒತ್ತಾಯಕ್ಕೆ ಸಿಲುಕಿಯೋ ಅಥವಾ ಯಾರನ್ನೋ ಒಲೈಸಲೋ ಎಂಬಂತೆ ಕನ್ನಡ, ಇಂಗ್ಲಿಶ್ ಜೊತೆ ಅನಾವಶ್ಯಕವಾಗಿ ಹಿಂದಿಯನ್ನೂ ಬಳಸಿರುವುದು ಕಂಡಾಗ ಹಿಂದಿ ಮೂಲಭೂತವಾದಿಗಳ ಕೈಗೆ ಹಿಂದಿ ಹೇರಿಕೆಯ ಹೊಸ ಅಸ್ತ್ರವಾಗಿ ನಮ್ಮ ಮೆಟ್ರೋ ಕಂಡಿದೆ ಅಂದರೆ ತಪ್ಪಾಗದು.

ನೀವು ಬರೆಯಬೇಕಾದ ಮೆಟ್ರೋ ಅಧಿಕಾರಿಗಳ ವಿಳಾಸ: [email protected]; [email protected]; [email protected]; [email protected]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+