Minister Nagendra: 'ಜನಾರ್ದನ ರೆಡ್ಡಿ ಅವರಿಗೆ ನನ್ನ ಮೇಲೆ ಬಹಳ ಪ್ರೀತಿ'- ಸಚಿವ ನಾಗೇಂದ್ರ
ಬಳ್ಳಾರಿ ನವೆಂಬರ್ 29: 'ಜನಾರ್ದನ ರೆಡ್ಡಿ ಅವರಿಗೆ ನನ್ನ ಮೇಲೆ ಬಹಳ ಪ್ರೀತಿ ಇದೆ' ಎಂದು ಸಚಿವ ನಾಗೇಂದ್ರ ಟಾಂಗ್ ಕೊಟ್ಟಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಬಗ್ಗೆ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಹೇಳಿಕೆಗೆ ಸಚಿವ ನಾಗೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಡಿಕೆ ಶಿವಕುಮಾರ್ ಅವರ ಕೇಸ್ ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ. ಆ ಕೇಸ್ ಗಳು ಸೂಕ್ತ ರೀತಿಯಲ್ಲಿ ಆಗಿಲ್ಲ. ಸ್ಪೀಕರ್ ಅವರ ಪರ್ಮಿಷನ್ ತೆಗೆದುಕೊಂಡಿಲ್ಲ. ಅವತ್ತಿನ ಸಂದರ್ಭದಲ್ಲಿ ಡಿಕೆಶಿ ಅವರನ್ನ ಒಳಗೆ ಹಾಕಿದ್ರೆ ಸಾಕು ಎನ್ನುವಂತೆ ಇತ್ತು. ಹೀಗಾಗಿ ತರಾತುರಿಯಲ್ಲಿ ನಿಯಮ ಪಾಲಿಸದೇ ಯಡವಟ್ಟು ಮಾಡಿದ್ದಾರೆ. ಹೀಗಾಗಿ ನಾವು ಈಗ ಪರಿಶೀಲಿಸಿ, ಅಡ್ವಕೇಟ್ ಜನರಲ್ ಅವರ ಬಳಿ ಲೀಗಲ್ ಒಪಿನಿಯನ್ ಪಡೆದು ಮುಂದುವರೆದಿದ್ದೇವೆ' ಎಂದು ನಾಗೇಂದ್ರ ಅವರು ತಿಳಿಸಿದ್ದಾರೆ.

'ಜನಾರ್ದನ ರೆಡ್ಡಿ ಅವರ ಹೇಳಿಕೆ ನೋಡಿದ್ದೇನೆ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನಾನು ಆ ಪ್ರಕರಣದಲ್ಲಿ ಹೊರ ಬರ್ತೀನಿ. ಒಬ್ಬ ಆರೋಪಿ ನನ್ನ ಮೇಲೆ ಆರೋಪ ಮಾಡಿದ್ದಾನೆ. ಇದು ರಾಜಕೀಯ ಪ್ರೇರಿತವಾಗಿ ನಡೆದಿದೆ ಅಂತಾ ಇದೆ. ನನಗೆ ನ್ಯಾಯ ದೇವತೆ ಮೇಲೆ ನಂಬಿಕೆ ಇದೆ. ನಾಲ್ಕು ಕೇಸ್ ನಿಂದ ಹೊರ ಬರ್ತಿನಿ. ಒಂದು ವೇಳೆ ಮುಂದೆ ಯಾವ ರೀತಿ ತೆಗೆದುಕೊಂಡು ಹೊಗಬೇಕೋ ಆ ರೀತಿ ತೆಗೆದುಕೊಂಡು ಹೋಗ್ತೇವೆ. ನಾನು ಮನವಿ ಕೊಟ್ಟರೆ ನನ್ನ ಪ್ರಕರಣ ಬಿಡ್ತಾರೆ ಎಂದಿದ್ದಾರಲ್ಲ, ನಾನು ಲಾಯರ್ ಬಳಿ ಚರ್ಚಿಸುವೆ. ನನ್ನ ಮನವಿ ಕ್ಯಾಬಿನೆಟ್ ಅಲ್ಲಿ ಪಾಸ್ ಆಗಿ ಒಳ್ಳೆದಾಗೋದಾದ್ರೆ ನಾನು ಮಾಡುವೆ' ಎಂದು ಅವರು ಹೇಳಿದರು.
'ನನಗೆ ಯಾವ ಸರ್ಕಾರದ ಮೇಲೆ ಯಾವುದೇ ದ್ವೇಷ ಇಲ್ಲ. ನಾನು ದ್ವೇಷದ ರಾಜಕಾರಣ ಮಾಡೋನಲ್ಲ. ಜನಾರ್ದನ ರೆಡ್ಡಿ ಅವರು ಸಿದ್ದರಾಮಯ್ಯನವರು ಬೇಕು ಅಂತಾ ಮಾಡಿದ್ದಾರೆ ಎಂದಿದ್ದಾರೆ. ಇಡೀ ರಾಜ್ಯ ಗಮನಿಸ್ತಾ ಇದೆ, ಹೆಂಗಾಗಿದೆ ಅಂತಾ. ಜನಾರ್ದನ ರೆಡ್ಡಿ ಅವರಿಗೆ ನನ್ನ ಮೇಲೆ ಬಹಳ ಪ್ರೀತಿ ಇದೆ, ಅವರಿಗೆ ಧನ್ಯವಾದಗಳು. ಆದ್ರೇ ನಮ್ಮ ಸರ್ಕಾರದ ವಿಚಾರ ಬಂದಾಗ ಅವರನ್ನ ವಿರೋಧಿಸುವೆ. ನಮ್ಮ ಪ್ರಕರಣಗಳು ಇವತ್ತೋ ನಾಳೆನೋ ಇತ್ಯರ್ಥವಾಗತ್ತೆ' ಎಂಬ ಜನಾರ್ದನ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ.
'ಶಿಕೆ ಶಿವಕುಮಾರ್ ಅವರ ಪ್ರಕರಣ ಬೇರೆ ನಮ್ಮ ಪ್ರಕರಣ ಬೇರೆ. ಅವರು ತಪ್ಪಿತಸ್ಥರಲ್ಲ, ಖಂಡಿತ ಹೊರಗ್ ಬರ್ತಾರೆ. ಡಿಕೆಶಿ ಅವರ ಮೇಲೆ ಆಗಿರೊದೆಲ್ಲ ರಾಜಕೀಯ ಪ್ರೇರಿತ' ಎಂದು ಸಚಿವ ನಾಗೇಂದ್ರ ಅವರು ಹೇಳಿದರು.
ಜನಾರ್ದನ ರೆಡ್ಡಿ ಹೇಳಿಕೆ ಏನು?
'ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನ್ಯಾಯ ಕಲ್ಪಸಿದ ಮೇಲೆ, ಅವರದ್ದೇ ಸಚಿವ ಸಂಪುಟದಲ್ಲಿರುವ ನಾಗೇಂದ್ರ ಮೇಲಿರುವ ಇಪ್ಪತೈದುಕ್ಕೂ ಹೆಚ್ಚು ಪ್ರಕರಣಗಳನ್ನೂ ಮುಖ್ಯಮಂತ್ರಿ ವಾಪಸ್ ಪಡೆಯಬೇಕು ಅಲ್ಲವೇ' ಎಂದು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಪ್ರಶ್ನಿಸಿದ್ದರು.
'ಗಣಿಗಾರಿಕೆಗೆ ಸಂಬಂಧಿಸಿದಂತೆ ನನ್ನ ಮೇಲೆ ಐದು ಪ್ರಕರಣಗಳಿದ್ದರೆ, ನಾಗೇಂದ್ರ ಮೇಲೆ ಇಪ್ಪತೈದುಕ್ಕೂ ಹೆಚ್ಚು ಪ್ರಕರಣಗಳು ಇವೆ. ಈ ಹಿಂದೆ ಗಣಿಗಾರಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ದೊಡ್ಡ ಹೋರಾಟ ನಡೆಸಿದ್ದರು. ಈಗ ನಾಗೇಂದ್ರ ಅವರನ್ನೇ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾಋಎ. ಶಿವಕುಮಾರ್ಸ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸಿದ್ದರಾಮಯ್ಯ ಅವರು ವಾಪಸ್ ಪಡೆದು ನ್ಯಾಯ ಕಲ್ಪಿಸಿದ್ದಾರೆ. ಅದೇ ನಾಗೇಂದ್ರಗೆ ಅನ್ಯಾಯ ಮಾಡುತ್ತಿದ್ದಾರೆ' ಎಂದಿದ್ದರು.












Click it and Unblock the Notifications