ಬಾಗಲಕೋಟೆ ಜಿಲ್ಲೆಯಲ್ಲಿ ಉತ್ತರ ಕರ್ನಾಟಕ ಬಂದ್ ಬಿಸಿ ಇಲ್ಲ
ಬಾಗಲಕೋಟೆ, ಆಗಸ್ಟ್.02: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದೆ ಎಂದಿನಂತೆ ಜನ ಜೀವನ ನಡೆದಿದೆ. ಬಸ್ ಗಳು ಎಂದಿನಂತೆ ಸಂಚಾರ ಮಾಡುತ್ತಿವೆ. ಶಾಲಾ ಕಾಲೇಜಿಗೆ ಯಾವುದೇ ರಜೆ ನೀಡಿಲ್ಲ.
ಬಂದ್ ಗೆ ಉತ್ತರ ಕರ್ನಾಟಕ ಹೋರಾಟ ಸಮಿತಿ ಸೇರಿದಂತೆ ಯಾವುದೇ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿಲ್ಲ. ಎಂದಿನಂತೆ ಜನಜೀವನ ಸಹಜ ಸ್ಥಿತಿಯತ್ತ ನಡೆದಿದ್ದು, ವಾಹನ ಸಂಚಾರ ಸೇರಿದಂತೆ ಪ್ರತಿಯೊಂದು ಸರಳವಾಗಿದೆ.
ಶಾಲೆ ಕಾಲೇಜು, ವಾಹನ ಸಂಚಾರ, ಸರ್ಕಾರಿ ಕಚೇರಿಗಳು ಎಂದಿನಂತೆ ಆರಂಭವಾಗಿವೆ. ಏತನ್ಮಧ್ಯೆ ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲ ಶೆಟ್ಟಿ ಮಾತ್ರ ಬಂದ್ ಮಾಡಿಯೇ ಸಿದ್ಧ ಎಂದು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. ಆದರೆ ಬಹಿರಂಗವಾಗಿ ಬಂದು ಹೋರಾಟ ಮಾಡುತ್ತಿಲ್ಲ.

ನಾಗೇಶ ಗೋಲ ಶೆಟ್ಟಿ ಅವರಿಗೆ ಬೆಂಬಲ ನೀಡಲ್ಲ ಎಂದು ಕಳೆದ ದಿನವೇ ಕೆಲ ಸಂಘಟನೆಯವರು ತಿಳಿಸಿದ್ದಾರೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಬಂದ್ ಪರಿಣಾಮ ಬೀರಿಲ್ಲ.












Click it and Unblock the Notifications