ಹಂಪಿಗೆ ಬಂದು ಮೆಟ್ರೋ ರೈಲು ಮಾದರಿ ವಾಹನ

ಬಳ್ಳಾರಿ, ಮಾರ್ಚ್ 10; ವಿಶ್ವ ಪರಂಪರೆ ತಾಣ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಚಾರಕ್ಕೆ ವಿನೂತನ ವಾಹನ ಬಂದಿದೆ. ಮೆಟ್ರೋ ರೈಲು ಮಾದರಿಯ ಮಿನಿ ಬಸ್‌ನಲ್ಲಿ ಸಂಚಾರ ನಡೆಸುತ್ತಾ ಪ್ರವಾಸಿಗರು ಹಂಪಿಯ ಸೌಂದರ್ಯ ಸವಿಯಬಹುದಾಗಿದೆ.

ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಪ್ರವಾಸಿಗರಿಗೆ ವಿನೂತನ ಸಾರಿಗೆ ವ್ಯವಸ್ಥೆ ಮಾಡಿದೆ. ಬ್ಯಾಟರಿ ಚಾಲಿತ ಈ ವಾಹನಗಳಲ್ಲಿ ಪ್ರವಾಸಿಗರು ಸಂಚಾರ ನಡೆಸಬಹುದು.

ಈ ವಾಹನಗಳಲ್ಲಿ ಒಂದೇ ಬಾರಿಗೆ 20 ಜನರು ಕುಳಿತು ಸ್ಮಾರಕಗಳ ಸೊಬಗನ್ನು ಸವಿಯಬಹುದು. ಬೆಂಗಳೂರು ಮೂಲದ ಖಾಸಗಿ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿರುವ ಪ್ರಾಧಿಕಾರ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತಂದಿದೆ.

New Battery Vehicle For Tourusts In Hampi

ಈ ವಾಹನ ಸಂಚಾರದ ಪ್ರಾಯೋಗಿಕ ಸಂಚಾರ ಯಶಸ್ವಿಯಾದರೆ ಖಾಯಂಗೊಳಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಹಂಪಿ, ಆನೆಗೊಂದಿ, ದರೋಜಿ ಕರಡಿಧಾಮ, ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಈ ಬಸ್ ಓಡಾಟ ನಡೆಸಿದೆ.

ಎಷ್ಟು ದರ ನೀಡಬೇಕು?: ಹಂಪಿ ಸ್ಮಾರಕಗಳಾದ ಕಮಲ ಮಹಲ, ಶ್ರೀವಿರೂಪಾಕ್ಷೇಶ್ವರ ದೇಗುಲ, ತೇರು ಬೀದಿ, ಕಲ್ಲಿನತೇರು, ವಿಜಯವಿಠ್ಠಲ ದೇಗುಲ, ಮಹಾನವಮಿ ದಿಬ್ಬ, ಗಜಶಾಲೆ ಸೇರಿದಂತೆ ವಿವಿಧ ಸ್ಮಾರಕಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರಿಗೆ ತಲಾ 300 ರೂಪಾಯಿಗಳ ದರವನ್ನು ನಿಗದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ಯಾಕೇಜ್ ರೂಪಿಸಲು ಚಿಂತಿಸಲಾಗಿದೆ.

"ಹಂಪಿಯ ಪ್ರವಾಸಿಗರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ಮೆಟ್ರೋ ರೈಲು ಮಾದರಿ ವಾಹನ ಪರಿಚಯಿಸಲಾಗಿದೆ" ಎಂದು ಹಂಪಿ ವಿಶ್ವ ಪರಂಪರೆ ಪ್ರಾಧಿಕಾರದ ಪ್ರಭಾರಿ ಆಯುಕ್ತ ಸಿದ್ದರಾಮೇಶ್ವರ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+