ಬಳ್ಳಾರಿಯ ಪ್ರತಿಷ್ಠಿತ ಹೋಟೆಲ್​​​ನಲ್ಲಿ ಮಾಜಿ ಶಾಸಕನ ಸಂಬಂಧಿ ನಿಗೂಢ ಸಾವು

ಬಳ್ಳಾರಿ, ನವೆಂಬರ್ 20: ನಗರದಲ್ಲಿನ ಪ್ರತಿಷ್ಠಿತ ಖಾಸಗಿ ಹೋಟೆಲ್​ವೊಂದರಲ್ಲಿ ಸಿಂಧನೂರು ಮಾಜಿ ಶಾಸಕ ಬಾದರ್ಲಿ ಹಂಪನಗೌಡರ ಸಂಬಂಧಿಕರೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಜವಳಗೇರಿ ರುದ್ರಗೌಡ ಮೃತ ವ್ಯಕ್ತಿಯಾಗಿದ್ದು, 73 ರಿಂದ 75 ವರ್ಷವಿರಬಹುದು ಎಂದು ಅಂದಾಜಿಸಲಾಗಿದೆ. ಇವರು ಸಿಂಧನೂರು ಮಾಜಿ ಶಾಸಕ ಬಾದರ್ಲಿ ಹಂಪನಗೌಡರ ಸಂಬಂಧಿಕರಾಗಿದ್ದು, ವೈಷ್ಣವಿ ಗ್ರ್ಯಾಂಡ್ ಹೋಟೆಲ್​ನ ಕೊಠಡಿಯಲ್ಲಿ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನ್ನಲಾಗಿದೆ. ಮೃತದೇಹವು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಮಾಜಿ ಶಾಸಕ ಬಾದರ್ಲಿ ಹಂಪನಗೌಡ ಹಾಗೂ ಕುಟುಂಬಸ್ಥರು ದೌಡಾಯಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹ ಹಾಗೂ ಹೋಟೆಲ್​ನ ಸಿಸಿಟಿವಿ ಫುಟೇಜ್​ಗಳನ್ನು ಪರಿಶೀಲಿಸಿದ್ದು, ಈ ವೇಳೆ ಮುಖಕ್ಕೆ ಮಾಸ್ಕ್​ ಹಾಕಿದ್ದ ಮಹಿಳೆಯೊಬ್ಬಳು ರುದ್ರಗೌಡ ತಂಗಿದ್ದ ಕೋಣೆಗೆ ತೆರಳಿ ವಾಪಸಾಗಿರುವ ದೃಶ್ಯ ಸೆರೆಯಾಗಿದೆ ಎಂದು ತಿಳಿದುಬಂದಿದೆ.

Ballari: Former Mla Badarli Hampanagowdara Relative Found Dead In Hotel Room

ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಬಾದರ್ಲಿ ಹಂಪನಗೌಡ ಹಾಗೂ ಕುಟುಂಬಸ್ಥರು ಆರೋಪಿಸಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+