ಸಿದ್ದರಾಮಯ್ಯನವರ ಫಾರಿನ್ ಟೂರ್ ಸಮರ್ಥನೆ ಮಾಡಿಕೊಂಡ ಈಶ್ವರ್ ಖಂಡ್ರೆ

ಬಾಗಲಕೋಟೆ, ಆಗಸ್ಟ್.28: ಮಾಜಿ ಸಿಎಂ ಸಿದ್ದರಾಮಯ್ಯನವರ ಫಾರಿನ್ ಟೂರ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಿದ್ಧರಾಮಯ್ಯನವರ ಫಾರಿನ್ ಟೂರ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಸಿದ್ದರಾಮಯ್ಯನವರು ಹತ್ತರಿಂದ ಹನ್ನೆರಡು ದಿನ ಫಾರಿನ್ ಟೂರ್ ಹೋಗ್ತಾರೆ. ಏನಾಯ್ತು? ಬಂದ ಬಳಿಕ ಸಮನ್ವಯ ಸಮಿತಿ ಸಭೆ ನಡೆಸುತ್ತಾರೆ. ಎಲ್ಲಾ ವಿಚಾರಗಳು ಸಮನ್ವಯ ಸಮಿತಿಯಲ್ಲಿ ಬಗೆಹರಿಯುತ್ತವೆ ಎನ್ನುವ ಮೂಲಕ ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡಿದ್ದಾರೆ ಈಶ್ವರ್ ಖಂಡ್ರೆ.

ಬಾಗಲಕೋಟೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಸಣ್ಣಪುಟ್ಟ ವಿಚಾರಗಳು ಬರುತ್ತವೆ. ಎಲ್ಲಾ ಗೊಂದಲಗಳು ಸಮನ್ವಯ ಸಮಿತಿಯಲ್ಲಿ ಬಗೆಹರಿಯುತ್ತವೆ ಎಂದು ತಿಳಿಸಿದ್ದಾರೆ. ಆದರೆ ಇದು ಮತ್ತೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Ishwar Khandre justified Siddaramaiahs Foreign Tour

ಇನ್ನು ಸಾಲಮನ್ನಾ ವಿಚಾರ ಸಾಮಾಜಿಕ ದ್ರೋಹ ಎನ್ನುವ ನಿವೃತ್ತ ಲೋಕಾಯುಕ್ತ ನ್ಯಾಮೂರ್ತಿ ಸಂತೋಷ ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಯಿಸಿ ಅದು ಅವರ ವೈಯಕ್ತಿಕ ಹೇಳಿಕೆ ಎಂದರು.

ನಂತರ ಬಿಜೆಪಿ ಹಾಗೂ ಆರ್.ಎಸ್. ಎಸ್. ವಿರುದ್ಧ ವಾಗ್ದಾಳಿ ನಡೆಸಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರ್.ಎಸ್.ಎಸ್.ನವರ ಉಪನ್ಯಾಸದಲ್ಲಿ ಭಾಗವಹಿಸುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+