ಲಗ್ನ ಪತ್ರಿಕೆಯಲ್ಲಿ ಕೇಂದ್ರದ ಯೋಜನೆ; ಫೋಟೋ ವೈರಲ್
ಬಳ್ಳಾರಿ, ಜನವರಿ 22: ಸಾಮಾನ್ಯವಾಗಿ ಲಗ್ನ ಪತ್ರಿಕೆಗಳನ್ನು ವಿಭಿನ್ನವಾಗಿ ಪ್ರಿಂಟ್ ಮಾಡಿಸುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಿಂಟ್ ಮಾಡುವ ಮೂಲಕ ಭಾರೀ ಸುದ್ದಿಗೆ ಗ್ರಾಸವಾಗಿದ್ದಾರೆ.
ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ "ಬೇಟಿ ಬಚಾವೋ ಬೇಟಿ ಪಾಡಾವೋ' ಎನ್ನುವ ಸ್ಲೋಗನ್ ಪ್ರಿಂಟ್ ಮಾಡಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ನಿವಾಸಿಗಳಾದ ಶ್ರೀ ಕೃಷ್ಣಾರಾವ್ ಮತ್ತು ಜ್ಯೋತಿ ಕುಲಕರ್ಣಿ ಎಂಬುವವರು ತಮ್ಮ ಮಗಳಾದ ಅನುಷಾ ಅವರ ಮದುವೆಯನ್ನು ಇದೇ ಜನವರಿ 27 ರಂದು ಮಾಡಲಿದ್ದಾರೆ.
ಆದ ಕಾರಣ ತಮ್ಮ ಮುದ್ದಿನ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ "ಬೇಟಿ ಬಚಾವೋ ಬೇಟಿ ಪಡಾವೋ' ಹಿಂಬರಹ ಪ್ರಿಂಟ್ ಮಾಡಿಸಿದ್ದು, ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಇದೇ ದಿನಾಂಕ 27 ರಂದು ಮಗಳ ಮದುವೆಯನ್ನು ಬೆಳಗಾವಿ ಮೂಲದ ನಿತಿನ್ ಎಂಬವವರ ಜೊತೆ ನಡೆಯಲಿದ್ದು, ತಮ್ಮ ಮುದ್ದಿನ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ನಿಶ್ಚಯಿಸಿದ್ದಾರೆ.
ಇನ್ನು ಈ ಇಬ್ಬರೂ ಬದಂಪತಿಗಳಿಗೆ ಹೆಣ್ಣು ಮಕ್ಕಳು ಅಂದರೆ ತುಂಬಾನೇ ಇಷ್ಟ ಅಂತೆ. ಹೀಗಾಗಿ ತಮ್ಮ ಮಗಳನ್ನು ಬೆಳೆಸಿದ ರೀತಿಯಲ್ಲಿ ಬೇರೆಯವರು ಬೆಳೆಯಬೇಕು ಎನ್ನುವ ಉದ್ದೇಶದಿಂದ ಈ ರೀತಿಯಲ್ಲಿ ಲಗ್ನ ಪತ್ರಿಕೆಯಲ್ಲಿ ಪ್ರಿಂಟ್ ಮಾಡಿಸಿದ್ದಾರಂತೆ.












Click it and Unblock the Notifications