ಗಾಲಿ ರೆಡ್ಡಿ ಬದ್ಧವೈರಿ ಟಪಾಲ್ ಗಣೇಶ್ ಈಗ 'ಆಮ್ ಆದ್ಮಿ'

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 21: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿರುವ ಉದ್ಯಮಿ ಟಪಾಲ್ ಗಣೇಶ್ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಟಪಾಲ್ ಗಣೇಶ್ ಅವರ ಸೇರ್ಪಡೆ ಬಗ್ಗೆ ಎಎಪಿ ಕರ್ನಾಟಕದ ಘಟಕ ದೃಢಪಡಿಸಿದೆ.

ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ ಗಾಲಿ ರೆಡ್ಡಿ ಅವರು ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸಲು ಟಪಾಲ್ ಗಣೇಶ್ ಕೂಡಾ ಕಾರಣರು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವ ಎಎಪಿ ಇತ್ತೀಚೆಗೆ ರವಿಕೃಷ್ಣಾರೆಡ್ಡಿಯಂಥ ನಾಯಕರನ್ನು ಕಳೆದುಕೊಂಡಿತ್ತು. ಈಗ ಉದ್ಯಮಿ ಗಣೇಶ್ ಸೇರ್ಪಡೆಯಿಂದ ಪಕ್ಷಕ್ಕೆ ಬಲವರ್ಧನೆಯಾಗಿದೆ ಎಂದಿದ್ದಾರೆ.[ಜನಾರ್ದನ ರೆಡ್ಡಿ ಬಂಧನಕ್ಕೆ ಆಮ್ ಆದ್ಮಿ ಪಕ್ಷ ಒತ್ತಾಯ]

Illegal mining whistle-blower joins AAP Karnataka

ಟಪಾಲ್ ಗಣೇಶ್ ಅವರ ರಾಜಕೀಯ ಎಂಟ್ರಿ ಇದೇ ಮೊದಲಲ್ಲ. 2011ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಬಿ ಶ್ರೀರಾಮುಲು ಅವರು ಬಳ್ಳಾರಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಲದಲ್ಲಿ ಬಿಜೆಪಿ ಕಚೇರಿಯಲ್ಲಿ ಟಪಾಲ್ ಗಣೇಶ್ ಕಾಣಿಸಿಕೊಂಡಿದ್ದರು. ಆದರೆ, ಎರಡು ತಿಂಗಳಲ್ಲೇ ಬಿಜೆಪಿ ತೊರೆದು ಹೊರ ಬಂದಿದ್ದರು.[ಜನಾ ರೆಡ್ಡಿಗೆ ಇಷ್ಟು ದುಡ್ಡು ಎಲ್ಲಿಂದ ಬಂತು?: ಟಪಾಲ್ ಪ್ರಶ್ನೆ]


ಹೆಂಡ, ಹಣ ಬಲದಿಂದ ಚುನಾವಣೆಗೆ ಇಳಿಯುವುದನ್ನು ತಡೆಯಬೇಕಿದೆ. ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಬಲ ಕೊಡುವ ಪಕ್ಷಗಳಿಗೆ ನಾನು ಬೆಂಬಲ ನೀಡುತ್ತೇನೆ. ರೆಡ್ಡಿ ಸೋದರರು ಎಲ್ಲೇ ಸ್ಪರ್ಧಿಸಿದರೂ ನಾನು ಕಣಕ್ಕಿಳಿಯುತ್ತೇನೆ ಎಂದು 2012ರಲ್ಲಿ ಟಪಾಲ್ ಗಣೇಶ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Illegal mining case whistleblower and the man behind Janardhana Reddy's prolonged stay in jail, Tapal Ganesh, is all set to join Aam Aadmi Party's Karnataka Unit on Monday.
Please Wait while comments are loading...