ಬೆಂಗಳೂರು : ಚಿಕ್ಕಣ್ಣ ಗಾರ್ಡನ್ ಸಿಸಿಟಿವಿ ಕಣ್ಗಾವಲಿನಲ್ಲಿದೆ

ಬೆಂಗಳೂರು, ಜು. 14 : ನಗರದ ಚಿಕ್ಕಣ್ಣ ಗಾರ್ಡನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಸ್ವ ಪ್ರೇರಣೆಯಿಂದ ಸ್ಥಳೀಯ ರಸ್ತೆಗಳಲ್ಲಿ ಸಿಸಿಟಿವಿ ಆಳವಡಿಸಿದ್ದು, ಅಪರಾಧ ಚಟುವಟಿಕೆ ನಡೆಸುವವರಿಗೆ ಎಚ್ಚರಿಕೆ ನೀಡಿದೆ. ಸ್ಥಳೀಯ ಪೊಲೀಸರೊಂದಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಳ್ಳಲಾಗುವುದು ಎಂದು ನಿವಾಸಿಗಳ ಸಂಘದವರು ಹೇಳಿದ್ದಾರೆ.

ಅಪರಾಧ ಚಟುವಟಿಕೆಗಳ ನಿಯಂತ್ರಣ ಮತ್ತು ಸುರಕ್ಷತೆ ದೃಷ್ಟಿ­ಯಿಂದ ಸಿಸಿಟಿವಿಗಳನ್ನು ಆಳವಡಿಸಲಾಗಿದೆ ಎಂದು ಚಿಕ್ಕಣ್ಣ ಗಾರ್ಡನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋಪಿ ಹೇಳಿದ್ದಾರೆ. ಸ್ವಪ್ರೇರಣೆಯಿಂದ ನಾವು ಸಿಸಿಟಿವಿ ಅಳವಡಿಕೆ ಮಾಡಿದ್ದು, ಇದರಿಂದ ಅನುಮಾಸ್ಪದ ವ್ಯಕ್ತಿಗಳು ಮತ್ತು ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ತಿಳಿಸಿದ್ದಾರೆ.

cctv

ಹೆಚ್ಚಿನ ಜನಸಂದಣಿ ಇರುವ ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆಯ 5ನೇ ಮುಖ್ಯರಸ್ತೆ, ಶಂಕರಮಠ ರಸ್ತೆ ಮತ್ತು ಚಿಕ್ಕಣ್ಣ ಗಾರ್ಡನ್‌ ಬಡಾವಣೆಯ ಮೂರು ಅಡ್ಡರಸ್ತೆಗಳಲ್ಲಿ 18 ಲಕ್ಷ ವೆಚ್ಚದಲ್ಲಿ 15 ಸಿಸಿಟಿವಿಗಳನ್ನು ಆಳವಡಿಸಲಾಗಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಈ ಸಿಸಿಟಿವಿಗಳು, 360 ಡಿಗ್ರಿ ವ್ಯಾಪ್ತಿಯ ದೃಶ್ಯಗಳನ್ನು ಸೆರೆಹಿಡಿಯಿವೆ. [ಸಿಸಿಟಿವಿ ಇಲ್ಲದ ಮಳಿಗೆ, ಕೆಜಿ ಚಿನ್ನ ಮಾಯ]

ಏಕೆ ಸಿಸಿಸಿಟಿ? : ಶಂಕರಮಠ ರಸ್ತೆಯಲ್ಲಿ ಮೂರು ತಿಂಗಳ ಹಿಂದೆ ಮಹಿಳೆ ಸರ ಕದ್ದು ಕಳ್ಳರು ಪರಾರಿಯಾಗಿದ್ದರು. ಚಿಕ್ಕಣ್ಣ ಗಾರ್ಡನ್‌ 2ನೇ ಅಡ್ಡರಸ್ತೆಯಲ್ಲಿ ಇದೇ ರೀತಿಯ ಪ್ರಕರಣ ಕೆಲವು ದಿನಗಳ ಹಿಂದೆ ನಡೆದಿತ್ತು. ಆದ್ದರಿಂದ ನಿವಾಸಿಗಳ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ ಎಂದು ಗೋಪಿ ಮಾಹಿತಿ ನೀಡಿದ್ದಾರೆ.

ಈ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಸ್ಥಳೀಯ ಪೊಲೀಸರೊಂದಿಗೆ ಹಂಚಿಕೊಳ್ಳುತ್ತೇವೆ, ಇದರಿಂದ ಈ ಪ್ರದೇಶದಲ್ಲಿ ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರ ಮಾಹಿತಿ ಲಭ್ಯವಾಗುತ್ತದೆ ಎಂದು ಗೋಪಿ ಹೇಳಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರಾದ ರಾಘವೇಂದ್ರ ಔರಾದ್ಕರ್ ಸಹ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿವಾಸಿಗಳಿ ಅಗತ್ಯ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+