ಬಳ್ಳಾರಿಯಲ್ಲಿ ಮೆಂತೋಪ್ಲಸ್ ಡಬ್ಬಿ ನುಂಗಿ ಮಗು ಸಾವು
ಬಳ್ಳಾರಿ, ಏಪ್ರಿಲ್ 17: ನೆಗಡಿ, ತಲೆನೋವು ಕಾಣಿಸಿಕೊಂಡಾಗ ಬಳಕೆ ಮಾಡುವ 2 ರೂ. ಮುಖಬೆಲೆಯ ಮೆಂತೋಪ್ಲಸ್ ಡಬ್ಬಿ ನುಂಗಿ ಪುಟ್ಟ ಮಗುವೊಂದು ಪ್ರಾಣ ಕಳೆದುಕೊಂಡಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಿಡುಗುರ್ತಿ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. 9 ತಿಂಗಳ ಮಗು ಭಾರತಿ ಆಟ ಆಡುತ್ತಾ ಡಬ್ಬಿಯನ್ನು ನುಂಗಿದ್ದು ಗಂಟಲಲ್ಲಿ ಸಿಲುಕಿ ಸಾವಿಗೀಡಾಗಿದೆ.

ನಿನ್ನೆಯ ದಿನ ರಾತ್ರಿ ಮಗುವಿನ ತಾಯಿ ಮನೆ ಕೆಲಸ ಮಾಡುತ್ತಿದ್ದರು. ಆ ಸಂದರ್ಭ ಮನೆಯ ಮುಂದೆ ಮಕ್ಕಳೊಂದಿಗೆ ಆಟವಾಡುತ್ತಿದ್ದ ಈ ಮಗು ಆಕಸ್ಮಾತ್ ಆಗಿ ಮೆಂತೋಪ್ಲಸ್ ಡಬ್ಬಿ ನುಂಗಿದೆ. ತಕ್ಷಣವೇ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಪೋಷಕರು ಮುಂದಾದರು. ಆದರೆ ಮಾರ್ಗ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications