ವಿಶ್ವ ಮಧುಮೇಹ ದಿನ ಅಂಗವಾಗಿ ವಿಶೇಷ ವಾಕಥಾನ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 8: ಮಧುಮೇಹ ರೋಗ ಕುರಿತು ಮಕ್ಕಳಲ್ಲಿ ವಿಶೇಷ ಜಾಗೃತಿ ಮೂಡಿಸುವ ಸಲುವಾಗಿ ಶಿವಜ್ಯೋತಿ ಸ್ವಯಂ ಸೇವಾ ಸಂಸ್ಥೆ ಭಾನುವಾರ (13ನೇ ನವೆಂಬರ್) ರಂದು ಕಬ್ಬನ್ ಪಾರ್ಕ್ ನಲ್ಲಿ ವಿಶೇಷ ವಾಕಥಾನ್ ಆಯೋಜಿಸಿದೆ.

ಮಧುಮೇಹದ ಕುರಿತು ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಜಾಗೃತಿಯನ್ನೂ ಸಹ ಮೂಡಿಸಬೇಕಿದೆ. ಇದರಿಂದ ರೋಗದ ಕುರಿತ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಕ್ಕಳು ಜ್ಞಾನ ಬೆಳೆಸಿಕೊಳ್ಳುತ್ತಾರೆ ಎಂದು ಸಂಸ್ಥೆ ತಿಳಿಸಿದೆ.

Walkathon for awareness on diabetes in childrens

ಕೇವಲ ಮಕ್ಕಳಲ್ಲಷ್ಟೇ ಅಲ್ಲದೇ. ಸಾರ್ವಜನಿಕರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ. ನಡೆಯುವುದರಿಂದ ದೊರೆಯುವ ಪ್ರಯೋಜನಗಳ ಕುರಿತಾಗಿಯೂ ಸಹ ವಾಕಾಥಾನ್ ನಿಂದ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ ಎಂದು ಸಂಸ್ಥೆ ಹೇಳಿದೆ.

ನೀವು ಸಹ ವಾಕಾಥಾನ್ ನಲ್ಲಿ ಭಾಗವಹಿಸಿ, ಉತ್ತಮ ಆರೋಗ್ಯ, ಮಾನಸಿಕ ಸ್ಥೈರ್ಯ, ಸಮುದಾಯ ಸಹಕಾರ ಮತ್ತು ಮಧುಮೇಹವನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಗಮನ ಹರಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಭಾನುವಾರ ಬೆಳಿಗ್ಗೆ 8:30ಕ್ಕೆ ಕಬ್ಬನ್ ಪಾರ್ಕ್ ನಲ್ಲಿ ವಾಕಥಾನ್ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ರಾಕೇಶ್ -9538924319 ಇವರನ್ನು ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Walkathon at Bengaluru
English summary
On the eve of world Diabetes Day and Children Day (India) Shivajoyti, a NGO have organized Walkathon 2016 for awareness and prevention of diabetes in children on Sunday, 13th November at Cubbon Park, Bengaluru. Join the walkathon, spread the word
Please Wait while comments are loading...