Darshan Bail: ಬದಲಾಗಿದೆ ದರ್ಶನ್ ವರ್ತನೆ; ಸಿಕ್ಕಿದ್ಯಾ ಜಾಮೀನು ಸಿಗುವ ಮುನ್ಸೂಚನೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. 100 ಕ್ಕೂ ಹೆಚ್ಚು ದಿನಗಳಿಂದ ಜೈಲಿನಲ್ಲಿರುವ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 27ರಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ದರ್ಶನ್‌ಗೆ ಸೆಷನ್ ಕೋರ್ಟ್‌ನಲ್ಲೇ ಜಾಮೀನು ಸಿಗುವ ವಿಶ್ವಾಸವಿದೆ ಎಂದು ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಎರಡು ದಿನಗಳಿಂದ ನಟ ದರ್ಶನ್ ವರ್ತನೆಯಲ್ಲಿ ಕೂಡ ಬದಲಾವಣೆಯಾಗಿದೆ.

ಹೌದು, ಕಳೆದ ಎರಡು ದಿನಗಳಿಂದ ದರ್ಶನ್ ಮುಖದಲ್ಲಿ ನಗು ಮೂಡಿದೆ. ಇಷ್ಟು ದಿನ ಆತಂಕ, ಬೇಸರದಲ್ಲೇ ಇದ್ದ, ನಟ ದರ್ಶನ್ ಕಳೆದ ಎರಡು ದಿನಗಳಿಂದ ನಗು ನಗುತ್ತಾ ಜೈಲು ಅಧಿಕಾರಿಗಳು, ವಕೀಲರ ಬಳಿ ಮಾತನಾಡುವುದನ್ನು ವಿಡಿಯೋಗಳಲ್ಲಿ ನೋಡಬಹುದಾಗಿದೆ.

Darshan Behavior Changes Over the Last Two Days for This Reason

ವಕೀಲರ ಜೊತೆ ಭೇಟಿಗೆ ಬರುವ ಸಂದರ್ಭದಲ್ಲಿ ನಟ ದರ್ಶನ್‌ ಆರಾಮಾಗಿ ಜೈಲು ಸಿಬ್ಬಂದಿ ಜೊತೆ ಮಾತನಾಡುತ್ತಾ ಬಂದಿದ್ದಾರೆ. ವಕೀಲರ ಜೊತೆ ಕೂಡ ದರ್ಶನ್ ಸಮಾಧಾನದಿಂದ ಮಾತನಾಡಿದ್ದಾರೆ ಎನ್ನಲಾಗಿದೆ.

ಜಾಮೀನು ಸಿಗೋದು ಫಿಕ್ಸ್!

ಇನ್ನು ದರ್ಶನ್ ಪರ ವಕೀಲರ ಮಾತುಗಳ ಪ್ರಕಾರ ಸೆಷನ್ಸ್ ಕೋರ್ಟ್‌ನಲ್ಲೇ ದರ್ಶನ್‌ಗೆ ಜಾಮೀನು ಸಿಗುವ ಸಾಧ್ಯತೆ ಇದೆ. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅಗತ್ಯವೇನು ಬರುವುದಿಲ್ಲ ಎಂದಿದ್ದಾರೆ. ಇದು ದರ್ಶನ್‌ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಆರೋಪ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿರುವ ದರ್ಶನ್ ಪರ ವಕೀಲರು, ಜಾಮೀನಿಗಾಗಿ ವಾದಿಸಲು ಸಜ್ಜಾಗಿದ್ದಾರೆ.

ದರ್ಶನ್ ಭೇಟಿ ಮಾಡಿದ ಡೆವಿಲ್ ನಿರ್ದೇಶಕ

ಅಚ್ಚರಿಯ ಬೆಳವಣಿಗೆಯಲ್ಲಿ ದರ್ಶನ್‌ರ ಮುಂದಿನ ಸಿನಿಮಾ 'ಡೆವಿಲ್‌' ನಿರ್ದೇಶಕ ಪ್ರಕಾಶ್ ಗುರುವಾರ ಜೈಲಿನಲ್ಲಿ ಭೇಟಿ ಮಾಡಿದ್ದಾರೆ. ನಟ ದರ್ಶನ್‌ಗಾಗಿ ಎರಡು ಬ್ಯಾಗ್‌ಗಳಲ್ಲಿ ಬಾಳೆಕಾಯಿ ಚಿಪ್ಸ್, ಬಿಸ್ಕೆಟ್, ಡ್ರೈಫ್ರೂಟ್ಸ್ ಸೇರಿದಂತೆ ಹಲವು ತಿನಿಸುಗಳನ್ನು ತಂದುಕೊಟ್ಟಿದ್ದಾರೆ. ಜಾಮೀನು ಸಿಕ್ಕ ಬಳಿಕ ಅರ್ಧಕ್ಕೆ ನಿಂತಿರುವ ಸಿನಿಮಾದ ಮುಂದಿನ ಕೆಲಸಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ದರ್ಶನ್‌ಗೆ ಶೀಘ್ರದಲ್ಲೇ ಜಾಮೀನು ಸಿಗುವ ಮುನ್ಸೂಚನೆ ಇದ್ದು, ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಬಹುದು ಎನ್ನಲಾಗಿದೆ.

ದರ್ಶನ್‌ಗೆ ಜಾಮೀನು ಸಿಕ್ಕಿದರೆ ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಆಪ್ತರು ಈಗಾಗಲೇ ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ದರ್ಶನ್‌ಗೆ ಬೆನ್ನು ನೋವು ಇರುವ ಕಾರಣ ಮತ್ತು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವುದರಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತರಲು ಯೋಜಿಸಲಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+