Get Updates
Get notified of breaking news, exclusive insights, and must-see stories!

ಆರ್ಕಿಡ್ಸ್ ಶಾಲೆಯಲ್ಲಿ ಅತ್ಯಾಚಾರ, ಆರೋಪಿ ಎಲ್ಲಿ?

ಬೆಂಗಳೂರು, ಅ.22: ವಿಬ್​ಗಯಾರ್​ ಶಾಲೆಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಘಟನೆಯಿಂದ ಸುಧಾರಿಸಿಕೊಳ್ಳುವ ಹೊತ್ತಿನಲ್ಲೇ ಮತ್ತೊಂದು ಇಂಟರ್ ನ್ಯಾಷನಲ್ ಶಾಲೆಯಲ್ಲಿ ಇಂಥದ್ದೇ ನೀಚ ಕೃತ್ಯ ನಡೆದಿದೆ. ಆರ್ಕಿಡ್ಸ್ ಶಾಲೆಯಲ್ಲಿ ಹಸುಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅದರೆ, ಇದುವರೆವಿಗೂ ಆರೋಪಿಗಳ ಬಂಧನವಾಗಿಲ್ಲ.

ಜಾಲಹಳ್ಳಿಯಲ್ಲಿರುವ ಆರ್ಕಿಡ್ಸ್ ಇಂಟರ್​ ನ್ಯಾಷನಲ್​​ ಶಾಲೆಯಲ್ಲಿ ಮೂರು ವರ್ಷ ವಯಸ್ಸಿನ ನರ್ಸರಿಯಲ್ಲಿ ಓದುತ್ತಿರುವ ಬಾಲಕಿ ಮೇಲೆ ಶಾಲಾ ಸಿಬ್ಬಂದಿಯಿಂದ ಅತ್ಯಾಚಾರ ನಡೆದಿರುವ ಬಗ್ಗೆ ಮಂಗಳವಾರ ದೂರು ದಾಖಲಾಗಿದೆ. ಆದರೆ, ಯಾರನ್ನು ಈವರೆಗೂ ಬಂಧಿಸಿಲ್ಲ, ವಿಚಾರಣೆ ನಡೆಯುತ್ತಲೇ ಇದೆ. ಹೀಗಾದರೆ ಮಕ್ಕಳ ರಕ್ಷಣೆ ಹೇಗೆ ಸಾಧ್ಯ ಎಂದು ಪೋಷಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. [ಮಕ್ಕಳ ಸುರಕ್ಷತೆಗೆ ಸರ್ಕಾರದ ಮಾರ್ಗಸೂಚಿ]

ಶಾಲಾ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ಆರೋಪಿಗಳನ್ನು ರಕ್ಷಿಸಲು ಆಡಳಿತ ಮಂಡಳಿ ಮುಂದಾಗಿದೆ. ಸಿಸಿಟಿವಿ ಫುಟೇಜ್ ಇನ್ನೂ ನೀಡಿಲ್ಲ ಏಕೆ? ಪೋಷಕರ ಪ್ರಶ್ನೆಗೆ ಉತ್ತರಿಸಲು ಯಾರೂ ಬಂದಿಲ್ಲವೇಕೆ? ನಿಮ್ಮನ್ನು ನಂಬಿ ಮಕ್ಕಳು ಶಾಲೆಗೆ ಹೇಗೆ ಕಳಿಸಲು ಸಾಧ್ಯ? ಎಂದು ಪ್ರಶ್ನಿಸುತ್ತಿದ್ದಾರೆ

A Kingdergarten Student Raped in Orchids School Bangalore
ಪ್ರಕರಣ ಸಂಬಂಧ ಜಾಲಹಳ್ಳಿ ಠಾಣೆ ಪೊಲೀಸರು ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣೆಗಾಗಿರುವ ಪೋಕ್ಸೋ ಕಾಯ್ಡೆ 2012ರ ಸೆಕ್ಷನ್ 4, 6ರ ಅಡಿಯಲ್ಲಿ, ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಇಬ್ಬರು ಶಾಲಾ ಶಿಕ್ಷಕರನ್ನು ಶಾಲೆಯಲ್ಲೇ ವಿಚಾರಣೆ ನಡೆಸಿದ್ದಾರೆ. ಉಳಿದ 4 ಮಂದಿಗೆ ಸಮನ್ಸ್ ಕಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಂಟಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಮತ್ತು ಕ್ರೈಂ ಡಿಸಿಪಿ ಅಭಿಷೇಕ್ ಗೋಯೆಲ್​ ಹಾಗೂ ಬೆಂಗಳೂರು ಕಮಿಷನರ್​ ಎಂ.ಎನ್​.ರೆಡ್ಡಿ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. [ಆರ್ಕಿಡ್ಸ್ ಶಾಲೆ ಪ್ರಕರಣ: ಎಂಎನ್ ರೆಡ್ಡಿ ಹೇಳಿದ್ದೇನು?]

ಪೊಲೀಸರು ಶಾಲೆಯಲ್ಲಿರುವ ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗೆ ಎಸಿಪಿ(ಮಲ್ಲೇಶ್ವರ) ಸಾರಾ ಫಾತಿಮಾ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಅತ್ಯಾಚಾರಕ್ಕೊಳಗಾದ ಬಾಲಕಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದಾರೆ. [ವಿಬ್ ಗಯಾರ್ ಶಾಲೆ ನೀಚ ಕೃತ್ಯ]

ಕಳೆದ ಜುಲೈ ತಿಂಗಳಿನಲ್ಲಿ ಮಾರತ್ ಹಳ್ಳಿ ಸಮೀಪದ ವಿಬ್ ಗಯಾರ್ ಹೈ ಶಾಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಶಾಲೆಯ ಸ್ಕೇಟಿಂಗ್ ತರಬೇತುದಾರ, ಜಿಮ್ ಮಾಸ್ಟರ್ ಗಳನ್ನು ಪೊಲೀಸರು ಬಂಧಿಸಿದ್ದರು. ಅದರೆ, ಚಾರ್ಜ್ ಶೀಟ್ ದಾಖಲಾಗಿಲ್ಲ. ಈ ಘಟನೆ ನಂತರ ಶಾಲೆಗಳಿಗೆ ನಿಯಮಗಳನ್ನು ವಿಧಿಸಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸ್ ಆಯುಕ್ತರು ನಿರ್ದೇಶಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+