Breaking: ಬಾಗಲಕೋಟೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಪಿಡಿಒಗಳು
ಬಾಗಲಕೋಟೆ, ಅಕ್ಟೋಬರ್ 20: ಜಮೀನನ್ನು ಎನ್‌ಎ ಮಾಡಿಕೊಡಲು ಒಂದು ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಪಿಡಿಒಗಳನ್ನು ಬಾಲಕೋಟೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ
ಗುರುವಾರ ಬಾಗಲಕೋಟೆ ತಾಲೂಕಿನ ಬೇವಿನಮಟ್ಟಿ ಗ್ರಾಮ ಪಂಚಾಯಿತಿಯ ಪಿಡಿಓ ಚಂದ್ರಕಾಂತ್ ತಿಮ್ಮಾಪುರ ಹಾಗೂ ರಾಂಪುರ ಪಿಡಿಓ ಮುದಕಪ್ಪ ತೇಜಿ ಎಂಬುವರ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಎನ್‌ಎ ಪ್ಲಾಟ್ ಎಂಟ್ರಿ ಮಾಡಿಕೊಡಲು ಹೊನ್ನಾಕಟ್ಟೆಯ ವಾಸು ಜಾಧವ್ ಎಂಬುವವರಿಂದ 2,50,000 ಲಕ್ಷರೂಗಳ ಲಂಚದ ಬೇಡಿಕೆ ಇಟ್ಟಿದ್ದ ಪಿಡಿಒಗಳು ಮೊದಲ ಕಂತಿನಲ್ಲಿ ಒಂದು ಲಕ್ಷ ರೂಗಳನ್ನು ಹಾಗೂ ಉಳಿದ 1,50,000 ಲಕ್ಷ ರೂಗಳನ್ನು ಕೆಲಸದ ನಂತರ ಕೊಡಬೇಕೆಂದು ಬೇಡಿಕೆ ಇಟ್ಟಿರುತ್ತಾರೆ.

ಗುರುವಾರ ಮಧ್ಯಾಹ್ನ 1:30ರ ವೇಳೆ ಅಪಾಧಿತ ಬೇವಿನಮಟ್ಟಿ ಪಿಡಿಒ ಚಂದ್ರಕಾಂತ್ ಕೃಷ್ಣಪ್ಪ ತಿಮ್ಮಾಪುರ ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಆವರಣದಲ್ಲಿ ದೂರುದಾರ ವ್ಯಕ್ತಿಯಿಂದ ಒಂದು ಲಕ್ಷ ರೂ ಲಂಚದ ಹಣ ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿ ಸಾಕ್ಷಿ ಸಮೇತ ದಸ್ತಗಿರಿ ಮಾಡಿದ್ದಾರೆ.
ನ್ಯಾಯಮೂರ್ತಿ ಬಿಎಸ್ ಪಾಟೀಲ್ ಸೂಚನೆಯಂತೆ ಪೊಲೀಸ್ ಅಧೀಕ್ಷಕರಾದ ಅನಿತಾ ಹದ್ದಣ್ಣವರ್ ಮಾರ್ಗದರ್ಶನದಲ್ಲಿ ಬಾಗಲಕೋಟೆ ಲೋಕಾಯುಕ್ತ ಡಿಎಸ್ಪಿ ಪುಷ್ಪಲತಾ ಹಾಗೂ ಸಿಪಿಐ ಮಲ್ಲಪ್ಪ ಬಿದರಿ ನೇತೃತ್ವದ ತಂಡ ದಾಳಿ ನಡೆಸಿ ಪಿಡಿಒಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications