ಬಳ್ಳಾರಿಯ ಸರ್ಕಾರಿ ಕಚೇರಿಯಲ್ಲೇ ಅಧಿಕಾರಿಯ 'ಮುತ್ತಿನಾಟ'; ವಿಡಿಯೋ ವೈರಲ್

ಬಳ್ಳಾರಿ, ಅಕ್ಟೋಬರ್ 29: ಸರ್ಕಾರಿ ಕಚೇರಿಯಲ್ಲೇ, ಅದೂ ಕೆಲಸದ ಅವಧಿಯಲ್ಲಿ ಲೆಕ್ಕಾಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿಯೊಂದಿಗೆ ರೊಮಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬಳ್ಳಾರಿಯ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಈ ಒಂದು ಸಂಗತಿ ಬೆಳಕಿಗೆ ಬಂದಿದೆ.

ಜಿಲ್ಲಾ ಪಂಚಾಯ್ತಿಯಲ್ಲಿ ಲೆಕ್ಕ ಅಧೀಕ್ಷಕ ಸಂಪತ್ ಕುಮಾರ್ ಮೇಲೆ ಈ ಗಂಭೀರ ಆರೋಪ ಕೇಳಿ ಬಂದಿದೆ. ಮಹಿಳಾ ಸಿಬ್ಬಂದಿಯೊಂದಿಗೆ ಮುತ್ತಿನಾಟ ನಡೆಸುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿದೆ. ಕಳೆದ ಒಂದು ವರ್ಷದಿಂದಲೂ ಇದೇ ರೀತಿ ಅಸಭ್ಯವಾಗಿ ವರ್ತಿಸುತ್ತಿರುವ ಆರೋಪ ಇವರ ಮೇಲಿದೆ.
ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿ ಈ ಇಬ್ಬರ ಈ ರೀತಿಯ ವರ್ತನೆಯಿಂದ ಕಚೇರಿಯ ಸಿಬ್ಬಂದಿ ಕೂಡ ಬೇಸತ್ತಿದ್ದಾರೆ. ಸಂಪತ್ ಕುಮಾರ್ ವಿರುದ್ಧ ಈಗಾಗಲೇ ಕೆಲ ಮಹಿಳಾ ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ಕೂಡ ನೀಡಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇಷ್ಟೆಲ್ಲಾ ಆದರೂ ಮೇಲಾಧಿಕಾರಿಗಳು ಈತನ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದೂ ಪ್ರಶ್ನೆಯಾಗಿದೆ.

Ballari: Video Of Account Superintendent Romance With Woman Worker Viral

ಮಹಿಳಾ ಸಿಬ್ಬಂದಿಯೊಂದಿಗೆ ಲೆಕ್ಕ ಅಧೀಕ್ಷಕ ಸಂಪತ್ ಕುಮಾರ್ ಈ ರೀತಿ ವರ್ತಿಸುತ್ತಿದ್ದ ಕುರಿತು ಈಗಾಗಲೇ 3 ಬಾರಿ ದೂರು ನೀಡಿದ್ದೇವೆ. ಅಲ್ಲದೇ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಮನವಿಯನ್ನೂ ಮಾಡಿದ್ದೇವೆ. ಆದರೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿದ್ದಾರೆ ಪಂಚಾಯ್ತಿ ಅಧ್ಯಕ್ಷೆ ಭಾರತಿ. ಜಿಲ್ಲಾಧಿಕಾರಿಗಳು ವರ್ಗಾವಣೆಯಾದ ಕಾರಣ ಆತನ ಮೇಲೆ ಕ್ರಮಕೈಗೊಳ್ಳಲು ಆಗಲಿಲ್ಲ ಎನ್ನಲಾಗಿದ್ದು, ಈಗ ಹೊಸದಾಗಿ ಬಂದಿರುವ ಅಧಿಕಾರಿಗೆ ಕೊರೊನಾ ಸೋಂಕು ಬಂದಿದೆ. ಆದ್ದರಿಂದ ಅವರು ಚೇತರಿಸಿಕೊಂಡು ಕಚೇರಿಗೆ ಬಂದ ಬಳಿಕ ಮತ್ತೆ ಅವರ ಮೇಲೆ ಕ್ರಮ ಕೈಗೊಳ್ಳಲು ಒತ್ತಡ ಹಾಕುತ್ತೇವೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+