Satish jarkiholi Next CM?: ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ವಿಚಾರ- ಸಚಿವ ಕೃಷ್ಣೆಬೈರೇಗೌಡ ಪ್ರತಿಕ್ರಿಯೆ ನೀಡಿದ್ದು ಹೀಗೆ...

ಬಳ್ಳಾರಿ ನವೆಂಬರ್ 21: ಸೌದತ್ತಿ ಶಾಸಕ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗೋದು ಸತ್ಯ ಹೇಳಿಕೆ ವಿಚಾರವಾಗಿ ಕಂದಾಯ ಸಚಿವ ಕೃಷ್ಣೆಬೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವನ್ನು ಕೂಡ ಪಕ್ಷ ನಿರ್ಧಾರ ಮಾಡುತ್ತೆ. ನಾವು ಜನರಿಗೆ ಆಡಳಿತ ನೀಡಲು ಒತ್ತು ಕೊಡಬೇಕಿದೆ. ಜನರು ಕೂಡ ಅದನ್ನೇ ನಿರೀಕ್ಷೆ ಮಾಡ್ತೀದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಇದ್ದಾರೆ. ಪಕ್ಷದ ಶಾಸಕರು ಎಲ್ಲರೂ ಸೇರಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದೇವೆ. ಅವರ ನೇತೃತ್ವದಲ್ಲೇ ನಾವು ಜನರಿಗೆ ಒಳ್ಳೆಯ ಆಡಳಿತ ಕೊಡಬೇಕು ಎಂದು ಹೇಳಿದರು.

Satish jarkiholi Next CM: Minister Krishna Byre Gowda responded as follows..

ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ನಾಲ್ಕು ಗೊಡೆ ಮಧ್ಯೆ ಪಕ್ಷ ಚರ್ಚೆ ಮಾಡ್ತದೆ. ಈಗಾಗಲೇ ಸಿಎಂ ಇದ್ದಾರೆ, ಜನಪರವಾದ ಕೆಲಸವನ್ನು ನಾವು ಮಾಡ್ತೀದ್ದೇವೆ. ಜನರಿಗೂ ನಮಗೂ ಕೂಡ ಒಳ್ಳೆಯದಾಗಿರುತ್ತೆ. ಅದು ಬಿಟ್ಟು ಅಧಿಕಾರದ ಬಗ್ಗೆ ಚರ್ಚೆಯಾದ್ರೆ ಒಳ್ಳೆಯದಲ್ಲ. ಇದರಿಂದ ಜನರಿಗೂ ಲಾಭವಿಲ್ಲ. ಜನರು ಅವರ ಆಸೆಯ ಅನುಗುಣವಾಗಿ ಹೇಳಿಕೆ ಕೊಡ್ತಾರೆ. ಅವರ ಹೇಳಿಕೆ ಅವರ ಸ್ವಾತಂತ್ರ ಎಂದು ಸಚಿವ ಕೃಷ್ಣೆಬೈರೇಗೌಡ ಪ್ರತಿಕ್ರಿಯಿಸಿದ್ದಾರೆ.

ಸತೀಶ್ ಜಾರಕಿಹೊಳಿ ಮುಂದಿನ ಸಿಎಂ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಕಾಂಗ್ರೆಸ್‌ ಶಾಸಕ ವಿಶ್ವಾಸ್ ವೈದ್ಯ, ಆ ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟೋ ಸತ್ಯವೋ, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಅಣ್ಣಾ ಮುಖ್ಯಮಂತ್ರಿ ಆಗುವುದು ಕೂಡ ಅಷ್ಟೇ ಸತ್ಯ ಎಂದು ಹೇಳಿದ್ದಾರೆ.

ದೀಪಾವಳಿ ಹಾಗೂ ರಾಜ್ಯೋತ್ಸವ ನಿಮಿತ್ತ ರಸಮಂಜರಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮ ಉದ್ಘಾಟಕರಾಗಿ ಭಾಗಿಯಾಗಿದ್ದ ಸವದತ್ತಿ ಶಾಸಕ ಸಿಎಂ ವಿಚಾರದ ಬಗ್ಗೆ ಯಾರು ಕೂಡಾ ಮಾತನಾಡಬಾರದು ಎಂದು ಆದೇಶಿಸಿದ್ದರೂ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದಿದ್ದಾರೆ.

ಈ ಭಾಗದ ನಾಯಕ, ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು. ಬೇರೆ ಕೆಲಸದಿಂದ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದು ಕಾರ್ಯಕ್ರಮಕ್ಕೆ ಹೋಗುವಂತೆ ಕರೆ ಮಾಡಿದ್ದರು ಎಂದ ವಿಶ್ವಾಸ್ ವೈದ್ಯ, ಈ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಸತೀಶ್ ಅಣ್ಣಾ ಜಾರಕಿಹೊಳಿ ಹೊರ ಹೊಮ್ಮುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಿರುವ ಸತೀಶ್ ಅಣ್ಣಾ ಜಾರಕಿಹೊಳಿ ಅಣ್ಣಾಗೆ ಹೆಚ್ಚಿನ ಶಕ್ತಿಯನ್ನ ಕೊಟ್ಟು ಕರ್ನಾಟಕದ ಮುಖ್ಯಮಂತ್ರಿಯಾಗಿ ನೋಡಬೇಕು ಅಂತಾ ಹೇಳ್ತಿದ್ದಾರೆ. ಅದು ನೂರಕ್ಕೆ ನೂರರಷ್ಟು ಸತ್ಯ. ಆ ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟೋ ಸತ್ಯವೋ, ಮುಂದಿನ ದಿನಗಳಲ್ಲಿ ಈ ಬೆಳಗಾವಿ ಗಡಿ ಭಾಗದಿಂದ ಸತೀಶ್ ಜಾರಕಿಹೊಳಿ ಅಣ್ಣ ಮುಖ್ಯಮಂತ್ರಿ ಆಗುವುದು ಅಷ್ಟೇ ಸತ್ಯ ಎಂದಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲವನ್ನೇ ಸೃಷ್ಟಿ ಮಾಡಿದೆ.

ಸಿದ್ದರಾಮಯ್ಯ ಬಿಟ್ಟರೆ ಡಿಕೆ ಶಿವಕುಮಾರ್ ಮುಂದಿನ ಸಿಎಂ ಎನ್ನುವ ಹೊತ್ತಿನಲ್ಲಿ ಸತೀಶ್ ಜಾರಕಿಹೊಳಿ ಹೆಸರು ಹೊಸದಾಗಿ ಕೇಳಿಸಲು ಆರಂಭಸಿದ್ದು ಈ ಬೆಳವಣಿಗೆ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+