ಕ್ಷೇತ್ರದ ವಿಚಾರಕ್ಕೆ ಬಂದರೆ ಸುಮ್ಮನಿರಲ್ಲ: ಲಕ್ಷ್ಮೀ ಹೆಬ್ಬಾಳಕರ
ಬಾಗಲಕೋಟೆ, ಸೆಪ್ಟೆಂಬರ್.09: ನನ್ನ ಕ್ಷೇತ್ರದ ವಿಚಾರಕ್ಕೆ ಬಂದರೆ ನಾನು ಸುಮ್ಮನಿರುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಜಿಲ್ಲೆಯ ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದಿಂದ ರವಿವಾರ ಆಯೋಜಿಸಿದ್ದ ಬಸವಪಂಚಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಹಿಸುವುದಿಲ್ಲ ಎಂದರು.
ಅನ್ಯಾಯ ಮಾಡುವುದು ಎಷ್ಟು ಕೆಟ್ಟದೋ, ಅನ್ಯಾಯವನ್ನು ಸಹಿಸಿಕೊಳ್ಳುವುದು ಅಷ್ಟೇ ಕೆಟ್ಟದು ಎನ್ನುವ ಮೂಲಕ ಜಾರಕಿಹೊಳಿ ಸಹೋದರರು ಹಾಗೂ ತಮ್ಮ ನಡುವೆ ನಡೆದ ಘಟನೆ ಕುರಿತು ಪರೋಕ್ಷವಾಗಿ ತಿರುಗೇಟು ನೀಡಿದರು.

ಚುನಾವಣೆಗಳು ಎಂದರೆ ಯುದ್ದ ಎಂದು ತಿಳಿದುಕೊಳ್ಳುತ್ತೇನೆ. ಇತ್ತೀಚಿಗೆ ನಡೆದ ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಒಂದು ಕೆಟ್ಟ ಘಳಿಗೆ ಎಂದು ಮರೆತು ಬಿಡಿ ಎಂದು ಸಮಾಜಕ್ಕೆ ಮನವಿ ಮಾಡುತ್ತೇನೆ ಎಂದರು.
ಮಹಿಳಾ ಹಾಗೂ ಪಂಚಮಶಾಲಿ ಕೋಟಾದಡಿ ಲಕ್ಷ್ಮೀ ಹೆಬ್ಬಾಳಕರ್ ಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿರುವ ಕೂಡಲಸಂಗಮ ಪಂಚಮಸಾಲಿಪೀಠದ ಬಸವಜಯ ಮೃತ್ಯಂಜಯ ಸ್ವಾಮೀಜಿಯವರು ಲಕ್ಷ್ಮೀ ಹೆಬ್ಬಾಳಕರ ಮೇಲಿನ ದಬ್ಬಾಳಿಕೆ ಸಲ್ಲದು ಎಂದರು.












Click it and Unblock the Notifications