ನನಗೆ ನಿಜಕ್ಕೂ ಆಘಾತವಾಗಿದೆ: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ

Posted By:
Subscribe to Oneindia Kannada
   ರವಿ ಬೆಳಗೆರೆ ಸುಪಾರಿ ಕೇಸ್ ಮೇಲೆ ಬಂಧನ | ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಪ್ರತಿಕ್ರಿಯೆ | Oneindia Kannada

   ಬೆಂಗಳೂರು, ಡಿಸೆಂಬರ್ 08: ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಅವರು ತಮ್ಮನ್ನು ಕೊಲ್ಲಲು ಸುಪಾರಿ ನೀಡಿದ್ದರ ಬಗ್ಗೆ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರು ಪ್ರತಿಕ್ರಿಯಿಸಿದ್ದು, ನನಗೆ ಇದು ದೊಡ್ಡ ಶಾಕಿಂಗ್ ಸುದ್ದಿ ಎಂದಿದ್ದಾರೆ.

   ಸುನೀಲ್ ಕೊಲೆಗೆ ಸುಪಾರಿ ಕೊಟ್ಟಿದ್ದನ್ನು ಒಪ್ಪಿಕೊಂಡ ರವಿ ಬೆಳಗೆರೆ?

   ಖಾಸಗಿ ವಾಹಿನಿ ಜತೆ ಮಾತನಾಡಿದ ಸುನೀಲ್, ಈ ಸುದ್ದಿಯಿಂದ ನಿಮಗೆ ಹೇಗೆ ಶಾಕ್ ಆಗಿದೆಯೋ ಅದೇ ರೀತಿ ನನಗೂ ಶಾಕ್ ಆಗಿದೆ. ನಿನ್ನೆ ತನಕ ಏನೂ ಗೊತ್ತಿರಲಿಲ್ಲ.

   ನಗರದ ಹಿರಿಯ ಪೊಲೀಸರುಬೆಳಗ್ಗೆ ನನ್ನನ್ನು ಕರೆಸಿ ವಿಷಯ ತಿಳಿಸಿದಾಗ ನಾನು ಕೂಡ ನಂಬೋ ಸ್ಥಿತಿಯಲ್ಲಿ ಇರಲಿಲ್ಲ. ಯಾಕಂದ್ರೆ ರವಿ ಬೆಳಗೆರೆ ನನ್ನನ್ನು ಹತ್ಯೆ ಮಾಡಿಸಲು ಪ್ರಯತ್ನಿಸುತ್ತಾರೆಂದರೆ ನಂಬಲಾರದ ವಿಷಯವಾಗಿತ್ತು ಎಂದರು.

   ಸುನಿಲ್ ಹತ್ಯೆಗೆ ಸುಪಾರಿ, ಬೆಳೆಗೆರೆ ವಿರುದ್ಧ ಎಫ್ಐಆರ್ : ಎಸಿಪಿ ಸತೀಶ್

   ಆದರೆ, ಅವರು ಪ್ರತಿಯೊಂದನ್ನೂ ಕೂಡ ದಾಖಲೆಗಳ ಸಮೇತ ವಿವರಿಸಿದಾಗ, ಹಂತಕನ ಬಗ್ಗೆ ಮಾಹಿತಿ ಕೊಟ್ಟಾಗ, ಅವನು ಈ ಹಿಂದೆಯೂ ಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿದಾಗ ಹಾಗೂ ಹಿಂದೆ ನಡೆದ ಘಟನೆಗಳನ್ನು ಪರಾಮರ್ಶಿಸಿದಾಗ ನನಗೂ ಇದು ಸತ್ಯ ಎನಿಸಿದೆ ಎಂದು ಹೇಳಿದರು.

   ಈ ಹಿಂದೆಯೂ ಕೊಲೆಗೆ ಯತ್ನ?

   ಈ ಹಿಂದೆಯೂ ಕೊಲೆಗೆ ಯತ್ನ?

   2014ರಲ್ಲಿ ನಾನು ಕೆಲಸ ಬಿಟ್ಟಾಗ ಒಂದು ಬಾರಿ ಕೊಲೆ ಯತ್ನ ನಡೆದಿತ್ತು. ಆ ಸುದ್ದಿ ವಾಹಿನಿಯೊಂದಕ್ಕೆ ಬಂಡವಾಳ ಹೂಡಲು ಯಾರೋ ಇನ್‍ವೆಸ್ಟರ್ಸ್ ಬರ್ತಾರೆ, ಚಾನಲ್ ಬಗ್ಗೆ ಮಾತನಾಡಬೇಕು ಬಾ ಎಂದು ಕಚೇರಿ ಬಳಿ ನನ್ನನ್ನು ಕರೆಸಿದ್ದರು.

   ನಾನು ಅಲ್ಲಿಗೆ ಹೋದಾಗ ಇನ್‍ವೆಸ್ಟರ್ಸ್ ಬದಲಿಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಅಲ್ಲಿದ್ದರು. ಅದನ್ನು ಗಮನಿಸಿದಾಗ ಅಂದು ಕೂಡ ಕೊಲೆಗೆ ಯತ್ನಿಸಿದ್ದರು ಅಂತ ಈಗ ಅನ್ನಿಸುತ್ತಿದೆ

   ಮತ್ತೆ ಮತ್ತೆ ಮನೆ ಬದಲಾಯಿಸುತ್ತಿದೆ: ಸುನೀಲ್

   ಮತ್ತೆ ಮತ್ತೆ ಮನೆ ಬದಲಾಯಿಸುತ್ತಿದೆ: ಸುನೀಲ್

   ಬೆಂಗಳೂರಿನ ದಕ್ಷಿಣದಿಂದ ಉತ್ತರ ಭಾಗಕ್ಕೆ ಕೊತ್ತನೂರು ದಿಣ್ಣೆಯಿಂದ ಮಲ್ಲೇಶ್ವರ ಸೇರಿದಂತೆ ಮೂರು ಕಡೆ ಮನೆಯನ್ನು ಕೇವಲ ಆರು ತಿಂಗಳಲ್ಲಿ ಬದಲಿಸಿದ್ದೆ.

   ತಮ್ಮ ಹತ್ಯೆ ನಡೆಸಲು ಯತ್ನಿಸಿದ್ದರು ಅನ್ನುವುದಕ್ಕೆ ಕೆಲ ಘಟನೆಗಳು ಈಗ ಸಾಕ್ಷಿಗಳಾಗಿ ಸಿಗುತ್ತಿವೆ. ಮನೆಗೆ ಅನಗತ್ಯವಾಗಿ ಕೊರಿಯರ್‌ನವರು ಬಂದಿದ್ದು, ಕೆಲವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಕೊರಿಯರ್ ಕಳಿಸಿದವರು ರವಿ ಅವರ ಬಳ್ಳಾರಿಯ ಆಪ್ತ ಗೆಳೆಯರು ಎಂಬುದು ಅನುಮಾನ ಹೆಚ್ಚು ಮಾಡಿತು.

   ನನ್ನ-ರವಿ ಬೆಳಗೆರೆ ಸ್ನೇಹ 17 ವರ್ಷಗಳದ್ದು

   ನನ್ನ-ರವಿ ಬೆಳಗೆರೆ ಸ್ನೇಹ 17 ವರ್ಷಗಳದ್ದು

   ನನ್ನ-ರವಿ ಬೆಳಗೆರೆ ಸ್ನೇಹ 17 ವರ್ಷಗಳದ್ದು, 14 ವರ್ಷ ಅವರ ಜೊತೆ ಕೆಲಸ ಮಾಡಿದ್ದೀನಿ. ಯಾವ ಕಾರಣಕ್ಕೆ ನನ್ನ ಕೊಲೆಗೆ ಸುಪಾರಿ ಕೊಟ್ಟರು ಅಂತ ಗೊತ್ತಿಲ್ಲ. ಅದನ್ನ ನೀವು ರವಿ ಬೆಳಗೆರೆ ಅವರನ್ನೇ ಕೇಳಬೇಕು ಅಥವಾ ತನಿಖೆ ಮಾಡುತ್ತಿರುವ ಅಧಿಕಾರಿಗಳೇ ಇದನ್ನ ಸ್ಪಷ್ಟಪಡಿಸಬೇಕು.
   ವೈಯಕ್ತಿಕ ದ್ವೇಷ ಎಂದಷ್ಟೇ ಹೇಳಿದ್ದಾರೆ.

   ಹಾಯ್ ಬೆಂಗಳೂರು ಪತ್ರಿಕೆ ಬರುವಂತೆ ಆಹ್ವಾನ

   ಹಾಯ್ ಬೆಂಗಳೂರು ಪತ್ರಿಕೆ ಬರುವಂತೆ ಆಹ್ವಾನ

   ಅವರು ಹಾಯ್ ಬೆಂಗಳೂರು ಪತ್ರಿಕೆ ಕಡೆ ಮುಖ ಹಾಕಿ ಎರಡು ವರ್ಷ ಆಗಿತ್ತು. ಪತ್ರಿಕೆಯ ಸಂಪೂರ್ಣ ಹೊಣೆ ವಹಿಸಿಕೊಳ್ಳುವಂತೆ ಆಹ್ವಾನ ನೀಡಿದ್ದರು.

   ನಾನು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಏನು ಮಾಡಲಿ ಅಂತ ಸ್ಟೇಟಸ್ ಹಾಕಿದ್ದೆ. ಹಲವಾರು ಮಂದಿ ಇದಕ್ಕೆ ಪೂರಕವಾಗಿ ಸಲಹೆ ನೀಡಿದ್ದರು.

   ರವಿ ಬೆಳಗೆರೆ ಕೂಡ ವಾಪಸ್ ಬರುವಂತೆ ಫೇಸ್‌ಬುಕ್‌ನಲ್ಲಿ ಆಹ್ವಾನಿಸಿದ್ದರು. ಆಗ ಹಿಂದೆ ಅವರು ನನ್ನ ಮೇಲೆ ಬೇಸರವಾಗಿ ಕೆಟ್ಟದಾಗಿ ನಡೆಸಿಕೊಂಡಿದ್ದರು. ಈಗ ಅದರ ಬಗ್ಗೆ ಮನವರಿಕೆಯಾಗಿ ಮತ್ತೆ ಕರೆಯುತ್ತಿದ್ದಾರೆ ಅಂದುಕೊಂಡು ವಾಪಸ್ ತೆರಳಿದ್ದೆ. ಆದರೆ, ನನಗೆ ಹತ್ತಿರುವಿಟ್ಟುಕೊಂಡೆ ಸಂಚು ರೂಪಿಸಿರುವುದು ಆಘಾತಕಾರಿ ಎಂದು ಸುನಿಲ್ ಹೇಳಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Journalist Sunil Heggaravalli said he was shocked when CCB Police gave first information about Supari Killing. Sunil's version about Supri conspiracy by Hai Bangalore Editor Ravi Belagere

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ