ಹುಷಾರ್! ಬಳ್ಳಾರಿಯ ಈ ಆಸ್ಪತ್ರೆಗೆ ಬಂದರೆ ರೋಗ ಗ್ಯಾರಂಟಿ
ಬಳ್ಳಾರಿ,
ಜನವರಿ 16: ಆಸ್ಪತ್ರೆ ಸುತ್ತ ಬೀಡು ಬಿಟ್ಟ ಹಂದಿಗಳು, ಆಸ್ಪತ್ರೆಗೆ ಬರುವವರಿಗೋ ದುರ್ವಾಸನೆಯ ಸ್ವಾಗತ, ಇನ್ನು ಆಸ್ಪತ್ರೆ ಸುತ್ತಮುತ್ತಲ ಸ್ವಚ್ಛತೆ ಬಗ್ಗೆ ಮಾತನಾಡುವುದೇ ಬೇಡ... id="toptextpromo"> id='are-slot-1' class='oiad oi-axt oiadv'>ಸದಾ
ಅವ್ಯವಸ್ಥೆಗಳ ಮೂಲಕವೇ ಸುದ್ದಿಯಾಗುವ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಹಂದಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿರುವ ಆಸ್ಪತ್ರೆ ಆವರಣ ಕಂಡು ಇಲ್ಲಿಗೆ ಬರುವವರೇ ಭಯ ಪಡುತ್ತಿದ್ದಾರೆ. ಸಚಿವರ ತವರು ಜಿಲ್ಲೆಯಲ್ಲೇ ಹೀಗಾದರೆ ಹೇಗೆ? ಆಸ್ಪತ್ರೆ ಅವ್ಯವಸ್ಥೆ ಕುರಿತು ವರದಿ ವಿಸ್ತೃತ ವರದಿ ಇಲ್ಲಿದೆ... id='are-slot-2' class='oiad oi-axt oiadv'>
ಹಂದಿಗಳ ಬೀಡಾದ ಆಸ್ಪತ್ರೆ ಆವರಣ
ಕಲ್ಯಾಣ ಕರ್ನಾಟಕದ ಬಹು ದೊಡ್ಡ ಆಸ್ಪತ್ರೆ ಎಂದರೆ, ಗಣಿ ನಾಡು ಬಳ್ಳಾರಿಯ ವಿಮ್ಸ್ ಆಸ್ಪತ್ರೆ. ಆದರೆ ಈ ಆಸ್ಪತ್ರೆ ಆವರಣವೀಗ ಹಂದಿಗಳ ಆವಾಸ ಸ್ಥಾನವಾಗಿದೆ. ರೋಗಿಗಳಿಗೆ ಆರೋಗ್ಯವನ್ನು ನೀಡಬೇಕಾದ ಆಸ್ಪತ್ರೆಯೇ ರೋಗ ಹರಡುವ ಸ್ಥಳವಾಗಿದೆ. ಬಳ್ಳಾರಿ ವಿಮ್ಸ್ ಆಸ್ಪತ್ರೆಯನ್ನು ಹತ್ತು ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಆದರೆ ಆಸ್ಪತ್ರೆಯ ಬಹುತೇಕ ಭಾಗದಲ್ಲಿ ಒಳಚರಂಡಿ ಕೊಳಕು ನೀರು ಹರಿದು ಬರುತ್ತದೆ. ಇದೇ ನೀರಿನಲ್ಲಿ ಹಂದಿಗಳು ಬಿದ್ದು ಹೊರಳಾಡುತ್ತವೆ.

ಕ್ಯಾರೇ ಎನ್ನದ ವಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ
ಆಸ್ಪತ್ರೆಯ ಆವರಣದಲ್ಲಿ ಹಂದಿಗಳ ದಂಡೇ ಇದೆ. ಆದರೆ ಇದನ್ನೆಲ್ಲಾ ನೋಡುತ್ತಿದ್ದರೂ ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾಪಾಡಲು ವಿಮ್ಸ್ ಆಡಳಿತ ಮಂಡಳಿ ಮುಂದಾಗಿಲ್ಲ.
ಬಡವರ ಸಂಜೀವಿನಿ ಅಂತಿರುವ ಈ ಆಸ್ಪತ್ರೆ ಇಂದು ಬಡವರ ಪಾಲಿಗೆ ಉಚಿತವಾಗಿ ನರಕ ದರ್ಶನ ಮಾಡಿಸುವಂತೆ ಭಾಸವಾಗುತ್ತಿದೆ.
ಚಿಕಿತ್ಸೆಗೆ ಬರುವ ಸಾವಿರಾರು ಜನ
ರಾಯಚೂರು, ಬಳ್ಳಾರಿ ಪಕ್ಕದ ಆಂಧ್ರ ಪ್ರದೇಶದ ಸಾವಿರಾರು ಜನ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ರೋಗಿಗಳ ಜೊತೆಯಲ್ಲಿ ಅವರ ಸಂಬಂಧಿಕರು ಸಹ ಆಸ್ಪತ್ರೆಗೆ ಬಂದಿರುತ್ತಾರೆ. ಆದರೆ ಬಂದವರಿಗೆ ಆಸ್ಪತ್ರೆಯಲ್ಲಿ ಮಲಗುವ ವ್ಯವಸ್ಥೆ ಇಲ್ಲ. ಹೀಗಾಗಿ ಜನ ಆಸ್ಪತ್ರೆಯ ಕೊಳಚೆ ನೀರಿರುವ ಪಕ್ಕದ ಜಾಗದಲ್ಲಿಯೇ ಮಲಗುತ್ತಾರೆ. ಇಲ್ಲಿಯೇ ಊಟ ಮಾಡಬೇಕಾದ ಪರಿಸ್ಥಿತಿ ಇದೆ. ರೋಗಿಗಳ ಜೊತೆಯಲ್ಲಿ ಬಂದವರೇ ರೋಗಕ್ಕೆ ತುತ್ತಾಗುತ್ತಿದ್ದಾರೆ.

ಸುಮ್ಮನಿದ್ದಾರಲ್ಲ ಶ್ರೀರಾಮುಲು
ಹೈದರಾಬಾದ್ ಕರ್ನಾಟಕದ ಅತಿ ದೊಡ್ಡ ಆಸ್ಪತ್ರೆಯ ಈ ಅವ್ಯವಸ್ಥೆ ಗಮನಕ್ಕೆ ಬಂದರೂ ಆರೋಗ್ಯ ಸಚಿವ ಶ್ರೀರಾಮುಲು ಸುಮ್ಮನಿದ್ದಾರೆ. ಜನಪ್ರತಿನಿಧಿಗಳಿಗೆ ಈ ಆಸ್ಪತ್ರೆಯ ಪರಿಸ್ಥಿತಿ ಏಕೆ ಕಾಣುತ್ತಿಲ್ಲಾ ಎಂಬುದೇ ಜನರ ಪ್ರಶ್ನೆಯಾಗಿದೆ.












Click it and Unblock the Notifications