ಹಿಮಪಾತ; ಹೊಸಪೇಟೆ, ಹುಬ್ಬಳ್ಳಿ ಪ್ರವಾಸಿಗರನ್ನು ರಕ್ಷಿಸಿದ ಸೇನೆ
ಹೊಸಪೇಟೆ, ಮಾರ್ಚ್ 14; ಪ್ರವಾಸಕ್ಕೆ ತೆರಳಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತದಿಂದಾಗಿ ಹೋಟೆಲ್‌ನಲ್ಲಿ ಸಿಲುಕಿದ್ದ ವಿಜಯನಗರ, ಹುಬ್ಬಳ್ಳಿ ಮೂಲದ ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ.
ಹಿಮಪಾತದಿಂದಾಗಿ ಹೊಸಪೇಟೆ ಮತ್ತು ಹುಬ್ಬಳ್ಳಿ ಮೂಲದ ಪ್ರವಾಸಿಗರು ಕಾಶ್ಮೀರದ ಸೋನಾಮಾರ್ಗದ ಹೊಟೇಲ್‌ನಲ್ಲಿ ಸಿಲುಕಿದ್ದರು. ಕಾಶ್ಮೀರದ ಸ್ಥಳೀಯ ಆಡಳಿತ, ಮಿಲಿಟರಿ ಪಡೆಯಿಂದ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ.
ಹೊಸಪೇಟೆಯ ಪ್ರಕಾಶ್ ಮೆಹರವಾಡೆ ಈ ಕುರಿತು ಮಾಹಿತಿ ನೀಡಿದ್ದಾರೆ. ಹೊಟೇಲ್‌ನಿಂದ ರಕ್ಷಣೆ ಮಾಡಿದ ಎಲ್ಲರಿಗೂ ಸಿಆರ್‌ಪಿಎಫ್ ಕ್ಯಾಂಪ್‌ನಲ್ಲಿ ಉಪಹಾರ, ಟೀ ವ್ಯವಸ್ಥೆ ಮಾಡಲಾಗಿದೆ. ಯೋಧರಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಪ್ರಕಾಶ್ ಮತ್ತವರ ಕುಟುಂಬದ 15 ಜನರು, ಹುಬ್ಬಳ್ಳಿಯ ಕೇಶ್ವಾಪುರದ ಅಂಬಿಕಾ ನಗರದ ವೆಂಕಟೇಶ ಜಲಭಂಜನ್ ಕುಟುಂಬದ 8 ಜನರು ಹಿಮಪಾತದಿಂದಾಗಿ ಮೂರು ದಿನಗಳಿಂದ ಹೋಟೆಲ್‌ನಲ್ಲಿ ಸಿಲುಕಿದ್ದರು.
ಈ ಕುರಿತು ಸಚಿವ ಆನಂದ್ ಸಿಂಗ್ ಸೇರಿದಂತೆ ಹಲವರಿಗೆ ಮಾಹಿತಿ ನೀಡಲಾಗಿತ್ತು. ಜಮ್ಮು ಕಾಶ್ಮೀರದ ಪೊಲೀಸ್ ಆಯುಕ್ತರು ಹೋಟೆಲ್‌ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಯೋಧರ ಸಹಾಯದಿಂದ ಹೋಟೆಲ್‌ನಲ್ಲಿ ಸಿಲುಕಿದ್ದ ಎಲ್ಲರನ್ನೂ ರಕ್ಷಣೆ ಮಾಡಲಾಗಿತ್ತು.
ಮೊದಲ ಐದು ದಿನಗಳ ಕಾಲ ಕಾಶ್ಮೀರದ ಸುತ್ತಮುತ್ತಲಿನ ಪ್ರದೇಶಗಳನ್ನು ಎಲ್ಲರೂ ವೀಕ್ಷಿಸಿದ್ದರು. ಬಳಿಕ ಹಿಮಪಾತ ಆರಂಭವಾದ ಕಾರಣ ಹೋಟೆಲ್‌ನಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ರಸ್ತೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಹೋಟೆಲ್‌ನಲ್ಲಿ ಸಿಲುಕಿದ್ದರು.












Click it and Unblock the Notifications