ಬಳ್ಳಾರಿಯಲ್ಲಿ ಭಾರೀ ಮಳೆ; ತುಂಬಿ ಹರಿದ ಹಳ್ಳಕೊಳ್ಳ

ಬಳ್ಳಾರಿ, ಸೆಪ್ಟೆಂಬರ್ 25: ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮಳೆಯಾಗಿದ್ದು, ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಕರೂರು, ದರೂರು, ಹಾಗಲೂರು ಗ್ರಾಮದ ಹಳ್ಳಗಳು ತುಂಬಿಕೊಂಡಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ಸಿರುಗುಪ್ಪ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಹಳ್ಳದ ಪಕ್ಕದ ಸಾವಿರಾರು ಎಕರೆ ಭತ್ತ ಜಲಾವೃತವಾಗಿದೆ.

ಬಿಎಂ ಸೂಗೂರು ಗ್ರಾಮದಲ್ಲಿ ಮಳೆಯಿಂದಾಗಿ ವೀರಭದ್ರ ರೆಡ್ಡಿ ಎಂಬುವವರ ಮನೆಯ ಅರ್ಧ ಗೋಡೆ ಬಿದ್ದಿದೆ. ಜಲಾವೃತವಾಗಿ, ಮನೆಯಲ್ಲಿ ಸಿಲುಕಿಕೊಂಡಿದ್ದ ಜನರನ್ನು ದೋಣಿ ಮುಖಾಂತರ ರಕ್ಷಣೆ ಮಾಡಲಾಗಿದೆ.

Heavy Rain Cause Flood In Ballary District

ರಾಜ್ಯದ ಇತರೆಡೆಯೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಬೆಂಗಳೂರು, ಆನೇಕಲ್, ಕೋಲಾರ, ರಾಮನಗರ, ತುಮಕೂರು, ಬಾಗಲಕೋಟೆ, ರಾಯಚೂರು, ಬಳ್ಳಾರಿ, ಯಾದಗಿರಿ ಮೊದಲಾದೆಡೆ ಭರ್ಜರಿ ಮಳೆಯಾಗಿದೆ. ಉತ್ತರ ಕರ್ನಾಟಕದ ಕೆಲ ಜಲಾಶಯಗಳು ತುಂಬಿ ಹೋಗುತ್ತಿದ್ದು, ಪ್ರವಾಹ ಪರಿಸ್ಥಿತಿ ಮತ್ತೆ ಎದುರಾಗುವ ಸಾಧ್ಯತೆ ಇದೆ. ಪ್ರವಾಹದಿಂದ ನಲುಗಿ ಹೋಗಿದ್ದ ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಮತ್ತೆ ಆತಂಕ ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+