ಯಾವ ಅತೃಪ್ತ ಶಾಸಕರು ಪಕ್ಷ ಬಿಡೋಲ್ಲ : ಸಿದ್ದರಾಮಯ್ಯ

Recommended Video

      ಯಾವ ಅತೃಪ್ತ ಶಾಸಕರು ಪಕ್ಷ ಬಿಡೋಲ್ಲ : ಸಿದ್ದರಾಮಯ್ಯ | Oneindia Kannada

      ಬಾಗಲಕೋಟೆ, ಮಾರ್ಚ್ 05 : 'ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ ಎಲ್ಲೂ ಹೋಗಲ್ಲ. ಅವರು ಪಕ್ಷದಲ್ಲೇ ಇರುತ್ತಾರೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

      ಮಂಗಳವಾರ ಬಾದಾಮಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಮೂವರು ಶಾಸಕರು ಪಕ್ಷದಲ್ಲೇ ಇರುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ' ಎಂದು ಹೇಳಿದರು.

      'ಮೋದಿಗೆ ರಾಜಕೀಯ ಬಿಟ್ಟು ಬೇರೇನೂ ಗೊತ್ತಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಯುವಕರು ಉದ್ಯೋಗ ಕೊಡಿ ಅಂದ್ರೆ ಟೀ ಮಾರಿ ಅಂತಾರೆ. ಮೋದಿ ಒಬ್ಬ ಪ್ರಧಾನಿಯಾಗಿ ಗಂಭೀರವಾಗಿ ಮಾತನಾಡುವುದನ್ನು ಕಲಿಯಲಿಲ್ಲ' ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

      No Congress MLA will quit party says Siddaramaiah

      'ಮೋದಿಯಾಗಲೀ, ಅಮಿತ್ ಶಾ ಆಗಲೀ ಬಿಜೆಪಿಯವರು ಯಾರೇ ಆಗಲಿ ಸುಳ್ಳು ಹೇಳುವುದು, ಬೇಜವಾಬ್ದಾರಿ ಹೇಳಿಕೆ ಕೊಡುವುದರಲ್ಲಿ ನಿಸ್ಸೀಮರು. ಯಾವುದನ್ನು ಮಾತನಾಡಬೇಕು, ಯಾವುದನ್ನು ಮಾತನಾಡಬಾರದು ಎನ್ನುವ ಪ್ರಜ್ಞೆ ಇಲ್ಲ' ಎಂದು ಟೀಕಿಸಿದರು.

      'ಹುತಾತ್ಮರಾದ ಸೈನಿಕರ ಮೇಲೆ ರಾಜಕೀಯ ಮಾಡಬಾರದು. ನಮಗೆಲ್ಲ ಸೈನಿಕರ ಮೇಲೆ ಗೌರವ ಇದೆ. ಅವರೆಲ್ಲ ನೂರಾ ಮೂವತ್ತು ಕೋಟಿ ಜನರ ರಕ್ಷಣೆ ಮಾಡುತ್ತಿದ್ದಾರೆ. ಹುತಾತ್ಮ ಸೈನಿಕರ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವುದು ನೀಚತನದ ಪರಮಾವಧಿ' ಎಂದು ಸಿದ್ದರಾಮಯ್ಯ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+