ಒಳ್ಳೆ ಮಳೆ ಬರಲು ದೈವ ಹೇಳಿತೆಂದು ತುಂಬಿದ್ದ ಕೆರೆ ಖಾಲಿ ಮಾಡಿದ ಗ್ರಾಮಸ್ಥರು
ಮೂರು ವರ್ಷದಿಂದ ಒಳ್ಳೆ ಮಳೆಯಾಗಿಲ್ಲ. ತುಂಬಿದ ಕೆರೆಯೇ ಇದಕ್ಕೆ ಕಾರಣ. ಅದನ್ನು ಪೂರ್ತಿ ಖಾಲಿ ಮಾಡಿದರೆ ಈ ವರ್ಷ ಒಳ್ಳೆ ಮಳೆಯಾಗುತ್ತದೆ ಎಂದು ದೈವ ಪ್ರೇರಣೆಯಾಯಿತು ಎಂದು ಬಳ್ಳಾರಿಯಲ್ಲಿ ಏನು ಮಾಡಿದ್ದಾರೆ ಎಂದು ಈ ವರದಿ ಓದಿ
ಬಳ್ಳಾರಿ, ಮೇ 19: ಜನರ ನಂಬಿಕೆ ಹೀಗೆ ಎಂದು ಅಂದಾಜಿಸುವುದಕ್ಕೂ ಆಗಲ್ಲ, ಅವರ ನಿರ್ಧಾರದ ಬಗ್ಗೆ ಏನೂ ಹೇಳುವುದಕ್ಕೆ ಸಾಧ್ಯವಾಗಲ್ಲ. ಬಳ್ಳಾರಿ ಜಿಲ್ಲೆಯ ಬಳ್ಳಾಗಿ ಗ್ರಾಮದ ಜನರು ದೇವರ ಕೋಪ ತಮಣಿ ಮಾಡಬೇಕು ಎಂದು ಕೆರೆಯಲ್ಲಿದ್ದ ನೀರನ್ನು ಖಾಲಿ ಮಾಡಿದ್ದಾರೆ. ಇದಕ್ಕೆ ಏನು ಹೇಳೋದು?
ರಾಜ್ಯದಲ್ಲಿ ಅಲ್ಲಲ್ಲಿ ಅನ್ನೋ ಹಾಗೆ ಮಳೆ ಬಂದಿರುವುದು ಹೌದಾದರೂ ಬರ ಪರಿಸ್ಥಿತಿ ಸಂಪೂರ್ಣ ಬದಲಾಗಿಲ್ಲ. ಕೆರೆಯ ನೀರು ಪುಟ್ಟಾ ಪೂರ್ತಿ ಖಾಲಿ ಮಾಡಿದರೆ ಈ ವರ್ಷ ಸಕತ್ತಾಗಿ ಮಳೆಯಾಗುತ್ತದೆ ಅಂತ ದೈವವೊಂದು ಗ್ರಾಮದ ಯುವಕರಿಗೆ ಆಜ್ಞೆ ಮಾಡಿತಂತೆ. ಆದ್ದರಿಂದ ಒಂದೇ ರಾತ್ರಿಯಲ್ಲಿ ತುಂಬಿದ್ದ ಕೆರೆಯ ನೀರನ್ನೆಲ್ಲ ಖಾಲಿ ಮಾಡಿದ್ದಾರೆ.[ಉತ್ತರ ಕರ್ನಾಟಕದಲ್ಲಿ ನವಜಾತ ಶಿಶುಗಳಿಗೆ ಉಷ್ಣಾಂಶದ ಬಿಸಿ]

ಮೂರು ವರ್ಷದಿಂದ ಕೆರೆ ತುಂಬಿದ್ದರಿಂದ ದೇವರಿಗೆ ಕೋಪ ಬಂದು, ಮಳೆ ಕೂಡ ಬಂದಿರಲಿಲ್ಲ. ದೇವ ಅಪ್ಪಣೆಯಂತೆ ಕೆರೆ ಖಾಲಿ ಮಾಡಿದ್ದೀವಿ ಎಂದು ರಾಮದುರ್ಗಾ ಕೆರೆಯನ್ನು ಖಾಲಿ ಮಾಡಿರುವ ಕೊಟ್ಟೂರು ತಾಲೂಕು ಗ್ರಾಮದ ಯುವಕರು ತಮ್ಮ ಕೆಲಸಕ್ಕೆ ಸಮರ್ಥನೆ ಮಾಡಿಕೊಂಡಿದ್ದಾರೆ.[ಮೇ 29ರಂದು ಕರ್ನಾಟಕಕ್ಕೆ ಮುಂಗಾರಿನ ಆಗಮನ]
ಕೆರೆಯ ಒಡ್ಡನ್ನು ಒಡೆದು ನೀರು ಖಾಲಿ ಮಾಡಿರುವುದರ ಬಗ್ಗೆ ಮತ್ತೊಂದು ಸಂಶಯವೂ ಇದೆ. ಮೀನುಗಾರರು ಮೀನುಗಳನ್ನು ಹಿಡಿಯಲು ಹೀಗೆ ಮಾಡಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಅಧಿಕಾರಿಗಳು ಗ್ರಾಮಸ್ಥರಿಗೆ ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications