ಬಳ್ಳಾರಿಯಲ್ಲಿ 30 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಆರ್ಸೆಲರ್ ಮಿತ್ತಲ್

ಬಳ್ಳಾರಿ, ನವೆಂಬರ್ 08 : ವಿಶ್ವದ ನಂಬರ್ 1 ಉಕ್ಕು ತಯಾರಿಕಾ ಕಂಪನಿ ಆರ್ಸೆಲರ್ ಮಿತ್ತಲ್ ಬಳ್ಳಾರಿಯಲ್ಲಿ 30 ಸಾವಿರ ಕೋಟಿ ವೆಚ್ಚದ ಘಟಕ ನಿರ್ಮಾಣ ಮಾಡಲು ಮುಂದಾಗಿದೆ. ಕರ್ನಾಟಕ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ.

ಆರ್ಸೆಲರ್ ಮಿತ್ತಲ್ 2010ರಲ್ಲಿಯೇ ಬಳ್ಳಾರಿಯಲ್ಲಿ ಘಟಕ ನಿರ್ಮಿಸಲು ಮುಂದಾಗಿತ್ತು. ಆದರೆ, ಕಚ್ಚಾ ವಸ್ತುಗಳ ಪೂರೈಕೆ ಬಗ್ಗೆ ಸರ್ಕಾರ ಭರವಸೆ ನೀಡಿದ ಕಾರಣ ಯೋಜನೆಯನ್ನು ಕೈಬಿಟ್ಟಿತ್ತು. ಈಗ ಪುನಃ ಸರ್ಕಾರಕ್ಕೆ ಘಟಕ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಿದೆ.

ಜೂನ್ 3, 2010ರಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿ ಲಕ್ಷ್ಮೀನಿವಾಸ್ ಮಿತ್ತಲ್ ಅವರು ಕರ್ನಾಟಕದಲ್ಲಿ 30 ಸಾವಿರ ಕೋಟಿ ವೆಚ್ಚದ ಘಟಕ ಮತ್ತು 750 ಮೆಗಾವಾಟ್ ವಿದ್ಯುತ್ ಉತ್ಪಾದನಾ ಕೇಂದ್ರ ಆರಂಭಿಸಲು ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

Arcelor Mittal to set up steel plant in Ballari

ಆದರೆ, ಕಚ್ಚಾ ವಸ್ತುಗಳ ಪೂರೈಕೆ ಬಗ್ಗೆ ಭರವಸೆ ಸಿಗದ ಕಾರಣ ಕರ್ನಾಟಕ ಸರ್ಕಾರ ನೀಡಿದ್ದ 2,800 ಎಕರೆ ಜಾಗದಲ್ಲಿ 600 ಮೆಗಾವಾಟ್ ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡಲ ಮುಂದಾಗಿತ್ತು. ಈಗ ಉಕ್ಕು ಘಟಕ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಸರ್ಕಾರದ ಅನುಮತಿ ಕೇಳಲಾಗಿದೆ.

ಸೌರ ವಿದ್ಯುತ್ ಘಟಕ ನಿರ್ಮಾಣ ಮಾಡಿದರೆ ಹೆಚ್ಚು ಉದ್ಯೋಗವಕಾಶ ಸೃಷ್ಟಿಯಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಘಟಕ ನಿರ್ಮಾಣಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈಗ ಉಕ್ಕು ತಯಾರಿಕಾ ಘಟಕ ಸ್ಥಾಪನೆ ಮಾಡಲು ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

ಬಳ್ಳಾರಿಯ ಕುಡಿತಿನಿ ಬಳಿ 2,800 ಎಕರೆ ಜಾಗವನ್ನು ಕೆಐಎಡಿಬಿ ಆರ್ಸೆಲರ್ ಮಿತ್ತಲ್ ಕಂಪನಿಗೆ ನೀಡಿತ್ತು. ತುಂಗ-ಭದ್ರಾ ನದಿಯ ನೀರನ್ನು ಬಳಕೆ ಮಾಡಿಕೊಳ್ಳಲು 2010ರಲ್ಲಿ ಒಪ್ಪಿಗೆ ನೀಡಿತ್ತು. ಈಗ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+