ತೃತೀಯ ರಂಗ ಮಳೆಗಾಲದ ಅಣಬೆ : ಶ್ರೀರಾಮುಲು ಅಣಕ

ಬಳ್ಳಾರಿ, ಮೇ 24: ಮಳೆಗಾಲದಲ್ಲಿ ಹುಟ್ಟುವ ಅಣಬೆಯಂತೆ ಚುನಾವಣೆ ಸಮಯಕ್ಕೆ ತೃತೀಯ ರಂಗ ಕಾಣಿಸಿಕೊಳ್ಳುತ್ತದೆ ಹಾಗೇ ಮಾಯವಾಗುತ್ತದೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ತೃತೀಯ ರಂಗಕ್ಕೆ ಭವಿಷ್ಯ ಇಲ್ಲ, ತೃತೀಯ ರಂಗದಲ್ಲಿ ಕಾಂಗ್ರೆಸ್‌ಗೆ ಸ್ಥಾನವೂ ಇಲ್ಲ, ಕಾಂಗ್ರೆಸ್‌ ಪಕ್ಷ ಹಿಂದಿನಿಂದಲೂ ತೃತೀಯ ರಂಗದ ವಿರೋಧಿ ಆಗಿಯೇ ಇದೆ ಆದರೆ ಈಗ ಅದಕ್ಕೆ ತೃತೀಯ ರಂಗದ ಮೇಲೆ ಪ್ರೀತಿ ಹೆಚ್ಚಾಗಿದೆ ಎಂದರು.

ನಿನ್ನೆ ನಡೆದ ಪ್ರಮಾಣ ವಚನ ಕಾರ್ಯಕ್ರಮವನ್ನು ಟೀಕಿಸಿದ ಅವರು, 'ಜೆಡಿಎಸ್-ಕಾಂಗ್ರೆಸ್ ಸ್ವಾರ್ಥ ರಾಜಕಾರಣ ಮಾಡುತ್ತಿವೆ, ನಿನ್ನೆ ನಡೆದ ಕಾರ್ಯಕ್ರಮ ಕಾಂಗ್ರೆಸ್‌ನ ಪಥನದ ಆರಂಭ' ಎಂದರು.

BJP MLA Sriramulu lambasted on third front

ರೈತರ ಸಾಲ ಮನ್ನಾ ಬಗ್ಗೆ ಕುಮಾರಸ್ವಾಮಿ ಯೂ-ಟರ್ನ್ ಹೊಡೆದಿದ್ದಾರೆ, ಅವರು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಹುಮತ ಬಂದಿದ್ದರೆ ಸಾಲಮನ್ನಾ ಮಾಡುತ್ತಿದ್ದೆ ಎನ್ನುವ ಅವರು ಬಹುಮತ ಇಲ್ಲದಿದ್ದರೆ ರಾಜಿನಾಮೆ ಏಕೆ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಗೆಲ್ಲಿಸಿಕೊಡದಾಗದೇ ಇದ್ದದ್ದಕ್ಕೆ ನೋವಿದೆ ಎಂದು ಹೇಳಿದ ಅವರು, ವಿರೋಧಪಕ್ಷವಾಗಿದ್ದುಕೊಂಡು ಸರ್ಕಾರಕ್ಕೆ ನಿದ್ದೆ ಮಾಡಲು ಬಿಡುವುದಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+