ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರನ ಟ್ಯಾಂಕರ್‌ನಲ್ಲಿ ಮಹನೀಯರ ಚಿತ್ರ... ಜನಹಿತ ಟ್ರಸ್ಟ್‌ಗೆ ಸಲಾಂ ಎಂದ ಜನತೆ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಜೂನ್ 6 : 75ನೇ ಸ್ವಾತಂತ್ಯೋತ್ಸವದ ನಿಮಿತ್ತವಾಗಿ ಜನಹಿತ ಟ್ರಸ್ಟ್ ಹಮ್ಮಿಕೊಂಡಿದ್ದ ವಿಶ್ವಭಾರತಿಗೆ ಕನ್ನಡದಾರತಿ ಅಭಿಯಾನ ಎಲ್ಲರ ಗಮನಸೆಳೆದಿದೆ.

ಟ್ರಸ್ಟ್‌ ಈ ಅಭಿಯಾನದಡಿ ಮುಧೋಳ ನಗರದಲ್ಲಿರುವ 75 ಕುಡಿಯುವ ನೀರಿನ ಟ್ಯಾಂಕ್‍ಗಳಿಗೆ ಬಣ್ಣ ಬಳಿದು ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಮಹನಿಯರು, ಪ್ರಸಿದ್ಧ ದಾರ್ಶನಿಕರ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಆ ಮೂಲಕ ನಗರದ ಸಾರ್ವಜನಿಕರಿಗೆ ಸ್ವಾತಂತ್ರೋತ್ಸವ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಹಾಗೂ ಅವರ ಆದರ್ಶಗಳನ್ನು ತಿಳಿಸುವ ವಿಭಿನ್ನ ಪ್ರಯತ್ನ ಮಾಡಲಾಗಿದೆ.

ಮಳೆ, ಗಾಳಿ; ಬಾಳೆ, ಪಪ್ಪಾಯ ಬೆಳೆ ನಾಶ, ಲಕ್ಷಾಂತರ ರೂ. ನಷ್ಟಮಳೆ, ಗಾಳಿ; ಬಾಳೆ, ಪಪ್ಪಾಯ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

ಜನಹಿತ ಟ್ರಸ್ಟ್ ನೇತೃತ್ವದಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಹಳೆಯ ನೀರಿನ ಟ್ಯಾಂಕ್‍ಗಳಿಗೆ ಬಣ್ಣದ ಮೂಲಕ ಹೊಸ ಸ್ಪರ್ಶ ನೀಡುವುದರೊಂದಿಗೆ ಟ್ಯಾಂಕ್ ಮೇಲೆ ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕ ಸೇರಿದಂತೆ ದೇಶದ ಮಹಾನ್ ನಾಯಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸುವ ಮೂಲಕ ನೀರಿನ ಟ್ಯಾಂಕ್‍ಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲಾಗಿದೆ.

Public praise Janahitha Trust for Painting Freedom Fighter pictures on Water Tanks in Nudhol

ಎಷ್ಟೋ ದಿನದ ನಂತರ ಒಳಪು ಕಂಡ ಟ್ಯಾಂಕ್
ಎಷ್ಟೋ ದಿನಗಳು ಬಣ್ಣವೇ ಕಾಣದಿದ್ದ ಹಲವು ನೀರಿನ ಟ್ಯಾಂಕ್‍ಗಳ ಸುತ್ತ ಕಸ ಬೆಳೆದು ನಿಂತಿತ್ತು. ಜನಹಿತ ಟ್ರಸ್ಟ್‌ನವರು ಹಮ್ಮಿಕೊಂಡಿದ್ದ ಅಭಿಯಾನದಡಿ ಟ್ಯಾಂಕ್‍ಗಳ ಸುತ್ತ ಬೆಳದಿದ್ದ ಕಸವನ್ನು ಯುವಕರು ಸ್ವಚ್ಛಗೊಳಿಸಿ ಬಣ್ಣಬಳಿದು ನೀರಿನ ಟ್ಯಾಂಕ್‍ಗಳು ಕಂಗೊಳಿಸುವಂತೆ ಮಾಡಿದ್ದಾರೆ. ಜೊತೆಗೆ ಉತ್ತಮ ಮಾಹಿತಿಯನ್ನು ಒದಗಿಸಿಕೊಡುವ ಒಳ್ಳೆಯ ಮಾಹಿತಿಯನ್ನು ನೀಡಿದ್ದಾರೆ.

Video; ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಬಾಗಲಕೋಟೆ ವಿಶೇಷ ಜಾತ್ರೆVideo; ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಬಾಗಲಕೋಟೆ ವಿಶೇಷ ಜಾತ್ರೆ

ಜನರಿಂದ ಪ್ರಶಂಸೆ
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮುಧೋಳದ 75 ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛ ಮಾಡಿ, ಬಣ್ಣ ತುಂಬಿ ಚಿತ್ರಬಿಡಿಸಿರುವ ಟ್ರಸ್ಟ್‌ನ ಈ ಕಾರ್ಯಕ್ಕೆ ಜನಸಾಮನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಜನಹಿತ ಟ್ರಸ್ಟ್ ಹತ್ತು ಹಲವಾರು ಕಾರ್ಯಗಳಿಂದ ಸಮಾಜದಲ್ಲಿ ಗುರುತಿಸಿಕೊಂಡಿದೆ. ಅವುಗಳಲ್ಲಿ ಮುಖ್ಯವಾಗಿ ಕೊರೊನಾ ವೇಳೆಯಲ್ಲಿ ಫ್ರಂಟ್‍ಲೈನ್ ವಾರಿಯರ್ಸ್, ಕ್ವಾರಂಟೈನ್ ಆಗಿದ್ದ ಸಾವಿರಾರರು ಜನರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿ ಮನಗೆದ್ದಿತ್ತು.

Public praise Janahitha Trust for Painting Freedom Fighter pictures on Water Tanks in Nudhol

2020ರಲ್ಲಿ ಮುಧೋಳ ಮತ್ತು ಜಮಖಂಡಿ ತಾಲೂಕಿನಲ್ಲಿ ಏಕಕಾಲಕ್ಕೆ 25 ಲಕ್ಷ ಬೀಜದುಂಡೆ ತಯಾರಿಸಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಗರದ ಗಡದನ್ನವರ ವೃತ್ತದಿಂದ ಮಾಸರಡ್ಡಿ ಆಸ್ಪತ್ರೆವರೆಗೆ ನಿರ್ಮಾಗೊಂಡಿರುವ ರಸ್ತೆಯ ಮಧ್ಯೆದಲ್ಲಿ ಡಿವೈಡರ್‌ನಲ್ಲಿ ಸಸಿ ಬೆಳೆಸುವ ಕಾರ್ಯ ಸೇರಿದಂತೆ ಹತ್ತಾರು ಕಾರ್ಯಗಳನ್ನು ಕೈಗೊಂಡು ಜನಹಿತಕ್ಕಾಗಿ ಶ್ರಮಿಸುತ್ತಿದೆ. ಟ್ರಸ್ಟಿನಡಿಯಲ್ಲಿ ನಾರಾಯಣ (ರಾಜು) ಯಡಹಳ್ಳಿ, ಬಸವರಾಜ ಗಣಿ, ವಿಠ್ಠಲ ಪರೀಟ, ಸಂಜು ನಿಗಡೆ, ಸಂತೋಷ ಬಾಡಗಿ, ಹನಮಂತ ನಲಗೆ, ಪ್ರಕಾಶ ಲಿಂಬಿಕಾಯಿ, ಶಿವು ಐನಾಪುರ, ಕಿರಣ ಜುನ್ನು, ಮಹೇಶ ಕಬ್ಬೂರ, ರಾಹುಲ ಕೊಲ್ಹಾರ ಯುವಕರ ತಂಡ ಅಭಿಯಾನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
As part of the 75th Independence Day celebrations, Janahita Trust has cleaned up 75 water tanks in mudhol city and painted freedom fighters picturs on tanks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X