ಬಿಎನ್ಎಂಐಟಿಯಲ್ಲಿ ರಘು ದೀಕ್ಷಿತ್ ಲೈವ್ ಸಂಗೀತ ಸಂಜೆ

Written By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 19 : ಫ್ರೆಂಚ್ ಗಡ್ಡ ಬಿಟ್ಟು, ಕಲರ್ ಲುಂಗಿ ತೊಟ್ಟು, ಕೈಯಲ್ಲಿ ಗಿಟಾರ್ ತಂತಿ ಮೀಟುತ್ತ, ಹೈಬೀಟ್ ಮ್ಯೂಸಿಕ್ ಜೊತೆ ಹಾಡುತ್ತಲೇ ಕೇಳುಗರನ್ನು ಗಂಧರ್ವ ಲೋಕಕ್ಕೆ ಕರೆದೊಯ್ಯುವ ಮೋಡಿಗಾರ ರಘು ದೀಕ್ಷಿತ್ ಜೊತೆ ಹುಚ್ಚೆದ್ದು ಕುಣಿಯಲು ಬೆಂಗಳೂರಿನ ಬಿಎನ್ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಯುವದಂಡು ಸಜ್ಜಾಗಿದೆ.

ಗಿಟಾರ್ ಹಿಡಿದು ಏರುದನಿಯಲ್ಲಿ 'ನಿನ್ನ ಪೂಜೆಗೆ ಬಂದೆ ಮಹದೇಶ್ವರ...' ಎಂದು ಮೈಸೂರಿನ ಹುಡುಗ ರಘು ದೀಕ್ಷಿತ್ ಹಾಡುತ್ತಿದ್ದರೆ ಎಂಥ ಕೇಳುಗರಿಗೂ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತದೆ. ಅದರಲ್ಲೂ ಶಿಶುನಾಳ ಶರೀಫರ ಹಾಡನ್ನು ಅವರ ಬಾಯಲ್ಲಿ ಕೇಳುವುದೇ ಒಂದು ಸೊಗಸು. 'ಸೈಕೋ' ಚಿತ್ರದಿಂದ ಕನ್ನಡಿಗರಿಗೆ ಪರಿಚಿತರಾದ ರಘು ವಿಶ್ವದಾದ್ಯಂತ ಮಾಡಿರುವ ಮೋಡಿ ಅಂತಿಂಥದ್ದಲ್ಲ.

Raghu Dixit live concert at BNMIT's Tatva 2016 Bengaluru

ತಾವೇ ಸ್ವತಃ ರಚಿಸಿ, ರಾಗ ಸಂಯೋಜಿಸಿ, ತಮ್ಮ ಸ್ವಂತ ಬ್ಯಾಂಡ್ 'ರಘು ದೀಕ್ಷಿತ್ ಪ್ರಾಜೆಕ್ಟ್' ಜೊತೆ ದೇಶವಿದೇಶ ಸುತ್ತಿರುವ ವಿಶಿಷ್ಟ ಪ್ರತಿಭೆ ರಘು ದೀಕ್ಷಿತ್. ಲಂಡನ್ನಿನ ರಾಣಿ ಕ್ವೀನ್ ಎಲಿಜಬೆತ್ II ಅವರೆದಿರು ರಘು ದೀಕ್ಷಿತ್ ಅವರು ತಮ್ಮ ಸಂಗೀತದ ಅನಾವರಣ ಮಾಡಿದ್ದು ಸಣ್ಣ ಸಂಗತಿಯೇನಲ್ಲ. ಕನ್ನಡ ಮಾತ್ರವಲ್ಲ, ಹಿಂದಿ ಮತ್ತು ಇಂಗ್ಲಿಷ್ ಹಾಡುಗಳನ್ನು ಕೂಡ ಅವರು ಹಾಡಿದ್ದಾರೆ.

ಈಗ ಬಿಎನ್ಎಂಐಟಿಯ ತಾಂತ್ರಿಕ ವಾರ್ಷಿಕೋತ್ಸವ 'ತತ್ವ 2016'ದಲ್ಲಿ ರಘು ದೀಕ್ಷಿತ್ ಅವರು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸಂಗೀತ ಸಾಗರದಲ್ಲಿ ಮುಳುಗೇಳಿಸಲಿದ್ದಾರೆ. ಅವರ ಟ್ರೇಡ್ ಮಾರ್ಕ್ ಹಾಡುಗಳಾದ 'ನಿನ್ನ ಪೂಜೆಗೆ ಬಂದೆ...', 'ಮುಂಜಾನೆ ಮಂಜಲ್ಲಿ...', 'ಗುಡುಗುಡಿಯಾ...' ಮುಂತಾದ ಹಾಡುಗಳೊಂದಿಗೆ ರಘು ಶ್ರೋತೃಗಳಿಗೆ ಭರ್ಜರಿ ಮನರಂಜನೆ ನೀಡಲಿದ್ದಾರೆ.


ಕಾರ್ಯಕ್ರಮದ ವಿವರಗಳು ಇಲ್ಲಿವೆ

ಸ್ಥಳ : ಆಡಿಟೋರಿಯಂ, ಬಿಎನ್ಎಂಐಟಿ, 12ನೇ ಮುಖ್ಯರಸ್ತೆ, 27ನೇ ಅಡ್ಡರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು - 560 070
ದಿನಾಂಕ : ಫೆಬ್ರವರಿ 26, ಶುಕ್ರವಾರ
ಸಮಯ : ಸಂಜೆ 6 ಗಂಟೆ
ಟಿಕೆಟ್ ದರ : ಸಾಮಾನ್ಯ ಪಾಸ್ - 500 ರು., ವಿಐಪಿ ಪಾಸ್ - 750 ರು.
ಪಾಸುಗಳಿಗೆಗಾಗಿ ಸಂಪರ್ಕಿಸಿ : 8147529660/9482341141
ಈಮೇಲ್ ವಿಳಾಸ : tatva2016@gmail.com

ಪಾಸುಗಳಿಗೆ ಈಗಾಗಲೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ನಿಮಗೂ ಪಾಸ್ ಬೇಕಿದ್ದರೆ ಕೂಡಲೆ ಸಂಪರ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru's BNM Institute of Technology will play host to the popular singer-songwriter from Mysuru, Raghu Dixit. Dixit, along with his band, The Raghu Dixit Project, will be performing at the annual technical fest of BNMIT, Tatva 2016. Hurry up, buy your pass.
Please Wait while comments are loading...