ಬಳ್ಳಾರಿಯಲ್ಲಿ ಸೆಣಸಲಿರುವ ಆಮ್ ಆದ್ಮಿ ಮಾಳಗಿ

ಬಳ್ಳಾರಿ, ಮಾ. 22 : ಪತ್ರಕರ್ತ ಶಿವಕುಮಾರ್ ಗಿರಿಯಪ್ಪ ಮಾಳಗಿ ಅವರು ಬಳ್ಳಾರಿ ಮೀಸಲು ಲೋಕಸಭಾ ಕ್ಷೇತ್ರದ ಎಎಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಮಲಾಪುರ ಮೂಲದ ಇವರು ಆಂಗ್ಲ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಎಸ್.ಆರ್. ಹಿರೇಮಠ್ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

'ಆಮ್ ಆದ್ಮಿ ಪಾರ್ಟಿ'ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮಾಳಗಿ ತೊಡಗಿಕೊಂಡಿದ್ದರು. ಇವರ ತಂದೆ ಕಮಲಾಪುರದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಬಳ್ಳಾರಿಯಲ್ಲಿ ಬಿಜೆಪಿಯ ಬಿ ಶ್ರೀರಾಮುಲು ಮತ್ತು ಕಾಂಗ್ರೆಸ್ ಧುರೀಣ ಎನ್.ವೈ. ಹನುಮಂತಪ್ಪ ಅವರ ವಿರುದ್ಧ ಸೆಣಸಲಿರುವ ಮಾಳಗಿ ಅವರ ಸಂಕ್ಷಿಪ್ತ ಬಯೋಡೇಟಾ ಇಲ್ಲಿದೆ. [ಆಪ್ ಅಭ್ಯರ್ಥಿಗಳ ಪರಿಚಯ]

Shivakumar Malagi biodata : AAP candidate in Bellary

* ಜನ್ಮದಿನಾಂಕ : 8 ಆಕ್ಟೋಬರ್ 1982 (ವಯಸ್ಸು 32)
* ಜನ್ಮ ಸ್ಥಳ : ಕಮಲಾಪುರ ಹೊಸಪೇಟೆ ತಾಲೂಕು
* ತಂದೆ : ದಿವಂಗತ ಗಿರಿಯಪ್ಪ ಮಾಳಗಿ

ವಿದ್ಯಾಭ್ಯಾಸ : ರಾಷ್ಟ್ರೋತ್ಥಾನ ವಿದ್ಯಾಪರಿಷತ್ ಹಗರಿಬೊಮ್ಮನಳ್ಳಿ, ಸರ್ಕಾರಿ ಪ್ರಥಾಮಿಕ ಶಾಲೆ ಟಿ.ಬಿ ಡ್ಯಾಂ, ಸರ್ಕಾರಿ ಪ್ರೌಡ ಶಾಲೆ ಕಮಲಾಪುರ, ಪಿಯುಸಿ ವಿಜಯನಗರ ಕಾಲೇಜ್ ಹೊಸಪೇಟೆ. ಬಿ.ಎ ಪದವಿ ಕರ್ನಾಟಕ ಕಾಲೇಜ್ ಧಾರವಾಡ, ಎಂ.ಎ (ಸಮೂಹ ಸಂವಹನ ಮತ್ತ ಪತ್ರಿಕೋದ್ಯಮ), ಎಲ್.ಎಲ್.ಬಿ ಪದವಿ (ಅಪೂರ್ಣ) [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ವೃತ್ತಿ ಹಿನ್ನೆಲೆ : ಈ ಟಿವಿ ಕನ್ನಡ ಹೈದ್ರಾಬಾದ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸ್ ಆಫ್ ಇಂಡಿಯಾ, ಬಳ್ಳಾರಿ, ಡೆಕ್ಕನ್ ಕ್ರಾನಿಕಲ್ (ಹಿರಿಯ ವರದಿಗಾರ). ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ವಿರುದ್ದ ಒಂದು ಚಳವಳಿಯಂತೆ ನಿರಂತರವಾಗಿ ತಮ್ಮ ಬರವಣಿಗೆ ಮೂಲಕ ಅಕ್ರಮ ಗಣಿಗಾರಿಕೆ ಕುರಿತು ಜನ ಜಾಗೃತಿ ಮೂಡಿಸಿದ್ದರು.

ಸಂಘ ಚಟುವಟಿಕೆ : ಸಮಾಜ ಪರಿವರ್ತನ ಸಮುದಾಯ ಸದಸ್ಯರು, ಜನ ಸಂಗ್ರಾಮ ಪರಿಷತ್ ರಾಜ್ಯ ಕಾರ್ಯಕಾರಣಿ ಸದಸ್ಯರು, ನ್ಯಾಷನಲ್ ಕಮಿಟಿ ಫರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರ್ಸಸ್ ಸದಸ್ಯ.

ಆಮ್ ಆದ್ಮಿ ಪಾರ್ಟಿ ಚಟುವಟಿಕೆ : ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿಗಳು ಹಾಗೂ ಆಪ್ ಪಕ್ಷದ ಹಿರಿಯ ನಾಯಕರಾದ ಪ್ರಶಾಂತ್ ಭೂಷಣ್ ಅವರಿಂದ ಪ್ರಭಾವಿತರಾಗಿ'ಆಪ್' ಪಕ್ಷವು ಜನ್ಮ ತಾಳಿದ ದಿನ : 26 ನವೆಂಬರ್ 2012ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪಕ್ಷದ ಸದಸ್ಯತ್ವ ಸ್ವಿಕರಿಸಿ ಪಕ್ಷದ ಸಿದ್ದಾಂತವನ್ನು ಒಪ್ಪಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+