ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯ ಮೂರ್ನಾಲ್ಕು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ: ಸೋಮಶೇಖರ್‌ ರೆಡ್ಡಿ ಹೊಸ ಬಾಂಬ್‌

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್‌, 27: ಜಿಲ್ಲೆಯ ಮೂರು ನಾಲ್ಕು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಬಿಜೆಪಿ ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಸ್ಕ್ಯಾಮ್ ಸಿದ್ದರಾಮಯ್ಯ ಅಭಿಯಾನ ಮತ್ತು ಕಾಂಗ್ರೆಸ್ ವಿರುದ್ಧ ಕರೆ ಕೊಟ್ಟಿದ್ದ ಪ್ರತಿಭಟನೆಯಲ್ಲಿ ಶಾಸಕರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಜಿಲ್ಲೆಯ ಮೂರ್ನಾಲ್ಕು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವುದಕ್ಕೆ ಚರ್ಚೆ ನಡೆಸುತ್ತಿದ್ದಾರೆ. ಸಿನಿಮಾ ಈಗ ಶುರು ಆಗಿದೆ. ಮುಂದೆ ನೋಡಿ ನಿಮಗೆ ಗೊತ್ತಾಗುತ್ತದೆ. ಬಿಜೆಪಿಯಲ್ಲಿದ್ದವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಅವರು ನಮ್ಮನ್ನು ಕಾಂಗ್ರೆಸ್‌ಗೆ ಆಹ್ವಾನಿಸುವುದೇನು? ಅವರೇ ಬಿಜೆಪಿಗೆ ಸೇರಲಿದ್ದಾರೆ. ಈಗಾಗಲೇ ಜಿಲ್ಲೆಯ ಮೂರ್ನಾಲ್ಕು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವುದಕ್ಕೆ ಮಾತುಕತೆ ನಡೆಸುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

ಬಳ್ಳಾರಿ ವಿಮ್ಸ್‌ ದುರಂತ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಚಿವಬಳ್ಳಾರಿ ವಿಮ್ಸ್‌ ದುರಂತ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಚಿವ

ಕಾಂಗ್ರೆಸ್ ಮುಳುಗುವ ಹಡುಗು. ಅಲ್ಲಿಗೆ ಯಾವುದೇ ಕಾರಣಕ್ಕೂ ಯಾರು ಹೋಗುವುದಿಲ್ಲ. ರಾಹುಲ್ ಗಾಂಧಿ ಅವರು ಐರನ್ ಲೆಗ್ ಇದ್ದಂತೆ, ಅವರು ಬಳ್ಳಾರಿಗೆ ಬಂದರೆ ನಮ್ಮ ಗೆಲುವು ಖಚಿತ. ಇಲ್ಲಿ "ಭಾರತ ಜೋಡೋ" ಯಾತ್ರೆ ನಡೆಸುತ್ತಿದ್ದಾರೆ. ರಾಜಸ್ಥಾನದಲ್ಲಿ "ಕಾಂಗ್ರೆಸ್ ತೋಡೋ" ಯಾತ್ರೆ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.

Scam Siddaramaiah campaign in Bellary district

ಈ ಬಾರಿಯೂ ಬಿಜೆಪಿಗೆ ಗೆಲುವು
ಈಗ ಸಿನಿಮಾ ಆರಂಭವಾಗಿದ್ದು, ಮುಂದೆ ಇನ್ನು ಬಹಳ ನೋಡುವುದು ಇದೆ. ಯಾರು ಎಲ್ಲಿಗೆ ಹೋಗುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ರಾಹುಲ್ ಗಾಂಧಿ ಐರನ್ ಲೆಗ್ ಇದ್ದಂತೆ. ಕಳೆದ ಬಾರಿ ಬಳ್ಳಾರಿಗೆ ಬಂದಿದ್ದರು. ಆಗ ಕಾಂಗ್ರೆಸ್ ಪಕ್ಷ ಸೋತು ಹೋಗಿತ್ತು. ಈ ಬಾರಿಯೂ ಬಳ್ಳಾರಿಗೆ ಬಂದರೆ ನಮ್ಮ ಗೆಲವು ಖಚಿತ. ಜನಾರ್ಧನ್‌ ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ. ಅವಳಿ ಜಿಲ್ಲೆಯ ಹತ್ತು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Scam Siddaramaiah campaign in Bellary district

ಬಳ್ಳಾರಿ ಬಿಜೆಪಿ ಘಟಕದಿಂದ ಸ್ಕ್ಯಾಮ್ ರಾಮಯ್ಯ ಪೋಸ್ಟರ್ ಅಭಿಯಾನವನ್ನು ಆರಂಭಿಸಲಾಗಿತ್ತು. ನಗರದ ಗಡಗಿ ಚೆನ್ನಪ್ಪ ಸರ್ಕಲ್‌ನಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸ್ಕ್ಯಾಮ್ ರಾಮಯ್ಯ ಪೋಸ್ಟರ್‌ ಅನ್ನು ಅಂಟಿಸಿದರು. ಶಾಸಕ ಜಿ.ಸೋಮಶೇಖರ್‌ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

English summary
Scam Siddaramaiah campaign by MLA Somashekara Reddy in Ballari. Three to four MLAs of district will join BJP: G Somashekara Reddy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X