ಹೊಸಪೇಟೆಯಿಂದ ಹಂಪಿ ಎಕ್ಸ್‌ಪ್ರೆಸ್ ಈಗ ಎಲೆಕ್ಟ್ರಿಕಲ್ ರೈಲು

ವಿಜಯನಗರ, ಜೂನ್ 17; ವಿಜಯನಗರ ಜಿಲ್ಲೆ ಹೊಸಪೇಟೆಯಿಂದ ಇನ್ನು ಮುಂದೆ ಹಂಪಿ ಎಕ್ಸ್‌ಪ್ರೆಸ್ ರೈಲು ಎಲೆಕ್ಟ್ರಿಕಲ್ ರೈಲಾಗಿ ಸಂಚಾರ ನಡೆಸಲಿದೆ. ಇಷ್ಟು ದಿನ ಡಿಸೇಲ್ ಇಂಜಿನ್‌ ಆಗಿ ರೈಲು ಸಂಚಾರ ನಡೆಸುತ್ತಿತ್ತು.

ಹಂಪಿ ಎಕ್ಸ್‌ಪ್ರೆಸ್ ರೈಲು ಎಲೆಕ್ಟ್ರಿಕಲ್ ರೈಲಾಗಿ ಸಂಚಾರ ಆರಂಭಿಸುವುದರ ಮೂಲಕ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದೆ. ಸಂಪೂರ್ಣ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಂಡು ಹೊಸಪೇಟೆಯಿಂದ ಜೂನ್ 5ರಿಂದ ಸಂಚಾರ ಆರಂಭಗೊಂಡಿದೆ.

ಇನ್ನು ಮುಂದೆ ಬೆಂಗಳೂರಿನಿಂದ ಹೊಸಪೇಟೆ ನಗರಕ್ಕೆ ಬರುವ ರೈಲುಗಳು ಎಲೆಕ್ಟ್ರಿಕಲ್ ಇಂಜಿನ್ ಮೂಲಕವೇ ಸಂಚರಿಸುವುದು ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ಹಂಪಿ ಎಕ್ಸ್‌ಪ್ರೆಸ್ ರೈಲು ಎಲೆಕ್ಟ್ರಿಕಲ್ ರೈಲಾಗಿ ಸಂಚಾರ ನಡೆಸಿದೆ.

ಜೂನ್ 6. ಶುಕ್ರವಾರ ರಾತ್ರಿ 10.10ಕ್ಕೆ ಬೆಂಗಳೂರಿನಿಂದ ಸಂಚಾರ ಆರಂಭಿಸಿದ 'ಹಂಪಿ ಎಕ್ಸ್‌ಪ್ರೆಸ್' ರೈಲು ಶನಿವಾರ ಬೆಳಗ್ಗೆ 7.10ಕ್ಕೆ ಹೊಸಪೇಟೆ ನಗರ ತಲುಪಿದೆ. ವಾರಕ್ಕೊಮ್ಮೆ ಈ ರೈಲು ಸಂಚಾರ ನಡೆಸಲಿದೆ.

ಎಲ್ಲಾ ರೈಲುಗಳಿಗೂ ಎಲೆಕ್ಟ್ರಿಕ್ ಇಂಜಿನ್

ಎಲ್ಲಾ ರೈಲುಗಳಿಗೂ ಎಲೆಕ್ಟ್ರಿಕ್ ಇಂಜಿನ್

ಬೆಂಗಳೂರು-ಜೋಧಪುರ್ ಎಕ್ಸ್‌ಪ್ರೆಸ್ ರೈಲುಗಳು ಕೂಡ ಎಲೆಕ್ಟ್ರಿಕಲ್ ಇಂಜಿನ್ ಮೂಲಕವೇ ಸಂಚರಿಸಲಿವೆ. ಇದಾದ ನಂತರ ಈ ಮಾರ್ಗದಿಂದ ಓಡಾಡುವ ಎಲ್ಲ ರೈಲುಗಳು ಹಂತ ಹಂತವಾಗಿ ಹೊಸ ವ್ಯವಸ್ಥೆಗೆ ಬದಲಾಗುತ್ತವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಹುಬ್ಬಳ್ಳಿ-ಹೊಸಪೇಟೆ ರೈಲುಗಳು

ಹುಬ್ಬಳ್ಳಿ-ಹೊಸಪೇಟೆ ರೈಲುಗಳು

ಹುಬ್ಬಳ್ಳಿಯಿಂದ ಹೊಸಪೇಟೆಗೆ ಬರುವ ರೈಲುಗಳು ಎಂದಿನಂತೆ ಡೀಸೆಲ್ ಇಂಜಿನ್ ಮೂಲಕವೇ ಸಂಚಾರ ನಡೆಸಲಿವೆ. ಹೊಸಪೇಟೆಯಿಂದ ಮುಂದಿನ ಸಂಚಾರಕ್ಕೆ ನಗರದಲ್ಲಿ ಡೀಸೆಲ್ ಇಂಜಿನ್ ಬದಲಿಸಿ, ಎಲೆಕ್ಟ್ರಿಕಲ್ ಇಂಜಿನ್ ಜೋಡಿಸಲಾಗುತ್ತದೆ. ಇದಕ್ಕಾಗಿ 25ರಿಂದ 30 ನಿಮಿಷ ಅವಧಿ ಬೇಕಾಗಲಿದೆ. ಆದರೆ, ಸ್ಥಳೀಯ ಪ್ರಯಾಣಿಕರಿಗೆ ಹೆಚ್ಚಿನ ಕಾಲಾವಕಾಶ ಸಿಗಲಿದೆ. ಹುಬ್ಬಳ್ಳಿ ಮಾರ್ಗದಲ್ಲೂ ವಿದ್ಯುತ್ ಮಾರ್ಗದ ಕಾಮಗಾರಿ ಭರದಿಂದ ನಡೆಯುತ್ತಿದೆ. ಆ ಕೆಲಸ ಪೂರ್ಣಗೊಂಡರೆ ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ರೈಲುಗಳು ಸಂಚರಿಸುತ್ತವೆ.

ಎಲೆಕ್ಟ್ರಿಕಲ್ ಇಂಜಿನ್ ಉಪಯೋಗ

ಎಲೆಕ್ಟ್ರಿಕಲ್ ಇಂಜಿನ್ ಉಪಯೋಗ

ಈ ಹಿಂದೆ ಎಲೆಕ್ಟ್ರಿಕಲ್ ಇಂಜಿನ್ ಹೊಂದಿದ ರೈಲುಗಳು ಬಳ್ಳಾರಿ ಜಂಕ್ಷನ್ ತನಕ ಸಂಚರಿಸುತ್ತಿದ್ದವು. ಈಗ ಹೊಸಪೇಟೆ ವರೆಗೆ ಯಾವುದೇ ಅಡೆತಡೆಯಿಲ್ಲದೆ ರೈಲುಗಳು ಸುಗಮವಾಗಿ ಸಂಚರಿಸಲಿವೆ. ಎಲೆಕ್ಟ್ರಿಕಲ್ ರೈಲುಗಳು ಹೊಗೆರಹಿತವಾಗಿ ಚಲಿಸುವುದರಿಂದ ಪರಿಸರ ಸ್ನೇಹಿಯಾಗಿ ಮಾಲಿನ್ಯರಹಿತವಾಗಿವೆ. ಡಿಸೇಲ್‌ ಇಂಜಿನ್‌ಗಿಂತಲೂ‌ ಕಡಿಮೆ‌ ವೆಚ್ಚದಲ್ಲಿ ಇದು ಓಡಾಡುತ್ತದೆ ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಅರ್ಥಿಕ ಹೊರೆಯೂ ಕಡಿಮೆಯಾಗಲಿದೆ. ಡಿಸೇಲ್ ಇಂಜಿನ್‌ಗಿಂತ ಎಲೆಕ್ಟ್ರಿಕಲ್ ರೈಲು ವೇಗವಾಗಿ ಚಲಿಸುವುದರಿಂದ ಪ್ರಯಾಣಿಕರಿಗೆ ಸಮಯ ಉಳಿತಾಯವಾಗಲಿದೆ.

ರೈಲು ನಿಲ್ದಾಣದ ಹೊಸ ಕಟ್ಟಡ

ರೈಲು ನಿಲ್ದಾಣದ ಹೊಸ ಕಟ್ಟಡ

"ಎಲೆಕ್ಟ್ರಿಕಲ್ ಇಂಜಿನ್ ಜೂನ್ 4 ಬೆಂಗಳೂರಿನಿಂದ ರಾತ್ರಿ 10:30ಕ್ಕೆ‌ ಹೊರಟು ಬೆಳಗ್ಗೆ ಜೂನ್ 5 ರಂದು ಹೊಸಪೇಟೆ ನಗರಕ್ಕೆ ಮೊದಲ ಬಾರಿಗೆ ಪ್ರಯಾಣಿಕರನ್ನು ಹೊತ್ತು ಆಗಮಿಸಿತು. ಸಮಯವೂ ಉಳಿತಾಯವಾಗಲಿದೆ. ಸದ್ಯ, ಕೋವಿಡ್ ಇರುವುದರಿಂದ ಹಾಲಿ ವೇಳಾಪಟ್ಟಿ ಪ್ರಕಾರವೇ ರೈಲುಗಳು ಸಂಚರಿಸಲಿವೆ" ಎಂದು ಹೊಸಪೇಟೆ ನಿಲ್ದಾಣದ ಅಧಿಕಾರಿ ಎಸ್. ಎಸ್. ಉಮೇಶ ಹೇಳಿದ್ದಾರೆ.

ಹೊಸಪೇಟೆ ನಗರದ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಭರದಿಂದ ನಡೆಯುತ್ತಿದೆ. ಈಗಾಗಲೇ ಪ್ಲಾಟ್‌ಫಾರಂ ಕೆಲಸ ಪೂರ್ಣಗೊಂಡಿದೆ. ಟಿಕೆಟ್ ಕೌಂಟರ್, ಕಚೇರಿ ಒಳಗೊಂಡ ಕಟ್ಟಡ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+