ಬಿಬಿಎಂಪಿಗೆ ಮತದಾನ ಕಡಿಮೆಯಾಗಲು 10 ಕಾರಣಗಳು
ಬೆಂಗಳೂರು, ಆಗಸ್ಟ್. 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಣೆಬರಹ ಬರೆಯಬೇಕಿದ್ದ ನಾಗರಿಕರು ಪ್ರವಾಸಿ ತಾಣಗಳಲ್ಲಿದ್ದಾರೆ. ಹೌದು ಬೆಂಗಳೂರಲ್ಲಿ ಬಿಬಿಎಂಪಿ ಚುನಾವಣೆ ನಡೆಯುತ್ತಿದ್ದರೆ ನಮ್ಮ ಪ್ರಜೆಗಳು ಮೈಸೂರು, ಮಡಿಕೇರಿ, ಚಾಮುಂಡಿ ಬೆಟ್ಟ, ನಂದಿ ಬೆಟ್ಟವನ್ನು ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಸುತ್ತುತ್ತಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ ಕೇವಲ ಶೇ. 10 ಮತದಾನ ಆಗಿದೆ ಅಂದರೆ ನೀವೇ ಊಹಿಸಿಕೊಳ್ಳಿ. ಜನರುಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಯಾವ ಬಗೆಯ ಜಿಗುಪ್ಸೆ ತಾಳಿದ್ದಾರೆ ಎಂಬುದು ಗೊತ್ತಾಗುತ್ತದೆ.(ಮತದಾನದ ಲೈವ್)
ಇಷ್ಟಕ್ಕೂ ಜನರ ಮನಸ್ಥಿತಿಯೊಂದೆ ಮತದಾನ ಕಡಿಮೆಯಾಗಲು ಕಾರಣವಲ್ಲ. ಇದಕ್ಕೆ ಪೂರಕವಾಗಿ ಹಲವು ಅಂಶಗಳು ದಾಖಲಿಸಬಹುದು. ಇಲ್ಲಿಯವೆಗೆ ಆಗಿರುವುದು ಕೇವಲ ಶೇ. 25 ರಷ್ಟು ಮತದಾನ. ಹಾಗಾದರೆ ಉಳಿದ ಶೇ. 75 ಸತ್ ಪ್ರಜೆಗಳು ಎಲ್ಲಿ ಹೋದರು? ಇಲ್ಲಿದೆ ಉತ್ತರ....

ವೀಕೆಂಡ್ ಮಸ್ತಿ
ಚುನಾವಣೆ ಹಿನ್ನೆಲೆಯಲ್ಲಿ ಮೊದಲೇ ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು. ಜತೆಗೆ ಖಾಸಗಿ ಕಂಪನಿಗಳು ಸಹ ತಮ್ಮ ಸಿಬ್ಬಂದಿಗೆ ಮತದಾನ ಮಾಡಲೆಂದು ರಜಾ ನೀಡಿದ್ದರು. ಆದರೆ ಜನರ ತಲೆಯಲ್ಲಿ ಇದ್ದದ್ದೇ ಬೇರೆ.

ಬಿಡದ ಮಳೆ
ಬೆಂಗಳೂರು ನಗರದಾದ್ಯಂತ ವಾರದಿಂದ ನಿತ್ಯ ಸಂಜೆ ಮಳೆ ಸುರಿಯುತ್ತಿದ್ದೆ, ಶನಿವಾರ ಸಹ ಬೆಳಗ್ಗೆನೇ ಮಳೆ ಆರಂಭವಾಗಿ ಇದ್ದ ಹುರುಪನ್ನು ನಾಶ ಮಾಡಿತು. ಅರ್ಧ ಜನ ನಗರವನ್ನು ತೊರೆದಿದ್ದರೆ ಇನ್ನರ್ಧ ಜನ ಮನೆ ಬಿಟ್ಟು ಹೊರಬರಲಿಲ್ಲ.

ಸರಣಿ ರಜೆ
ಅರ್ಧ ಬೆಂಗಳೂರಿಗರು ಶುಕ್ರವಾರ ರಾತ್ರಿಯೇ ಮಹಾನಗರವನ್ನು ತೊರೆದಿದ್ದರು. ಸಮೀಪದ ಪ್ರವಾಸಿ ತಾಣ, ಹಳ್ಳಿಗಳಿಳಿಗೆ ತಮ್ಮ ಪ್ರಯಾಣ ಬೆಳೆಸಿದ್ದರು.

ಚುನಾವಣೆ ಯಾರಿಯೂ ಬೇಕಿಲ್ಲ
ಜನರಲ್ಲಿ ಮೊದಲೇ ರಾಜಕಾರಣದ ಬಗ್ಗೆ ಅಸಡ್ಡೆ ಮೂಡಿದೆ. ಮತದಾನ ಮಾಡಬೇಕು ಅದರಿಂದ ಬದಲಾವಣೆ ಆಗುತ್ತದೆ ಎಂಬ ಕಲ್ಪನೆಯನ್ನಿಟ್ಟುಕೊಂಡು ಮತದಾನ ಮಾಡುವ ತಾಳ್ಮೆ ಯಾರ ಬಳಿಯೂ ಉಳಿದುಕೊಂಡಿಲ್ಲ.

ಬಿಬಿಎಂಪಿ ವಿಭಜನೆ
ಬಿಬಿಎಂಪಿ ವಿಭಜನೆ ಬಗ್ಗೆ ಸಾಮಾನ್ಯ ನಾಗರಿಕರಿಗೆ ಸಂಪೂರ್ಣ ಮಾಹಿತಿ ಇನ್ನು ಇಲ್ಲ. ಅಲ್ಲದೇ ಎಷ್ಟು ಭಾಗವಾಗಿ ಮಾಡಲಾಗಿದೆ, ನಮ್ಮ ಬೂತ್ ಎಲ್ಲಿ ಬರುತ್ತದೆ ಎಂಬುದರ ಬಗೆಗೂ ತಿಳಿವಳಿಕೆ ನೀಡಿಲ್ಲ.

ಹೊಸಪ್ರದೇಶಗಳ ಸೇರ್ಪಡೆ
ಕಳೆದ ಬಾರಿ ನಡೆದ ಚುನಾವಣೆಗೆ ಹೋಲಿಸಿದರೆ ಬಿಬಿಎಂಪಿ ವ್ಯಾಪ್ತಿ ಹೆಚ್ಚಿದೆ. ಬೆಂಗಳೂರು ದಕ್ಷಿಣದಲ್ಲೇ ಅನೇಕ ಹೊಸ ಪ್ರದೇಶಗಳು ಸೇರ್ಪಡೆಯಾಗಿವೆ. ಇವರಿಗೆ ಬಿಬಿಎಂಪಿಯಲ್ಲಿದ್ದೇವೋ? ಗ್ರಾಮಾಂತರದಲ್ಲಿದ್ದೇವೋ ಎಂಬುದನ್ನು ತಿಳಿಸುವ ಕೆಲಸವೂ ಆಗಿಲ್ಲ.

ಜಾಗೃತಿ ಮೂಡಿಸುವ ಕೆಲಸ ಆಗಿಲ್ಲ
ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಜಾಗೃತಿ ಜಾಥಾಗಳು ನಡೆದ ಉದಾಹರಣೆ ಕಡಿಮೆ. ಜಾಹೀರಾತುಗಳ ಮೂಲಕ ಎಚ್ಚರಿಸುವ ಕೆಲಸವೂ ಆಗಿಲ್ಲ. ಮಾಧ್ಯಮಗಳು ಕೂಡ ಮತದಾನ ಜಾಗೃತಿಯಿಂದ ಕೊಂಚ ಹಿಂದೆ ನಿಂತಿದ್ದವು ಎಂದು ಹೇಳಬಹದು.

ಬಹುತೇಕರು ಹೊರಗಿನವರು
ಬೆಂಗಳೂರಿನಲ್ಲಿ ವಾಸಿಸುತ್ತಿರುವವರಲ್ಲಿ ಮೂಲ ನಿವಾಸಿಗಳಿಗಿಂತ ಹೊರಗಿನವರೇ ಜಾಸ್ತಿ ಇದ್ದಾರೆ ಅನ್ನೋದು ಒಪ್ಪಿಕೊಳ್ಳಬೇಕಾದ ಸತ್ಯ. ಉತ್ತರ ಭಾರತೀಯರು, ಆಂಧ್ರದವರು, ತಮಿಳುನಾಡಿನವರು ಎಲ್ಲರಿಗೂ ಮತದಾನದ ಹಕ್ಕು ಇಲ್ಲಿಯೇ ಇದ್ದರೂ ಅದು ಕೇವಲ ಸರ್ಕಾರಿ ಸೌಲಭ್ಯ ಪಡೆಯಲು ಮಾತ್ರ ಎಂದಂತಾಗಿದ್ದು ಬೆಂಗಳೂರಿನ ದುರ್ದೈವ.

ಯುವಜನತೆ ದೂರ ದೂರ
ಮತದಾನ ಮಾಡಿದವರಲ್ಲಿಯೂ ವಯೋವೃದ್ಧರು ಮತ್ತು ಮಧ್ಯಮ ವಯಸ್ಸಿನವರೇ ಸಂಖ್ಯೆಯೇ ಹೆಚ್ಚು. ನಾವು ಮತ ಹಾಕದಿದ್ದರೆ ಏನಾಗುತ್ತದೆ ಎಂಬ ಉಡಾಫೆ ಭಾವನೆಯನ್ನು ಬೆಂಗಳೂರಿನ ಯುವಜನತೆ ತಳೆದಿದ್ದು ಚುನಾವಣಾ ಮತ ಶೇಕಡಾವಾರು ಲೆಕ್ಕ ಗಮನಿಸಿದಾಗ ಸ್ಪಷ್ಟವಾಗುತ್ತದೆ.

ಮತದಾನಕ್ಕೆ ಬರದ ಜಾಲತಾಣ ಶೂರರು
ಸಾಮಾಜಿಕ ಜಾಲತಾಣದಲ್ಲಿ ಮತದಾನ ಜಾಗೃತಿ ಬಗ್ಗೆ ಬರೆಯುತ್ತಿದ್ದ ಐಟಿ ಸೆಕ್ಟರ್ ನ ಮಂದಿ ಮತಗಟ್ಟೆಗೆ ಆಗಮಿಸಲೇ ಇಲ್ಲ. ಬೆಂಗಳೂರು ದಕ್ಷಿಣದ ವೈಟ್ ಫೀಲ್ಡ್, ಹೂಡಿ ಭಾಗದಲ್ಲಿ ಆಗಿರುವುದು ಶೇ.13 ಮತದಾನ. ಉಳಿದ ಶೇ.87 ಜನ ಎಲ್ಲಿ ಹೋದರು?












Click it and Unblock the Notifications