Get Updates
Get notified of breaking news, exclusive insights, and must-see stories!

ಕನ್ನಡ ಮಾಧ್ಯಮ- ಸುಪ್ರೀಂ ತೀರ್ಪು ಸ್ವಾಗತಾರ್ಹ‌: ಕುಸ್ಮಾ

ಬೆಂಗಳೂರು, ಮೇ. 7: ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ಸ್ವಾಗತಿಸಿದೆ.

ಕುಸ್ಮಾ ಅಧ್ಯಕ್ಷ ವಿ.ಆರ್‌.ಎನ್‌. ರೆಡ್ಡಿ ಒನ್‌ಇಂಡಿಯಾ ಕನ್ನಡದೊಂದಿಗೆ ಮಾತನಾಡಿ ಕುಸ್ಮಾ ಕನ್ನಡ ಭಾಷಾ ವಿರೋಧಿ ಸಂಘಟನೆ ಎಂಬ ಹಲವರಲ್ಲಿ ಬಂದಿದೆ. ನಿಜವಾಗಿಯೂ ಇದು ತಪ್ಪು ಭಾವನೆ. ಕುಸ್ಮಾ ವಿದ್ಯಾರ್ಥಿ‌ಗಳ ಪೋಷಕರ ಪರವಾಗಿ ಕೆಲಸ ಮಾಡುವ ಸಂಸ್ಥೆಯಾಗಿದೆ. ಈ ತೀರ್ಪಿ‌ನಿಂದ ಸರ್ಕಾರಕ್ಕೆ ಮುಖಭಂಗವಾಗಿದೆ, ಕುಸ್ಮಾ ಹೋರಾಟಕ್ಕೆ ಜಯವಾಗಿದೆ ಎಂದು ಬಿಂಬಿಸಲಾಗುತ್ತಿದೆ. ನಿಜವಾಗಿಯೂ ಇದು ಮಕ್ಕಳ ಪೋಷಕರಿಗೆ ಸಂದ ಜಯ ಎಂದು ತೀರ್ಪ‌ನ್ನು ಸ್ವಾಗತಿಸಿದ್ದಾರೆ.[ಕನ್ನಡದ ಭವಿಷ್ಯಕ್ಕೆ ಮಾರಕವಾದ ಸುಪ್ರೀಂ ತೀರ್ಪು]

ಭಾರತದಲ್ಲಿ ಎಲ್ಲಾ ಕಡೆ ಒಂದೇ ರೀತಿಯ ಒಂದೇ ರೀತಿಯ ಪಠ್ಯ ಶಿಕ್ಷಣವನ್ನು ಜಾರಿಗೆ ತಂದಲ್ಲಿ ಈ ರೀತಿಯ ಸಮಸ್ಯೆಯನ್ನು ನಿವಾರಿಸಹುದು. ಸರ್ಕಾರ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿದರೂ ಸರ್ಕಾರದ ಪರವಾಗಿ ತೀರ್ಪು‌ ಬರುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದರು.[ಕನ್ನಡ ಮಾಧ್ಯಮ ಕಡ್ಡಾಯವಲ್ಲ : ಸುಪ್ರೀಂ ತೀರ್ಪು]

KUSMA welcomes Supreme Court landmark judgement
ಸರ್ಕಾರಿ ಉದ್ಯೋಗದಲ್ಲಿರುವ ಪೋಷಕರು ತಮ್ಮ ಮಕ್ಕಳನ್ನು ಸಿಬಿಎಸ್‌ಸಿ, ಐಸಿಎಸ್‌ಸಿ ಮಾಧ್ಯಮಗಳಲ್ಲಿ ಓದಿಸಲು ಮುಂದಾಗುತ್ತಿದ್ದಾರೆ. ಮೊದಲು ಸರ್ಕಾರ ಸರ್ಕಾರಿ ಉದ್ಯೋಗಲ್ಲಿರುವ ಪೋಷಕರ ಮಕ್ಕಳನ್ನು ಮಾತೃಭಾಷೆಯಲ್ಲಿ ಓದಿಸುವಂತೆ ಸರ್ಕಾರ ನಿಯಮ ರೂಪಿಸದೇ ಬಡ ಪೋಷಕರ ಮೇಲೆ ಅಧಿಕಾರ ಚಲಾಯಿಸುವುದು ಯಾವ ನ್ಯಾಯ ಎಂದು ಸರ್ಕಾರವನ್ನೇ ಅವರು ಪ್ರಶ್ನಿಸಿದರು.[ಕನ್ನಡ ಮಾಧ್ಯಮ: ಫೇಸ್ ಬುಕ್ಕಿನಲ್ಲಿ ಜೋರು ಚರ್ಚೆ]

ಬಡ ಪೋಷಕರ ಮೇಲೆ ಸರ್ಕಾರ ಬಲವಂತವಾಗಿ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕಲಿಕಾ ಮಾಧ್ಯಮವಾಗಿ 'ಮಾತೃಭಾಷೆಯನ್ನು' ಹೇರಿದ್ದೇ ತಪ್ಪು. ಬಳಿಕ ಈ ಸಮಸ್ಯೆ ನಿವಾರಣೆಗೆ ಸರ್ಕಾರ ಸಂಧಾನವೇನದರೂ ನಡೆಸುತ್ತಿದ್ದರೆ ಪರಿಹಾರ ಮಾಡಬಹುದಿತ್ತು. ಈಗ ಸುಪ್ರೀಂ ಕೋರ್ಟ್‌ ಕಲಿಕಾ ಮಾಧ್ಯಮ ಪೋಷಕರ ಹಕ್ಕು ಎಂದು ಹೇಳಿರುವುದರಿಂದ ಸಾಕಷ್ಟು ಸಂಖ್ಯೆಯ ಬಡ ಪೋಷಕರಿಗೆ ನೆಮ್ಮದಿ ಸಿಕ್ಕಿದಂತಾಗಿದೆ ಎಂದು ನುಡಿದರು.[ಸುಪ್ರೀಂ ತೀರ್ಪು : ಅನಂತಮೂರ್ತಿ ಹೇಳಿದ್ದೇನು?]

ಜಾಗತೀಕರಣದ ಸಂದರ್ಭದಲ್ಲಿ ಪೋಷಕರಿಗೆ ಮಕ್ಕಳ ಭವಿಷ್ಯ ಮುಖ್ಯ. ಯಾವ ಮಾಧ್ಯಮದಲ್ಲಿ ತಮ್ಮ ಮಕ್ಕಳು ಶಿಕ್ಷಣ ಪಡೆದರೆ ಒಳ್ಳೇದಾಗುತ್ತದೆ ಎನ್ನುವ ಬಗ್ಗೆ ಪೋಷಕರಿಗೆ ಚೆನ್ನಾಗಿ ಅರಿವಿದೆ. ರಾಜ್ಯ ಸರ್ಕಾರ ಈ ವಿಚಾರವನ್ನು ಬದಿಗೊತ್ತಿ, ಕನ್ನಡ ಮಾಧ್ಯಮದ ಶಾಲೆ ಅಭಿವೃದ್ಧಿಯ ಕಡೆ ಮೊದಲು ಗಮನ ಕೊಡಲಿ ಎಂದು ಅವರು ಸರ್ಕಾರಕ್ಕೆಸಲಹೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+